ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರ್‍ಯಾಪಿಡೋ ಬೈಕ್‌ನಲ್ಲೇ ಯುವತಿಗೆ ಲೈಂಗಿಕ ಕಿರುಕುಳ!

|
Google Oneindia Kannada News

ಬೆಂಗಳೂರು, ಫೆಬ್ರುವರಿ 1: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನಪ್ರೀಯವಾಗುತ್ತಿರುವ ರ್‍ಯಾಪಿಡೋ ಬೈಕ್ ಸೇವೆ ಯುವತಿಯರಿಗೆ ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಗರದ ಕೋರಮಂಗಲ ಬಳಿಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಗೆ ರ್‍ಯಾಪಿಡೋ ಬೈಕ್ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವೈಟ್‌ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ದೂರು ದಾಖಲಾಗಿದೆ. ಉತ್ತರ ಭಾರತ ಮೂಲದ ಯುವತಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ರಾಯಚೂರು ಮೂಲದ ಮಹೇಂದ್ರ ಎನ್ನುವನನ್ನು ಬಂಧಿಸಿದ್ದಾರೆ.

ರ್‍ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆರ್‍ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆ

ಕಾರ್ಯನಿಮಿತ್ತ ಜನವರಿ 27 ರಂದು ದೊಡ್ಡನೆಕುಂದಿಗೆ ಹೋಗಿದ್ದ ಯುವತಿ ಮರಳಿ ಕೋರಮಂಗಲಕ್ಕೆ ಬರುವಾಗ ರ್‍ಯಾಪಿಡೋ ಬೈಕ್ ಬುಕ್ ಮಾಡಿದ್ದರು. ""ಬೈಕ್‌ ಹತ್ತಿದಾಗ ರ್‍ಯಾಪಿಡೋ ಚಾಲಕ ಬೇಕು ಅಂತಾನೆ ಪದೇ ಪದೇ ಬ್ರೇಕ್ ಹಾಕಿ ನನ್ನ ದೇಹಕ್ಕೆ ಅವನ ದೇಹ ತಾಗಿಸಿದ್ದಾನೆ. ಲೈಂಗಿಕ ನಡುವಳಿಕೆ ತೋರಿಸಿ, ಅಶ್ಲೀಲವಾಗಿ ಮಾತನಾಡಿದ್ದಾನೆ, ಬೈಕ್ ನಿಲ್ಲಿಸು ಎಂದರೂ ದುರ್ವರ್ತನೆ ತೋರಿದ್ದಾನೆ'' ಎಂದು ದೂರು ನೀಡಿದ್ದಾರೆ.

Rapido Driver Misbehaving With Young Girl In Bengaluru

ಇತ್ತೀಚೆಗೆ ಕೂಡ ನಗರದಲ್ಲಿ ರ್‍ಯಾಪಿಡೋ ಬುಕ್ ಮಾಡಿದ್ದ ಯವತಿಯನ್ನು ಚಾಲಕ ನಟ್ಟ ನಡುರಾತ್ರಿಯಲ್ಲಿ ರಸ್ತೆ ಮಧ್ಯೆಯೇ ಬಿಟ್ಟು ಹೋಗಿದ್ದ. ಇದರಿಂದ ರ್‍ಯಾಪಿಡೋ ಹತ್ತುವ ಮುನ್ನ ಯುವತಿಯರು ನೂರು ಬಾರಿ ಯೋಚಿಸಬೇಕಾಗಿದೆ.

English summary
Rapido Driver Misbehaving With Young Girl In Bengaluru. A Police Complaint lodged about this in whitefeild police station bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X