ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ
ಬೆಂಗಳೂರು, ನವೆಂಬರ್ 13: ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಜನಾರ್ದನ ರೆಡ್ಡಿ ಇನ್ನೂ ಒಂದು ದಿನ ಜೈಲುವಾಸ ಅನುಭವಿಸಲೇಬೇಕಾಗಿದೆ.
ನವೆಂಬರ್ 10ರಂದು ಶನಿವಾರ ಮಧ್ಯಾಹ್ನದಿಂದ ಭಾನುವಾರದವರೆಗೂ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ಅಂತಿಮವಾಗಿ ಜನಾರ್ದನ ರೆಡ್ಡಿಯನ್ನು ಭಾನುವಾರ ನವೆಂಬರ್ 11ರಂದು 24 ದಿನಗಳ ನ್ಯಾಯಾಂಗಬಂಧನಕ್ಕೆ ಒಳಪಡಿಸಿದ್ದರು.
ನವೆಂಬರ್ 12ರಂದು ಸೋಮವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಕಿತ್ತು ಆದರೆ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದಿಂದಾಗಿ ಕೋರ್ಟ್ ಗಳು ಬಾಗಿಲು ಹಾಕಿದ್ದವು ಹಾಗಾಗಿ ಮಂಗಳವಾರ ಜನಾರ್ದನ ರೆಡ್ಡಿ ಪರ ವಕೀಲ ಒಂದನೇ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯವು ಬುಧವಾರ ಜಾಮೀನು ಕುರಿತ ಆದೇಶ ನೀಡುವುದಾಗಿ ಬುಧವಾರಕ್ಕೆ ವಿಚಾರಣೆ ಮುಂದೂಡಿತು.

ಆಂಬಿಡೆಂಟ್ ಹಗರಣದಲ್ಲಿ ಕೈ ಬದಲಾವಣೆ ಆಗಿರುವ ಅರ್ಧ ಕ್ವಿಂಟಾಲ್ ಚಿನ್ನದ ಗಟ್ಟಿ ರೆಡ್ಡಿ ಅವರ ಕೈಗೆ ಹೋಗಿದ್ದು ಇದರಿಂದ ಅದು ಬೇರೆ ಕಡೆ ತಲುಪಿರಬಹುದು ಅಥವಾ ಚಿನ್ನ ಕರಗಿಸಿ ಬೇರೆ ಆಸ್ತಿಯಾಗಿ ಮಾರ್ಪಾಟು ಮಾಡಿರಬಹುದು ಎನ್ನುವ ಶಂಕೆಯನ್ನು ಸಿಸಿಬಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ನವೆಂಬರ್ 24ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗುತ್ತಿದೆ. ಇಂದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಒಂದನೇ ಸೆಷನ್ಸ್ ಕೋರ್ಟ್ ಆದೇಶವನ್ನು ಬುಧವಾರಕ್ಕೆ ಮುಂದೂಡಿದೆ.

ಅನಂತ ಕುಮಾರ್ ನಿಧನ: ರೆಡ್ಡಿಗೆ ಜಾಮೀನು ಸಿಕ್ಕಿರಲಿಲ್ಲ
ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ನವೆಂಬರ್ 11ರಿಂದ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು, ರೆಡ್ಡಿ ಪರ ವಕೀಲರು ಸೋಮವಾರವೇ ಜಾಮೀನಿಗೆ ಅರ್ಜಿ ಸಲಲ್ಇಸಲು ಮುಂದಾಗಿದ್ದರೂ ಕೂಡ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದಿಂದಾಗಿ ಕೋರ್ಟ್ ಗಳು ಕಾರ್ಯ ನಿರ್ವಹಿಸಿರಲಿಲ್ಲ. ನವೆಂಬರ್ 13ರಂದು ಬೆಳಗ್ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದರೂ ಕೂಡ ಒಂದನೇ ಎಸಿಸಿಎಂಎಂ ಕೋರ್ಟ್ ಜಾಮೀನು ಆದೇಶವನ್ನು ನವೆಂಬರ್ 14ಕ್ಕೆ ಮುಂದೂಡಿತು.

ಜನಾರ್ದನ ರೆಡ್ಡಿ ಈಗ ಖೈದಿ ನಂಬರ್ 10902
ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಅವರಿಗೆ ಖೈದಿ ನಂಬರ್ 10902 ನೀಡಲಾಗಿದೆ. ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇಡಿ ಯಲ್ಲಿದ್ದ ಕೇಸನ್ನು ಆರೋಪಿಗಳ ಪರ ಮಾಡಿಕೊಡುತ್ತೇನೆ ಎಂದು ಹೇಳಿ ರೆಡ್ಡಿ ಅವರು ಆರೋಪಿಗಳಿಂದ 20 ಕೋಟಿ ಲಂಚ ಪಡೆದಿದ್ದಾರೆ ಎಂದು ಹೇಳಿ ಅವರನ್ನು ಬಂಧಿಸಲಾಗಿತ್ತು.

ಜನಾರ್ದನ ರೆಡ್ಡಿ ಬಂಧನವಾಗಿದ್ದು ಯಾವಾಗ?
ಆಂಬಿಡೆಂಟ್ ಕಂಪನಿ ಚಿಟ್ ಫಂಡ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿಯ ಹುಡುಕಾಟ ಆರಂಭಿಸಿದಂತೆ ಅವರು ನಾಲ್ಕು ದಿನಗಳ ಕಾಲ ಯಾರಿಗೂ ಕಾಣದಂತೆ ಮರೆಯಲ್ಲಿದ್ದರು. ಬಳಿಕ ಒಂದು ವಿಡಿಯೋವನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕಳುಹಿಸಿದರು ಅದರಲ್ಲಿ ನಾನು ಎಲ್ಲಿಯೂ ಓಡಿಹೋಗಿಲ್ಲ ಬೆಂಗಳೂರಿನಲ್ಲೇ ಇದ್ದೇನೆ ಎನ್ನುವ ಮಾತುಗಳ ಜತೆಗೆ ಸಿಸಿಬಿ ಕಚೇರಿಗೆ ವಿಚಾರಣೆಗೆಂದು ತೆರಳಲಿದ್ದೇನೆ ಎನ್ನುವ ಮಾತುಗಳಿದ್ದವು. ಬಳಿಕ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಪೊಲೀಸರು ವಿಚಾರಣೆ ನಡೆಸಿ ಅಂದು ರಾತ್ರಿ ಸಿಸಿಬಿ ಕಚೇರಿಯಲ್ಲೇ ಇಟ್ಟುಕೊಂಡು ಮರುದಿನ ನ್ಯಾಯಾಂಗ ಬಂಧನಕ್ಕೆ ಒಳಡಪಸಿದ್ದರು.

ಅಲಿಖಾನ್ ಕೂಡ ಬಂಧನ
ಜನಾರ್ದನ ರೆಡ್ಡಿ ಮಾತ್ರವಲ್ಲ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿದ್ದ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರನ್ನೂ ಸಿಸಿಬಿಯು ಬಂಧಿಸಿದೆ. ಇತರೆ ಆರೋಪಿಗಳನ್ನು ಬಂಧಿಸಲಾಗುವುದು ಎನ್ನಲಾಗಿದೆ.












Click it and Unblock the Notifications