• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಸಂಬಂಧಕ್ಕೆ ಅಡ್ಡಿ ಪಡಿಸಿದ ಮುಗ್ಧ ಮಕ್ಕಳ ಮೇಲೆ ದೌರ್ಜನ್ಯ!

|
Google Oneindia Kannada News

ಬೆಂಗಳೂರು, ಜೂ. 11: ಅವರು ಏನೂ ಅರಿಯದ ಮುದ್ದು ಕಂದಮ್ಮಗಳು! ಅಪ್ಪ ಜೈಲಿನಲ್ಲಿದ್ದಾನೆ. ಜತೆಗಿದ್ದ ಅಮ್ಮನ ಮಡಿಲಲ್ಲೇ ಬದುಕುತ್ತಿದ್ದರು. ಪರ ಪುರುಷನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದ ಬಗ್ಗೆ ಈ ಮುದ್ದು ಕಂದಮ್ಮಗಳು ಜೈಲಿನಲ್ಲಿರುವ ತಂದೆಗೆ ಮಾಹಿತಿ ನೀಡಿದ್ದರು. ಈ ಸಿಟ್ಟಿನಿಂದ ಇಬ್ಬರು ಹೆಣ್ಣು ಮಕ್ಕಳ ಮೇಲೆ ಬರೆ ಎಳೆದು ಜನ್ಮ ಕೊಟ್ಟ ತಾಯಿ ವಿಕೃತಿ ಮೆರೆದಿದ್ದಾಳೆ. ಮಾತ್ರವಲ್ಲ ತನ್ನ ಪ್ರಿಯಕರನೊಂದಿಗೆ ಜೈಲಿಗೆ ಹೋಗಿದ್ದಾಳೆ.

ಹೌದು, ಇದು ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರಂತ ಘಟನೆ. ಆಕೆ ಹೆಸರು ಜಯಮ್ಮ, ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಅಪ್ರಾಪ್ತಳಾಗಿದ್ದ ಜಯಮ್ಮನನ್ನು ಮದುವೆಯಾದ ಕಾರಣಕ್ಕೆ ಪತಿ ಶಿಕ್ಷೆಗೆ ಗುರಿಯಾಗಿ ಹಾಸನದ ಜೈಲು ಸೇರಿದ್ದಾನೆ.

ಬದುಕಿಗಾಗಿ ಬ್ಯಾಟರಾಯನಪುರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮನಿಗೆ ಹೇಮಂತನ ಪತ್ನಿ ಪರಿಚಯವಾಗಿದ್ದಳು. ಆಕೆ ಕೂಡ ಅದೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹೇಮಂತನ ಪತ್ನಿ ಒಮ್ಮೆ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಗಂಡನಿಗೆ ಪರಿಚಯಿಸಿದ್ದಳು. ಇಬ್ಬರ ಸ್ನೇಹ ಅಕ್ರಮ ಸಂಬಂಧಕ್ಕೆ ನಾಂದಿ ಹಾಡಿದೆ. ಹೇಮಂತ್ ತನ್ನ ಪ್ರೇಯಸಿ ಜಯಮ್ಮನ ಮನೆಗೆ ಬಂದು ಸರಸವಾಡುತ್ತಿದ್ದ. ಇದನ್ನು ಸಹಿಸದ ಮುದ್ದು ಮಕ್ಕಳು ಅಡ್ಡಿ ಪಡಿಸುತ್ತಿದ್ದರು. ಹೀಗಾಗಿ ಹೇಮಂತ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ.

ಚಿಕ್ಕ ವಯಸ್ಸಿನಲ್ಲಿ ಜಯಮ್ಮನನ್ನು ವರಿಸಿದ ಪಾಪಕ್ಕೆ ಜೈಲು ಪಾಲಾಗಿರುವ ಪತಿ ಒಮ್ಮೆ ಕರೆ ಮಾಡಿದ್ದಾನೆ. ಇಬ್ಬರು ಮಕ್ಕಳು ಮನೆಯಲ್ಲಿ ಹೇಮಂತ ಎಂಬಾತ ಇರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಜಯಮ್ಮನ ಪತಿ, ಪೋನ್ ನಲ್ಲಿ ಪತ್ನಿಗೆ ಹೆದರಿಸಿದ್ದಾನೆ. ಪತಿ ಕೋಪಿಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಜಯಮ್ಮ ದೌರ್ಜನ್ಯ ಎಸಗಿದ್ದಾಳೆ. ಕಳೆದ ಎರಡು ತಿಂಗಳಿನಿಂದ ಬರೆ ಹಾಕಿ ಚಿತ್ರ ಹಿಂಸೆ ನೀಡಿದ್ದಾಳೆ. ವಿಧಿಯಿಲ್ಲದ ಇಬ್ಬರು ಮಕ್ಕಳು ಹಲ್ಲೆಗೆ ಒಳಗಾದರೂ ಅಲ್ಲಿಯೇ ಸಹಿಸಿಕೊಂಡಿದ್ದಾರೆ. ಇದನ್ನು ಸಹಿಸಿಕೊಳ್ಳದ ಸ್ಥಳೀಯರು ಗುರುವಾರ ಹಲ್ಲೆ ಮಾಡುತ್ತಿದ್ದ ಇಬ್ಬರ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ರಾಜರಾಜೇಶ್ವರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಗಂಭೀರ ಗಾಯಗೊಂಡಿರುವ ಇಬ್ಬರು ಹೆಣ್ಣು ಮಕ್ಕಳನ್ನು ರಾಜರಾಜೇಶ್ವರಿನಗರ ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರು ಮಕ್ಕಳು ಗುಣಮುಖವಾದ ಬಳಿಕ ಸರ್ಕಾರದ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅನ್ಯ ಪುರುಷನ ಜತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿ ಪಡಿಸಿದ ಮಕ್ಕಳ ಮೇಲೆ ದೌರ್ಜನ್ಯ ಮಾಡಿರುವ ತಾಯಿ ಜನ್ಮ ಕೊಟ್ಟ ಮಕ್ಕಳ ಪಾಲಿಗೆ ವಿಲನ್ ಆಗಿದ್ದಾಳೆ. ತಾಯಿ ಜೈಲು ಸೇರಿದ ಕಾರಣ ಇಬ್ಬರು ಮಕ್ಕಳು ಇದೀಗ ಅನಾಥರಾಗಿದ್ದಾರೆ.

English summary
Rajarajeshwari Nagar police have arrested a mother and her lover who assaulted children's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X