ಆರ್.ಆರ್.ನಗರ ಚುನಾವಣೆ : ಹುಚ್ಚ ವೆಂಕಟ್ ಪಡೆದ ಮತಗಳೆಷ್ಟು?
Recommended Video

ಬೆಂಗಳೂರು, ಮೇ 31 : ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕುತೂಹಲ ಕೆರಳಿಸಿದ್ದ ಅಭ್ಯರ್ಥಿ ಹುಚ್ಚ ವೆಂಕಟ್. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಚುನಾವಣಾ ಪ್ರಚಾರವನ್ನು ಮಾಡಿರಲಿಲ್ಲ. ಇಂದು ಮತ ಎಣಿಕೆ ನಡೆದಿದ್ದು 764 ಮತಗಳನ್ನು ಪಡೆದಿದ್ದಾರೆ.
'ನಾನು ಮನೆ-ಮನೆಗೆ ಬಂದು ಮತ ಕೇಳುವುದಿಲ್ಲ. ಯಾರು ದುಡ್ಡಿಗೆ ವೋಟು ಮಾರಿಕೊಳ್ಳವರೋ ಅವರು ನನ್ನ ಎಕ್ಕಡ ಸಮಾನ' ಎಂದು ಹುಚ್ಚ ವೆಂಕಟ್ ಪತ್ರಿಕಾಗೋಷ್ಠಿ ನಡೆಸಿದ್ದರು.
'ಕ್ಷೇತ್ರದಲ್ಲಿ ಏನು ಮಾಡಬೇಕು, ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ಯೋಚಿಸಿದ್ದೇನೆ. ನನಗೆ ಮತ ನೀಡಿ. ಮನೆ-ಮನೆಗೆ ಬಂದು ನಾನು ಮತ ಕೇಳುವುದಿಲ್ಲ' ಎಂದು ಹುಚ್ಚ ವೆಂಕಟ್ ಘೋಷಣೆ ಮಾಡಿದ್ದರು.
ಗುರುವಾರ ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ನಡೆಯಿತು. ನಟ, ನಿರ್ದೇಶಕ ಹುಚ್ಚ ವೆಂಕಟ್ 764 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ 900ಕ್ಕೂ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿವೆ.

ವಿದಾದಗಳಿಂದಲೇ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಸುದ್ದಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು, ಬಿಜೆಪಿಯ ತುಳಸಿ ಮುನಿರಾಜು ಗೌಡ ವಿರುದ್ಧ ಭಾರೀ ಮುನ್ನಡೆ ಪಡೆದುಕೊಂಡಿದ್ದು, ಗೆಲುವು ಸಾಧಿಸುವುದು ಖಚಿತವಾಗಿದೆ.
* ಮೇ 6ರಂದು ಕ್ಷೇತ್ರದ ವ್ಯಾಪ್ತಿಯಲ್ಲಿ 95 ಲಕ್ಷಕ್ಕೂ ಅಧಿಕ ಹಣ ಟ್ರಕ್‌ನಲ್ಲಿ ಪತ್ತೆಯಾಗಿತ್ತು.
* ಜಾಲಹಳ್ಳಿ ಸಮೀಪದ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ 9,746 ವೋಟರ್ ಐಡಿಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿತ್ತು.
ಇದರಿಂದಾಗಿ ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಮೇ 28ರಂದು ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ.












Click it and Unblock the Notifications