Darshan Thoogudeepa: ಚಿತ್ರದುರ್ಗದಿಂದ ಬೆಂಗಳೂರಿನವರೆಗೂ ದರ್ಶನ್ ಗ್ಯಾಂಗ್ ಏನೆಲ್ಲಾ ಮಾಡ್ತು?-ಇಲ್ಲಿದೆ ಇಂಚಿಂಚು ಮಾಹಿತಿ
Darshan Thoogudeepa: ರೇಣುಕಾಸ್ವಾಮಿ ಪ್ರಕರಣ ದಿನಕ್ಕೊಂದು ಹೊಸ ತಿರುವುಪಡೆದುಕೊಳ್ಳುತ್ತಲೇ ಇದೆ. ಇನ್ನು ಸಿನಿಮಾ ಶೈಲಿಯಲ್ಲಿ ನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆ ತಂದಿದ್ದೇದೆ. ಎಷ್ಟು ಗಂಟೆಗೆ ಎಲ್ಲಿ ಬಂದರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ದರ್ಶನ್ ಗ್ಯಾಂಗ್ ನಡೆಸಿದ ಪ್ರತಿಯೊಂದು ಚಟುವಟಿಕೆಗೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷ್ಯವಾಗಿ ಪರಿಗಣನೆ ಆಗಲಿದೆ. ಹಾಗಾದರೆ ಯಾವ್ಯಾವಾಗ ಏನೆಲ್ಲ ಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಜೂನ್ 8ರ ಬೆಳಗ್ಗೆ 9:48ರ ವೇಳೆಗೆ ಸ್ಕೂಟಿಯಲ್ಲಿ ಕೆಲಸಕ್ಕೆ ರೇಣುಕಾಸ್ವಾಮಿ ತೆರಳಿದ್ದು, ಈ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಮತ್ತು ಇತರರು ಅವರನ್ನು ಹಿಂಬಾಲಿಸಿದ್ದಾರೆ. ಚಳ್ಳಕೆರೆ ಗೇಟ್ ಕಡೆಯಿಂದ ಅಪೊಲೋದತ್ತ ತೆರಳುತ್ತಿದ್ದಾಗ ರೇಣುಕಾಸ್ವಾಮಿ ಅವರನ್ನು ದರ್ಶನ್ ಗ್ಯಾಂಗ್ ನಂಬಿಸಿದೆ. ಬಳಿ ಆಟೋದಲ್ಲಿ ಕೂರಿಸಿಕೊಂಡು ಕುಂಚಿಗನಾಳ್ ಬಳಿ ಕಾರ್‌ಗೆ ಶಿಫ್ಟ್ ಮಾಡುವ ಮೂಲಕ ರೇಣುಕಾಸ್ವಾಮಿ ಅವರನ್ನು ಅಪಹರಣ ಮಾಡಿದ್ದಾರೆ.
ಬಾಡಿಗೆಗೆಂದು ಹೇಳಿ ತಂದಿದ್ದ ರವಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಅಂದು ಬೆಳಗ್ಗೆ 11:56ರ ಸುಮಾರಿಗೆ ಕಾರು ಹತ್ತಿಸಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ರೇಣುಕಾಸ್ವಾಮಿಯನ್ನು "ಡಿ" ಗ್ಯಾಂಗ್ ಯಾಮಾರಿಸಿದ್ದೇಗೆ?
* ಜೂನ್ 8ರ ಬೆಳಗ್ಗೆ 9:48ಕ್ಕೆ ಚಿತ್ರದುರ್ಗ ಹೆದ್ದಾರಿಯ ರಸ್ತೆಯಲ್ಲಿ ರೇಣುಕಾಸ್ವಾಮಿ ಬರುತ್ತಿದ್ದರು.
* ಜೂನ್ 8ರ ಬೆಳಗ್ಗೆ 10:33ಕ್ಕೆ ರೇಣುಕಾಸ್ವಾಮಿಯನ್ನು ಆಟೋದಲ್ಲಿ ಕರೆದೊಯ್ದ ಆರೋಪಿಗಳು.
