ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆ: ಇಂದು, ನಾಳೆ ಮತದಾರರ ಮಿಂಚಿನ ನೋಂದಣಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಮತದಾರರ ಪಟ್ಟಿಗೆ ಇನ್ನೂ ಹೆಸರು ಸೇರಿಸದೇ ಇರುವವರಿಗಾಗಿ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ.

ವರ್ಗಾವಣೆ, ತಿದ್ದುಪಡಿ, ಹೆಸರು ಸೇರ್ಪಡೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು, ಬೇಕಿರುವ ದಾಖಲೆಗಳೇನು ಎಂಬುದರ ಬಗ್ಗೆ ಗೊಂದಲವಿದೆಯೇ ಆ ಬಗ್ಗೆ ಚಿಂತೆ ಪಡಬೇಕಿಲ್ಲ, ಬಿಬಿಎಂಪಿಯು ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಕ್ಷೇತ್ರಗಳಲ್ಲಿ ಶನಿವಾರ ಮತ್ತು ಭಾನುವಾರ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದೆ.

rapid voter registration today and tomorrow

ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಮನೆ ಸಮೀಪದ ಮತಗಟ್ಟೆಗಳಿಗೆ ತೆರಳು ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು. ಅಲಲ್ಇಯೇ ಅರ್ಜಿಗಳೂ ದೊರಕಲಿವೆ.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆಗಳಿದ್ದು, ಎಲ್ಲ್ಎಡೆ ನೋಂದಣಿ ಅಭಿಯಾನ ನಡೆಯಲಿದೆ. ಬೆಳಗ್ಗೆ ರಿಂದ ಸಂಜೆ ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮತಗಟ್ಟೆಯಲ್ಲೇ ಲಭ್ಯ ಇರುತ್ತಾರೆ.

ಶನಿವಾರ ಬೆಳಗ್ಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿ, ಮತದಾರರ ಪಟ್ಟಿಯನ್ನು ಕೊಟ್ಟು ಮತಗಟ್ಟೆಗೆ ಕಳುಹಿಸಲಾಗುತ್ತದೆ. ಮಧ್ಯಾಹ್ನ ರಿಂದ ಸಂಜೆ 5 ವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಭಾನುವಾರ ಬೆಳಗ್ಗೆ 10ರಿಂದ ಸಂಝೆ 5ರವರೆಗೆ ನೋಂದಣಿ ಮಾಡಿಸಬಹುದು.

ಮತದಾರರು ಸ್ವೀಕರಿಸಿದ ಅರ್ಜಿಗಳನ್ನು ಸಹಾಯಕ ಕಂದಾಯ ಅಧಿಕಾರಿಗಳು ಕಂದಾಯ ಅಧಿಕಾರಿಗಳ ಕಚೇರಿಗೆ ಸಲ್ಲಿಸಲಿದ್ದಾರೆ.

English summary
election commission has started rapid voter registration for today and tomorrow. Public should utilize this apportunity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X