ಬೆಂಗಳೂರಿನಲ್ಲಿ ಹೆಚ್ಚಾದ ಅತ್ಯಾಚಾರ ಪ್ರಕರಣಗಳು: ಮಹಿಳಾ ಸುರಕ್ಷತೆಗೆ ಹೆಚ್ಚಿನ ಸಿಸಿಟಿವಿ!
ಬೆಂಗಳೂರು, ಡಿ.2: ರಾಜ್ಯ ರಾಜಧಾನಿಯಲ್ಲಿ ಕಳೆದ ಒಂದು ವಾರದಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇದರ ಬೆನ್ನಲ್ಲೆ ಸಚಿವ ಅಶ್ವತ್ಥ್ ನಾರಾಯಣ ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಜೊತೆಯಲ್ಲಿ ಬೆಂಗಳೂರಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮತದಾರರ ಮಾಹಿತಿ ಕಳವು ಪ್ರಕರಣ: ಎಲ್ಲರ ತನಿಖೆ ಆಗಲಿ ಎಂದ ಅಶ್ವತ್ಥನಾರಾಯಣ
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ, "ದೇಶದ ಸುರಕ್ಷಿತ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರಿನಲ್ಲಿ ಘಟನೆಗಳು ನಡೆಯುತ್ತಿರುವುದು ದುಃಖಕರ. ನಾನು ಈ ಘಟನೆಗಳನ್ನು ಖಂಡಿಸುತ್ತೇನೆ" ಎಂದಿದ್ದಾರೆ.
ಮುಮದುವರಿದು, " ಇಂತಹ ಘಟನೆಗಳನ್ನು ತಪ್ಪಿಸಲು ನಮ್ಮ ಸರ್ಕಾರವು ನಗರ ಮತ್ತು ರಾಜ್ಯಾದ್ಯಂತ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತದೆ. ಯಾವುದೇ ಅಮಾಯಕರು ತೊಂದರೆ ಅನುಭವಿಸಬಾರದು. ನಾವು ನಮ್ಮ ನಾಗರಿಕರ ಸುರಕ್ಷತೆಗೆ ಮೊದಲು ಆದ್ಯತೆ ನೀಡುತ್ತೇವೆ" ಎಂದಿದ್ದಾರೆ.
ನಗರದಲ್ಲಿ ಕಳೆದ ನವೆಂಬರ್ 25 ರಂದು ಕೇರಳದ 23 ವರ್ಷದ ಯುವತಿಯೊಬ್ಬರ ಮೇಲೆ ರ್‍ಯಾಪಿಡೋ ಬೈಕ್ ಚಾಲಕ ಮತ್ತು ಆತನ ಸ್ನೇಹಿತ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಗಾಯಗಳಿಮದ ಬಳಲುತ್ತಿದ್ದ ಆಕೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ನಂತರ ಮಂಗಳವಾರ ಸಾಮೂಹಿಕ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ವಿಷಯ ತಿಳಿದು ಸುಮ್ಮನಿದ್ದ ಆರೋಪಿಗಳ ರೂಮಿನಲ್ಲಿದ್ದ ಯುವತಿ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಶಾಲಾ ಸಿಬ್ಬಂದಿ ಮೇಲೆ ಬಸ್ ಚಾಲಕ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯನ್ನು ಮನೆಗೆ ಬಿಡುವುದಾಗಿ ಆರೋಪಿ ಭರವಸೆ ನೀಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.
ಆರೋಪಿಯನ್ನು ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ (40) ಎಂದು ಗುರುತಿಸಲಾಗಿದೆ. ಅತ್ಯಾಚಾರದ ಆರೋಪಗಳ ಜೊತೆಗೆ, ಕೊಲೆಯ ಯತ್ನ, ಕ್ರಿಮಿನಲ್ ಬೆದರಿಕೆ, ಆಳವಾದ ಗಾಯ ಮತ್ತು ಮಹಿಳೆಯ ಘನತೆಗೆ ಹಾನಿ ಮಾಡಿದ ಆರೋಪಗಳನ್ನು ಹೊರಿಸಲಾಗಿದೆ.
(ಮಾಹಿತಿ ಕೃಪೆ- ANI)