* ಜೂನ್ 8ರ ಬೆಳಗ್ಗೆ 10:56ಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರು ಕಡೆಗೆ ಕಾರಿನಲ್ಲಿ ಕರೆದೊಯ್ದ ಜಗ್ಗ, ರಾಘು, ಅನು.
* ಜೂನ್ 8ರ ಮಧ್ಯಾಹ್ನ 1:15ಕ್ಕೆ ತುಮಕೂರಿಗೆ ಆಗಮಮಿಸಿ ಹೊಟ್ಟೆ ಹಸಿವು ಎಂದು ಆಹಾರ ಸೇವಿಸಿದ ಆರೋಪಿಗಳು.
* ಜೂನ್ 8ರ ಮಧ್ಯಾಹ್ನ 2:30ಕ್ಕೆ ಆರ್.ಆರ್.ನಗರ ಶೆಡ್‌ಗೆ ಕಾರು ಬಂದಿದ್ದು, ಮಧ್ಯಾಹ್ನ 3:30ಕ್ಕೆ ಶೆಡ್‌ಗೆ ನಟ ದರ್ಶನ್ ಆಗಮಿಸಿದ್ದಾರೆ.
* ಜೂನ್ 8ರ ಮಧ್ಯಾಹ್ನ 3:45ಕ್ಕೆ ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
* ಜೂನ್ 8ರ ಸಂಜೆ 6ಕ್ಕೆ ರೇಣುಕಾಸ್ವಾಮಿ ತೀವ್ರ ಅಸ್ವಸ್ಥರಾಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
* ಜೂನ್ 8ರ ರಾತ್ರಿ 8ಕ್ಕೆ ರೇಣುಕಾಸ್ವಾಮಿ ಶವ ಸಾಗಾಟಕ್ಕೆ ಯತ್ನ ನಡೆಸಿದ್ದು, ಈ ವೇಳೆ ಶವ ಸಾಗಾಟಕ್ಕೆ ಎ8 ಆರೋಪಿ ರವಿ ಒಪ್ಪಿಲ್ಲ.
* ಜೂನ್ 9ರ ಬೆಳಗ್ಗೆ 3:35ಕ್ಕೆ ಶೆಡ್‌ನಿಂದ ರೇಣುಕಾಸ್ವಾಮಿ ಶವ ಸಾಗಾಟ ನಡೆಸಿದ್ದಾರೆ ಎನ್ನಲಾಗಿದೆ.
* ಜೂನ್ 9ರ ಮುಂಜಾನೆ 3:45ಕ್ಕೆ ಸುಮ್ಮನಹಳ್ಳಿ ಬಳಿ ಆರೋಪಿಗಳು ರೇಣುಕಾಸ್ವಾಮಿ ಅವರ ಶವವನ್ನು ಎಸೆದಿದ್ದಾರೆ ಎಸೆದಿದ್ದಾರೆ ಎನ್ನಲಾಗಿದೆ.
ಇನ್ನು ಜೂನ್ 2ರಂದು ರೇಣುಕಾಸ್ವಾಮಿ ಅಪೊಲೋ ಫಾರ್ಮಸಿಯಿಂದ ಹೊರಬಂದು ಮಾತಾಡಿದ್ದು, ಮಧ್ಯಾಹ್ನ 2:15ರಿಂದ 2:40ರವರೆಗೆ ಸ್ಕೂಟಿಯಲ್ಲಿ ಕುಳಿತುಕೊಂಡೇ ಫೋನ್‌ನಲ್ಲಿ ಮಾತಾಡಿದ್ದರು. ಫೋನ್ ಕರೆ ಬಳಿಕ ರೇಣುಕಾಸ್ವಾಮಿ ತುಂಬಾ ವಿಚಲಿತನಾಗಿದ್ದು, ಫೋನಿನಲ್ಲಿ ಮಾತನಾಡುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications