Bengaluru: ಬಡವರಿಗೆ ಇಲ್ಲ RCB ಪಂದ್ಯ ನೋಡುವ ಭಾಗ್ಯ, ಟಿಕೆಟ್ ವಿಚಾರವಾಗಿ ಅಭಿಮಾನಿಗಳ ಆಕ್ರೋಶ
ಬೆಂಗಳೂರು ಮೇ 19: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಭಾನುವಾರ (ಮೇ 21) ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಅಂದು ಪಂದ್ಯ ಕಣ್ತುಂಬಿಕೊಳ್ಳಬೇಕು ಎಂದುಕೊಂಡ ಆರ್‌ಸಿಬಿ ಅಭಿಮಾನಿಗಳಿಗೆ ಶುಕ್ರವಾರ ಟಿಕೆಟ್ ಸಿಗದೇ ನಿರಾಸೆಯಾಗಿದೆ. ಸ್ಟೇಡಿಯಂ ಮುಂದೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಂಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಮಧ್ಯ ರೋಚಕ ಪಂದ್ಯ ನಡೆಯಲಿದೆ. ಶನಿವಾರ ಸಂಜೆ 7.30ಗಂಟೆಗೆ ಪಂದ್ಯ ನಿಗದಿಯಾಗಿದೆ. ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಸೇರಿದಂತೆ ಇನ್ನಿತರ ಸದಸ್ಯರನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಸಾವಿರಾರು ಜನ ಕಾತರರಾಗಿದ್ದಾರೆ.

ನೆಚ್ಚಿನ RCB ತಂಡದ ಕ್ರಿಕೆಟ್ ಆಟ ನೋಡಲು ಬೆಂಗಳೂರಿನಲ್ಲಿ ಅಭಿಮಾನಿಗಳು ಗುರುವಾರ ಮಧ್ಯಾಹ್ನದಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂದಿದೆ. ಆದರೆ ಸಮರ್ಪಕವಾಗಿ ಟಿಕೆಟ್ ಮಾರಾಟ ಮಾಡದ ಸ್ಟೇಡಿಯಂ ಆಡಳಿತ ಮಂಡಳಿ ಕೇವಲ 150 ಟಿಕೆಟ್ ಗಳನ್ನು ಮಾತ್ರ ಮಾರಾಟ ಮಾಡಿದೆ. ಇದರಿಂದ ಬಡವರು ನೆಚ್ಚಿನ ಆರ್‌ಸಿಬಿ ಮ್ಯಾಚ್ ನೋಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕ್ರೀಡಾಂಗಣ ಮುಂದೆ ನಿಂತು ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದರು.
Current Situation in Bangalore for the last match of RCB vs GT at ticket counter.
— Akshat (@AkshatOM10) May 19, 2023
Virat Kohli's boys have just one task now. 🫶 pic.twitter.com/syvxoSYwQH
ಹೆಚ್ಚಿನ ಹಣಕ್ಕೆ ಟಿಕೆಟ್ ಮಾರಾಟ: ಅಭಿಮಾನಿಗಳ ಆರೋಪ
ಭಾನುವಾರ ನಡೆಯಬೇಕಿರುವ ಪಂದ್ಯಾವಳಿಗೆ 48ಗಂಟೆಗಳು ಮಾತ್ರವೇ ಬಾಕಿ ಇದೆ. ಮೂಲಗಳ ಪ್ರಕಾರ ಸುಮಾರು ಎರಡರಿಂದ ಮೂರು ಸಾವಿರ ಟಿಕೆಟ್ ಗಳು ಮಾರಾಟವಾಗುತ್ತದೆ. ಈ ಸಾಮಾನ್ಯ ಟಿಕೆಟ್ ಗಳ ಶುಲ್ಕ 1200 ರೂಪಾಯಿ ಎನ್ನಲಾಗಿದೆ. ಅಷ್ಟು ಹಣ ನೀಡಿ ಟಿಕೆಟ್ ಖರೀದಿಸಿ ಮ್ಯಾಚ್ ನೋಡಲು ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಆದರೆ ಅಕ್ರಮವಾಗಿ ಮೊದಲೇ ಟಿಕೆಟ್ ಮಾರಾಟ ಮಾಡಿದ್ದರಿಂದ ಕೇವಲ 150 ಸಾಮಾನ್ಯ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಆರೋಪಿಸಿದ್ದಾರೆ. ಸ್ಟೇಡಿಯಂ ಆಡಳಿತ ಮಂಡಳಿಯ ನಡೆ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಟೇಡಿಯಂ ಮುಂದೆ ಶುಕ್ರವಾರ ಕೆಲ ಹೊತ್ತು ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಹೆಚ್ಚುವರಿ ಕಬ್ಬನ್ ಪಾರ್ಕ್ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications