ರಮೇಶ್ ಜಾರಕಿಹೊಳಿ ಬಂಧನಕ್ಕೆ ದೂರುದಾರ ವಕೀಲ ಜಗದೀಶ್ ಆಗ್ರಹ
ಬೆಂಗಳೂರು, ಮಾರ್ಚ್ 27: ಯುವತಿ ಹೇಳಿಕೆ ಆಧರಿಸಿ ನಾನು ದೂರು ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ಸಂತ್ರಸ್ತೆ ದೂರನ್ನು ಪೊಲೀಸರಿಗೆ ನೀಡಿರುವ ವಕೀಲ ಜಗದೀಶ್ ಆಗ್ರಹಿಸಿದ್ದಾರೆ.
ಜಾರಕಿಹೊಳಿಯನ್ನು ಬಂಧಿಸಲು ಸರ್ಕಾರಕ್ಕೆ ಭಯವೇ?: ಕಾಂಗ್ರೆಸ್ ವ್ಯಂಗ್ಯ
ರಮೇಶ್ ಜಾರಕಿಹೊಳಿ ತುಂಬಾ ಪ್ರಭಾವಿ. ಸರ್ಕಾರವನ್ನೇ ತೆಗೆಯುತ್ತೇನೆ. ನನ್ನನ್ನು ಬಂಧಿಸಿದರೆ ಸರ್ಕಾರವೇ ಬೀಳಿಸುತ್ತೇನೆ ಎಂದು ಹೆದರಿಸಿದ್ದಾರೆ. ಮಾಧ್ಯಮಗಳ ಮೂಲಕ ಜಾರಕಿಹೊಳಿ ಹೆದರಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸಾಕ್ಷ ನಾಶಗಳನ್ನು ಮಾಡುವ ಸಾಧ್ಯತೆಯಿದೆ. ಸರ್ಕಾರವನ್ನೇ ಹೆದರಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ವಿರುದ್ಧ ಈ ಪ್ರಕರಣ ದಾಖಲಾಗಿದ್ದರೆ ಇಷ್ಟರಲ್ಲಿ ಬಂಧನವಾಗುತ್ತಿದ್ದರು. ಆದರೆ, ಜಾರಕಿಹೊಳಿಯನ್ನು ಯಾಕೆ ಬಂಧಿಸಿಲ್ಲ. ಸಾಮಾನ್ಯರಿಗೆ ಒಂದು ನ್ಯಾಯ. ಇವರಿಗೊಂದು ನ್ಯಾಯವೇ ? ನಾನು ಬೆಂಗಳೂರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಜಾರಕಿಹೊಳಿಯನ್ನು ಬಂಧಿಸದಿದ್ದರೆ, ಹೈಕೋರ್ಟ್ ಮೊರೆ ಹೋಗುತ್ತೇವೆ. ನ್ಯಾಯಾಲಯದ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆಗೆ ಕೋರುತ್ತೇವೆ ಎಂದು ಅವರು ಒತ್ತಾಯಿಸಿದ್ದಾರೆ.
ಕೈ ಬರಹದ ಲಿಖಿತ ದೂರನ್ನು ಸಂತ್ರಸ್ತೆ ಎನ್ನಲಾದ ಯುವತಿ ವಕೀಲ ಜಗದೀಶ್ ಅವರಿಗೆ ರವಾನಿಸಿದ್ದಳು. ಈ ಕುರಿತು ವಿಡಿಯೋದಲ್ಲಿ ಸಹ ವಕೀಲ ಜಗದೀಶ್ ಹೆಸರು ಉಲ್ಲೇಖಿಸಿದ್ದಳು. ಈ ಹಿನ್ನೆಲೆಯಲ್ಲಿ ಜಗದೀಶ್ ಸಂತ್ರಸ್ತೆ ಪರ ವಕೀಲ ಜಗದೀಶ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಿಡಿ ರಹಸ್ಯ ಕುರಿತು ಸಂತ್ರಸ್ತೆ ಎನ್ನಲಾದ ಯುವತಿ ತನ್ನ ಪೋಷಕರೊಂದಿಗೆ ಮಾತನಾಡಿದ್ದಾಳೆ ಎನ್ನಲಾದ ಅಡಿಯೋ ಬಿಡುಗಡೆ ಆಗಿತ್ತು. ಅದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿತ್ತು. ಇದು ರಾಝಕೀಯ ವಲಯದಲ್ಲಿ ಬಹುದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಇದೀಗ ಸಂತ್ರಸ್ತೆ ಎನ್ನಲಾದ ಯುವತಿ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.