ಕಡೆಗೆ ಗೆದ್ದೆತ್ತಿನ ಬಾಲ ಹಿಡಿದ ರಮ್ಯಾ
ಬೆಂಗಳೂರು, ಜು.14: ಸದ್ಯಕ್ಕೆ ಮಾಧ್ಯಮಗಳಿಂದ ದೂರ ಇರುವ ಮಂಡ್ಯದ ಮಾಜಿ ಸಂಸದೆ ರಮ್ಯಾ ವಿಶ್ವಕಪ್ ಪುಟ್‌ಬಾಲ್ ಫೈನಲ್ ಪಂದ್ಯದ ವೇಳೆ ಮಾಡಿದ ಟ್ವೀಟ್‌ನಿಂದಾಗಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.
ಫುಟ್‌ಬಾಲ್ ಪ್ರೇಮಿಯಾಗಿರುವ ರಮ್ಯಾ ಟ್ವಿಟ್ಟರ್‌ನಲ್ಲಿ ಅರ್ಜೆಂಟಿನಾ ತನ್ನ ಅಭಿಮಾನಿಗಳಿಗಾಗಿ ಫೈನಲ್ ಪಂದ್ಯ ಜಯಗಳಿಸಬೇಕು ಎಂದು ಹೇಳಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಾನು ಜರ್ಮನಿಗೆ ಬೆಂಬಲ ನೀಡುತ್ತೇನೆ. ಜರ್ಮನಿ ವಿಶ್ವಕಪ್ ಚಾಂಪಿಯನ್ ಆಗಬೇಕು ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.[ಎರಡು ಗುರಿಗಳನ್ನು ಬೆನ್ನು ಹತ್ತಿದ ದಿವ್ಯ ಸ್ಪಂದನ]

ಸಾಧಾರಣವಾಗಿ ಅಭಿಮಾನಿಗಳು ಹೆಚ್ಚಾಗಿ ಒಂದೇ ತಂಡಕ್ಕೆ ಬೆಂಬಲ ನೀಡುತ್ತಾರೆ. ಆದರೆ ರಮ್ಯಾ ಆರಂಭದಲ್ಲಿ ಅರ್ಜೆಂಟಿನಾಗೆ ಬೆಂಬಲ ನೀಡಿ, ನಂತರ ಸಡನ್ ಜರ್ಮನಿಗೆ ಬೆಂಬಲ ನೀಡಬೇಕು ಎಂದು ಹೇಳಿದ್ದು ಅವರ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. [ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ಸುದ್ದಿ ಟಾಪ್ ಟ್ರೆಂಡಿಂಗ್ ಇದೆ. ಈ ಮಧ್ಯೆ ರಮ್ಯಾ ತಮ್ಮ ನಿಲುವನ್ನು ಇದ್ದಕಿದ್ದಂತೆ ಬದಲಾಯಿಸಿದ್ದಕ್ಕೆ ವಾಟ್ಸ್‌ಆಪ್, ಫೇಸ್‌ಬುಕ್, ಟ್ವಿಟ್ಟರ್ ಪ್ರತಿಕ್ರಿಯೆ ಬರತೊಡಗಿದೆ.
ರಾಜಕಾರಣಿಗಳು ಯಾವಗಲೂ ಒಂದೇ ನಿಲುವಿಗೆ ಅಂಟಿಕೊಳ್ಳುವುದಿಲ್ಲ. ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾರೆ. ಅದೇ ರೀತಿ ರಮ್ಯಾ ಈಗ ಪಕ್ಕಾ ರಾಜಕಾರಣಿಯಾಗಿದ್ದಾರೆ ಎಂದು ಜನ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ.
Argentina must win for their fans! Their love and loyalty surpasses all other! #FifaWorldCupfinal2014
— Divya Spandana/Ramya (@divyaspandana) July 13, 2014 I'm going to be supporting Germany tonight! Germany World Cup champions! #FifaWorldCupfinal2014
— Divya Spandana/Ramya (@divyaspandana) July 13, 2014 











Click it and Unblock the Notifications