RCB vs PBKS: ಆರ್‌ಸಿಬಿ ಕಪ್ ಗೆಲ್ಲಲೇಬೇಕು, ಫ್ಯಾನ್ಸ್ ದೇವರ ಮೊರೆ! ಬೆಂಗಳೂರಲ್ಲಿ 1 ವಾರ ಭಾರೀ ಸೆಲೆಬ್ರೇಷನ್...
IPL Final Match 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹೆಸರೇ ಹೇಳುವಂತೆ ಈ ಟೀಂಗೆ ಬೆಂಗಳೂರು ಸೇರಿದಂತೆ ಕರ್ನಾಟಕದ್ಯಂತ ಹಾಗೂ ದೇಶದಲ್ಲಿ ಕೋಟಿಗಟ್ಟಲೇ ಅಭಿಮಾನಳು ಇದ್ದಾರೆ. ಇಂದು RCB vs PBKS ಅಂತಿಮ ಪಂದ್ಯ ಗುಜರಾತ್‌ನಲ್ಲಿ ನಡೆಯಲಿದೆ. ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಹಬ್ಬ ಎನ್ನಲಾಗಿದೆ. ಆರ್‌ಬಿಸಿ ಕಪ್ ಗೆಲ್ಲಬೇಕೆಂದು ಗಣೇಶ, ಮಹಾಕಾಳಿ, ಶಿವ ಹೀಗೆ ನಾನಾ ದೇವರುಗಳ ಮುಂದೆ ಅಭಿಮಾನಿಗಲು ಮಂಡಿಯೂರಿದ್ದಾರೆ.
ಬೆಂಗಳೂರು, ಕರ್ನಾಟಕ ಸೇರಿದಂತೆ ರಾಜ್ಯ ಹಾಗೂ ದೇಶದ ಬೇರೆ ಬೇರೆ ಕಡೆಗಳಲ್ಲಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಈ ವರ್ಷ ಕಪ್ ಗೆಲ್ಲಲೇಬೇಕೆಂದು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ದೇವರಲ್ಲಿ ವಿನಮ್ರ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆರ್‌ಸಿಬಿ ಕಪ್ ಗೆದ್ದರೆ ಬೆಂಗಳೂರಿನಲ್ಲಿ ಒಂದು ವಾರ ಹಬ್ಬದಾಚರಣೆಗೆ ಅಭಿಮಾನಿಗಳು ಮುಂದಾಗಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಕೆಂಪು ಟೀ ಶರ್ಟ್‌ಗಳು ಬೆಂಗಳೂರಿನಲ್ಲಿ ಅಭಿಮಾನಿಗಳು ಧರಿಸಿ ರಾರಾಜಿಸಲಿದ್ದಾರೆ. ಅಷ್ಟರ ಮಟ್ಟಿಗಿನ ಕ್ರೇಜ್ ಆರ್‌ಸಿಬಿಯದ್ದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪರ ದೇವರ ಮೊರೆ ಹೋಗುತ್ತಿರುವ, ವಿಶೇಷ ಪೂಜೆ, ಪುನಸ್ಕಾರ ಮಾಡುತ್ತಿರುವ ಅಭಿಮಾನಿಗಳ ಪೊಟೋ, ವಿಡಿಯೋ ವೈರಲ್ ಆಗುತ್ತಿವೆ. ಆರ್‌ಸಿಬಿ ಗೆಲ್ಲಬೇಕು ಎಂಬುದರ ಮಟ್ಟಿಗೆ ರಾಜ್ಯ ಹಾಗೂ ದೇಶದಲ್ಲಿ ಹಿಂದೆಂದು ಕಂಡು ಕೇಳರಿಯದಂತೆ ಘಟನೆಗಳು ನಡೆಯುತ್ತಿವೆ. ಆರ್‌ಸಿಬಿ ಜೆರ್ಸಿ ಮೇಲೆ ಮತ್ತೊಬ್ಬರು ಗಣೇಶ್ ವಿಗ್ರಹ ವಿಟ್ಟು ಕಪ್ ಗೆಲ್ಲಬೇಕೆಂದು ಪ್ರಾರ್ಥಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೇ ಆರ್‌ಸಿಬಿ ಜೆರ್ಸಿ ಸಮೇತ ನದಿ ಸ್ನಾನ್ ಮಾಡಿ, ಟೀ ಶರ್ಟ್ ದೇವರ ಬಳಿ ಇಟ್ಟು ಪೂಜೆ ನೆರವೇರಿಸಿದ್ದಾರೆ. ವಿರಾಟ್ ಕೊಹ್ಲಿ ಪೋಟೋಗೂ ಪೂಜೆ ಮಾಡಿಸಿದ್ದಾರೆ. ಅಯೋಧ್ಯ ಶ್ರೀರಾಮ ಮಂದಿರದಲ್ಲೂ ಅಭಿಮಾನಿಗಳು ಆರ್‌ಸಿಬಿ ಕಪ್ ಗೆಲ್ಲಬೇಕೆಂದು ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ಧಾರೆ.
