• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮಲಿಂಗಾರೆಡ್ಡಿಯೂ ಫರೀದ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ

|

ಬೆಂಗಳೂರು, ನವೆಂಬರ್ 10: ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಜತೆಗಿನ ಫೋಟೊಗಳನ್ನೇ ಆಧರಿಸಿ ತನ್ನ ವಿರುದ್ಧ ಆಪಾದನೆ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೊಬ್ಬ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರೂ ಆಂಬಿಡೆಂಟ್ ಮಾಲೀಕ ಫರೀದ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೇವಲ ಫೋಟೊ ತೆಗೆಸಿಕೊಂಡಾಕ್ಷಣ ತಾವು ಫರೀದ್ ಜೊತೆ ಯಾವುದೇ ಅಕ್ರಮ ನಡೆಸಿಲ್ಲ ಎಂದು ಸಮರ್ಥಿಸಿಕೊಳ್ಳಲು ಜನಾರ್ದನ ರೆಡ್ಡಿ ಮುಂದಾಗಿದ್ದಾರೆ. ಸಿಸಿಬಿ ಕಚೇರಿಗೆ ವಿಚಾರಣೆಗೆಂದು ಆಗಮಿಸಿದ ವೇಳೆ ಮಾದ್ಯಮದವರಿಗೆ ಈ ವಿಚಾರ ತಿಳಿಸಿದರು.

ಆಂಬಿಡೆಂಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

ಸತತ ನಾಲ್ಕು ದಿನಗಳ ಬಳಿಕ ಸಿಸಿಬಿ ಪೊಲೀಸರ ಎದುರು ಶನಿವಾರ ಮಧ್ಯಾಹ್ನ 4 ಗಂಟೆ ವೇಳೆಗೆ ವಿಚಾರಣೆಗೆ ಹಾಜರಾದ ಜನಾರ್ದನ ರೆಡ್ಡಿ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕೇವಲ ಫೋಟೊ ಆಧರಿಸಿ ತಮ್ಮ ಮೇಲೆ ಪ್ರಕರಣ ದಾಖಲಿಸುವುದಾದರೆ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಜೊತೆಗಿನ ಫೋಟೊಗಳು ಇವೆ ಅವರಿಗೊಂದು ನ್ಯಾಯ ನನಗೊಂದು ನ್ಯಾಯ ಸರಿಯೇ ನನ್ನ ವಿರುದ್ಧ ರಾಜ್ಯ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ. ನಾನು ಯಾವುದೇ ಅಪರಾಧವೆಸಗಿಲ್ಲ ಎಂದು ಜನಾರ್ದನ ರೆಡ್ಡಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

English summary
Former minister Janardhana reddy has claimes that be with the pictures of someone is not an offense since former minister Ramalingareddy has also took pictures with Fareed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X