Get Updates
Get notified of breaking news, exclusive insights, and must-see stories!

6,50,00,000 ಕನ್ನಡಿಗರ ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಲೇಬೇಕು...RCB Stampede Tragedy

ಬೆಂಗಳೂರು, ಜೂನ್ 05: 18 ವರ್ಷದ ಬಳಿಕ IPL 2025 ಕಪ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆದ್ದ ಖುಷಿಯನ್ನು ಈ ಕಾಲ್ತುಳಿತ ದುರಂತ, ಸಾವು ಇಲ್ಲವಾಗಿಸಿತು. ಈ ಅನಿರೀಕ್ಷಿತ ಘಟನೆಗೆ ನಾಡಿನ ಜನತೆ ಕಂಬನಿ ಮಿಡಿದಿದೆ. ಮನೆ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳು ಮಮ್ಮಲ ಮರಗುತ್ತಿವೆ. ಹಾಗಾದರೆ ಇದಕ್ಕೆ ಕಾರಣ ಯಾರು?, ಕೇವಲ 24 ಗಂಟೆಗಳ ಅಂತರದಲ್ಲೇ ಬೆಂಗಳೂರಿನ ಎರಡು ಕಡೆ ಸಂಭ್ರಮಾಚರಣೆ ಬೇಕಿತ್ತೇ?, ಯಾರ ಖುಷಿಗೆ ವಿಧಾನಸೌಧ ಮುಂದೆ ಸನ್ಮಾನ ಕಾರ್ಯಕ್ರಮ? ಇಂತಹ 6.5 ಕೋಟಿ ಕನ್ನಡಿಗರ ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹ ಕೇಳಿ ಬಂದಿದೆ.

ಕರ್ನಾಟಕ ರಾಜ್ಯ ಸರ್ಕಾರ ಆರ್‌ಸಿಬಿ ಕಪ್ ಗೆದ್ದ ಒಂದೇ ದಿನದ ಹೊತ್ತಿನಲ್ಲೇ ಬೆಂಗಳೂರಿನ ಹೃದಯಭಾಗದಲ್ಲಿ ಎರಡು ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಬಿಜೆಪಿ ನಾಯಕ ಆರೋಪದ ಪ್ರಕಾರ, ಪೊಲೀಸರು ಈ ಬಗ್ಗೆ ಸೂಚನೆ ನೀಡಿದ್ದರೂ ಕೇಳದೇ ಕಾರ್ಯಕ್ರಮ ಆಯೋಜಿಸಿದ್ದರಿಂದ, ಪೂರ್ವ ತಯಾರಿ ಇಲ್ಲದ್ದರಿಂದ ಇಂಥ ಘಟನೆ ನಡೆದಿದೆ. ಬಡವರ ಮಕ್ಕಳ ಸಾವಾಗಿದೆ ಎಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿ ಬಿಜೆಪಿ ಚಿಕ್ಕ ಬಳ್ಳಾಪುರ ಬಿಜೆಪಿ ಸಂಸದ ಡಾ.ಸುಧಾಕರ್ ಅವರು ಆರೂವರೆ ಕೋಟಿ ಕನ್ನಡಿಗರನ್ನು ಕಾಡುತ್ತಿರುವ ಈ ಗಂಭೀರ ಪ್ರಶ್ನೆಗಳಿಗೆ ಉತ್ತಿರಿಸುವಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅವರು ನೀಡಿದ ಸರಣಿ ಪ್ರಶ್ನೆಗಳ ಪಟ್ಟಿ ಇಲ್ಲಿದೆ.

RCB Victory Turns Tragic MP Dr Sudhakar Raises Questions to Karnataka Government

ಸಂಸದರ ನೀಡಿದ ಪ್ರಶ್ನೆಗಳ ಪಟ್ಟಿ

* ಅಸಲಿಗೆ ಈ IPL 2025 ವಿಜಯೋತ್ಸವದ ಐಡಿಯಾ ಯಾರದ್ದು?

* ಬುಧವಾರವೇ ಅದನ್ನ ಆಚರಿಸಬೇಕು ಎನ್ನುವ ನಿರ್ಧಾರ ಯಾರು ಕೈಗೊಂಡರು?

* ಜನಸಂದಣಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಲಿಲ್ಲವೇ? ಅಥವಾ ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತಾ?

* ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎನ್ನುವುದು ಯಾರ ನಿರ್ಧಾರ?

* ವಿಧಾನಸೌಧದ ಮುಂದೆ ಕಾರ್ಯಕ್ರಮ ಬೇಡ ಎಂದು ಪೊಲೀಸರು ಸಲಹೆ/ ಎಚ್ಚರಿಕೆ ನೀಡಿದ್ದರು ಎನ್ನುವುದು ನಿಜವೇ?

* ಪೊಲೀಸರು ಸಲಹೆ ನೀಡಿದ್ದರು ಎನ್ನುವುದಾದರೆ, ಅವರ ಎಚ್ಚರಿಕೆಯನ್ನು ಮೀರಿ ಕಾರ್ಯಕ್ರಮ ಆಯೋಜನೆಗೆ ಮುಂದಾಗುವ ನಿರ್ಧಾರ ಕೈಗೊಂಡಿದ್ಯಾರು?

* ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವೇಶ ಉಚಿತವಾಗಿರಬೇಕೋ ಅಥವಾ ಪಾಸ್/ಟಿಕೆಟ್ ಇರಬೇಕೋ ಎಂದು ನಿರ್ಧಾರ ಮಾಡಿದ್ದು ಯಾರು?

* ಸರ್ಕಾರದ ಸೂಚನೆ ಇಲ್ಲದೆಯೇ ಆರ್ ಸಿಬಿ ತಂಡದ ಅಧಿಕೃತ X ಖಾತೆಯಲ್ಲಿ ವಿಕ್ಟರಿ ಪರೇಡ್ ಬಗ್ಗೆ ಪೋಸ್ಟ್ ಮಾಡಲಾಯಿತೇ?

* ಬೆಳಗ್ಗೆಯೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶ ನೀಡಿ ಗೇಟುಗಳ ಬಳಿ ಭದ್ರತೆ ವ್ಯವಸ್ಥೆ ಮಾಡಿದ್ದರೆ ಬಹುಶಃ ಈ ಅನಾಹುತ ಆಗುತ್ತಿರಲಿಲ್ಲ. ಆದರೆ ಸಂಜೆಯವರೆಗೂ ಗೇಟ್ ಯಾಕೆ ತೆರೆಯಲಿಲ್ಲ?

* ಆರ್ ಸಿಬಿ ತಂಡದ ಜನಪ್ರಿಯತೆ, ಐಪಿಎಲ್ ಗೆದ್ದ ನಂತರ ಮಂಗಳವಾರ ನಗರದಾದ್ಯಂತ ಇದ್ದ ಸಂಭ್ರಮದ ವಾತಾವರಣ ಇವೆಲ್ಲವನ್ನೂ ನೋಡಿದ ಮೇಲೆಯೂ ಕೇವಲ 35,000 ದಿಂದ 40,000 ಜನ ಸೇರಬಹುದು ಎಂದು ಅಂದಾಜು ಮಾಡಿದ್ದು ಯಾರು?

* ಜನಸಂದಣಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಲಿಲ್ಲವೇ? ಅಥವಾ ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತಾ?

ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ಅನೇಕ ಸಚಿವರು ಹೇಳಿದ್ದಾರೆ. ಅಂದಾಜು ಮಾಡಿಲ್ಲದ ಮೇಲೆ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳದ್ದಾಗ "ಎಲ್ಲರೂ ಸಂಭ್ರಮಾಚರಣೆಯಲ್ಲಿ ಭಾಗಿಗಳಾಗಿ" ಎಂದು ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬಹಿರಂಗ ಆಹ್ವಾನ ನೀಡಿದ್ದು ಯಾಕೆ?

* ಜನಸಂದಣಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಲಿಲ್ಲವೇ? ಅಥವಾ ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತಾ?

* ವಿಮಾನ ನಿಲ್ದಾಣ, ವಿಧಾನಸೌಧ, ಕ್ರೀಡಾಂಗಣ ಹೀಗೆ ಎಲ್ಲ ಕಡೆಗಳಲ್ಲೂ ಪೊಲೀಸರ ನಿಯೋಜನೆ ಅವಶ್ಯಕತೆ ಇತ್ತು. ಹಾಗಾದರೆ ಹೊರ ಜಿಲ್ಲೆಗಳಿಂದ ಪೊಲೀಸರನ್ನು ಯಾಕೆ ಕರೆಸಿಕೊಳ್ಳಲಿಲ್ಲ?

* ಎಷ್ಟು KSRP ತುಕಡಿಗಳನ್ನು ನಿಯೋಜಿಸಲಾಗಿತ್ತು? ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗಳನ್ನು ಅಗತ್ಯ ಪ್ರಮಾಣದಲ್ಲಿ ಯಾಕೆ ನಿಯೋಜನೆ ಮಾಡಲಿಲ್ಲ?

* ವಿಮಾನ ನಿಲ್ದಾಣದಿಂದ ಕ್ರೀಡಾಂಗಣದವರೆಗೆ ಒಂದು ರೋಡ್ ಶೋ ಏರ್ಪಾಟು ಮಾಡಿದಿದ್ದರೆ ಜನರು ತಾವು ಇದ್ದಲ್ಲಿಯೇ ಆಟಗಾರರನ್ನು ನೋಡುವ ಅವಕಾಶ ಇರುತ್ತಿತ್ತು. ಆಗ ಇದ್ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ. ಈ ಸಲಹೆಯನ್ನು ಯಾವ ಪೊಲೀಸ್ ಅಧಿಕಾರಿಯೂ ನೀಡಿರಲಿಲ್ಲವಾ? ಅಥವಾ ನೀಡಿದ್ದರೂ ನಿರ್ಲಕ್ಷ್ಯ ಮಾಡಲಾಯಿತಾ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ಅಮಾಯಕ ಯುವಕರ ಸಾವುಗಳಿಗೆ ನ್ಯಾಯ ಸಿಗಬೇಕಾದರೆ, ಹೆತ್ತವರ ಆಕ್ರಂದನಕ್ಕೆ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+