ಬೆಂಗಳೂರಲ್ಲಿ ಒಂದು ವಾರ ಸೆಲೆಬ್ರೇಷನ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ IPL 2025 ಕಪ್ ಗೆದ್ದರೆ ಒಂದು ವಾರ ಸೆಲೆಬ್ರೇಷನ್‌ಗೆ ಫ್ಯಾನ್ಸ್ ಸಿದ್ಧವಾಗಿದ್ದಾರೆ. ಈಗಾಗಲೇ ಅವರೇದ್ದೆ ಆದ ರೀತಿಯಲ್ಲಿ ಪಂದ್ಯಾವಳಿ ದಿನ ಅಂದರೆ ಇಂದು (ಜೂನ್ 3) ಕೆಲವೆಡೆ ಉಚಿತ ಚಾಟ್ಸ್ ನೀಡುತ್ತಿದ್ದಾರೆ. ಬಿರಿಯಾನಿ, ಪಾನಿಪುರಿಗಳನ್ನು ರಿಯಾಯಿತಿ ದರಕ್ಕೆ ನೀಡುವ ಮೂಲಕ ಆರ್‌ಸಿಬಿ ಕಪ್ ಗೆಲ್ಲುವಂತೆ ದೇವರಲ್ಲಿ ಕೇಳಿಕೊಳ್ಳುವಂತೆ ಫ್ಯಾನ್ಸ್ ಹಾಗೂ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದಾರೆ. ಕಪ್ ಗೆದ್ದರೆ ಪಟಾಕಿ ಸಿಟಿವುದು, ಸ್ವೀಟ್ ಹಂಚುವುದು, ಹೀಗೆ ಆಹಾರ ವಿತರಣೆ, ಹೋಟೆಲ್, ಚಾಟ್ಸ್‌ಗಳಲ್ಲಿ ರಿಯಾಯಿತಿ, ಉಚಿತ ವಿತರಣೆ ಮೂಲಕ ಒಂದು ವಾರ ಸೆಲೆಬ್ರೇಟ್ ಮಾಡಲಿದ್ದಾರೆ.
Dear GOD. Please be kind to RCB one last time. 🙏❤️ pic.twitter.com/Q6IqnapQcb
— Krishna. (@KrishVK_18) June 2, 2025
ಇಂದು ಫೈನಲ್ ಮ್ಯಾಚ್: ಬೆಂಗಳೂರಲ್ಲಿ ಸ್ಕ್ರೀನಿಂಗ್
ಬೆಂಗಳೂರಿನಲ್ಲಿ ಆರ್‌ಸಿಬಿ ಫ್ಯಾನ್ಸ್ ಗುಂಪು ಆರ್‌ಸಿಬಿ ಜೆರ್ಸಿ ಈಗಾಗಲೇ ತರಿಸಿದ್ದು, ಕಪ್ ಗೆದ್ದರೇ ಜೆರ್ಸಿಧಾರಿಗಳು ರಸ್ತೆಗೆ ಇಳಿದು ವಿಜೃಂಭಿಸಲಿದ್ದಾರೆ. ಇಂದು ಆರ್‌ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯವು ಗುಜರಾತ್‌ನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7.30 ಗಂಟೆಯಿಂದ ನಡೆಯಲಿದೆ. ಈ ಫೈನಲ್ ಮ್ಯಾಚ್ ವೀಕ್ಷಿಸಲು ಅಪಾರ ಜನಸ್ಥೋಮ ಕಾಯುತ್ತಿದೆ. ಬೆಂಗಳೂರಿನಲ್ಲೂ ಸಾಕಷ್ಟು ಕಡೆಗಳಲ್ಲಿ ಸ್ಕ್ರೀನಿಂಗ್ ಹಾಕಲಾಗಿದ್ದು, ಪೊಲೀಸ್ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಕಂಠೀರವ ಸ್ಟೇಡಿಯಂ ಸುತ್ತ ಭದ್ರತೆ ಹೆಚ್ಚಿಸಲಾಗಿದೆ..












Click it and Unblock the Notifications