ಲಾಕ್‌ಡೌನ್ ಪರಿಣಾಮ; ವಿವಿಯಿಂದ ಆನ್‌ಲೈನ್‌ನಲ್ಲಿ ಪ್ರಮಾಣಪತ್ರ ವಿತರಣೆ
ಬೆಂಗಳೂರು, ಏಪ್ರಿಲ್ 24: ಕೊರೊನಾ ಹಾವಳಿಯಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಪದವಿ, ಡಿಪ್ಲೋಮಾ, ಸರ್ಟಿಪಿಕೇಟ್ ಕೋರ್ಸ್ ಮುಗಿಸಿ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಂದ ಪ್ರಮಾಣ ಪತ್ರಗಳಿಗೆ ಕಾಯುತ್ತಿರುವವರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಇದಕ್ಕೆ ಪರಿಹಾರ ಕಂಡುಕೊಂಡಿರುವ ಬೆಂಗಳೂರಿನ ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಪ್ರಾವಿಸನಲ್ ಅಂಕಪಟ್ಟಿಗಳನ್ನು ಆನ್‌ಲೈನ್ ಮೂಲಕ ನೀಡಲು ಮುಂದಾಗಿದೆ.
ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಈ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಅಂಕಪಟ್ಟಿಗೆ ಕಾಯುತ್ತಿರುವವರು ವಿವಿ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಪ್ರಾವಿಸನಲ್ ಅಂಕಪಟ್ಟಿಗಳನ್ನು ಇನ್ನೀತರೆ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ ಎಂದು ವಿವಿ ತಿಳಿಸಿದೆ.

ಈ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಎಂಬಿಬಿಎಸ್, ನರ್ಸಿಂಗ್ ಇನ್ನೀತರ ವೈದ್ಯಕೀಯ ಕೋರ್ಸ್‌ಗಳ ಸುಮಾರು ೩೦ ಸಾವಿರ ವಿದ್ಯಾರ್ಥಿಗಳು ಪದವಿ, ಕೋರ್ಸ್‌ಗಳನ್ನು ಮುಗಿಸಿ ಹೊರ ಬರುತ್ತಾರೆ. ಈಗ ಲಾಕ್‌ಡೌನ್ ಇರುವುದರಿಂದ ವಿವಿಗೆ ಹೋಗಲಾರದವರು ಅಂಕಪಟ್ಟಿಗಳನ್ನು, ಪ್ರಮಾಣಪತ್ರಗಳ್ನು ಪಡೆಯಲು ತೊಂದರೆ ಆಗುತಿತ್ತು. ಇನ್ಮುಂದೆ ಆನ್‌ಲೈನ್‌ನಲ್ಲೇ ಪ್ರಮಾಣಪತ್ರಗಳನ್ನು ಕೊಡುತ್ತಿರುವುದು ಪದವೀಧರಿಗೆ ಸಂತಸ ನೀಡಿದೆ.












Click it and Unblock the Notifications