ರಾಜರಾಜೇಶ್ವರಿನಗರದಲ್ಲಿ ಭೂಮಿ ನಡುಗಿದ ಅನುಭವ:ಆತಂಕ
ಬೆಂಗಳೂರು, ಆಗಸ್ಟ್ 16: ಬೆಂಗಳೂರಿನ ರಾಜರಾಜೇಶ್ವರಿ ನಗರ, ಕುಮಾರಸ್ವಾಮಿ ಲೇಔಟ್, ಕೆಂಗೇರಿ ಉತ್ತರ ಹಳ್ಳಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ದಕ್ಷಿಣ ಬೆಂಗಳೂರಿನ ಜನರು ಭಯಭೀತರಾಗಿದ್ದರು.
ಕಂಪಿಸಿದ ಶಬ್ಧಕ್ಕೆ ಕೆಲವರು ಗಾಬರಿಯಿಂದ ಹೋಟೆಲ್, ಕಚೇರಿ, ಮನೆಯಿಂದ ಹೊರಬಂದರು, ಕಿಟಕಿ, ಬಾಗಿಲುಗಳು ಅಲುಗಾಡಿದ ಅನುಭವವಾಯಿತು ಎಂದು ಕೆಲವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇವಲ 20 ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಕೆಂಗೇರಿ, ರಾಜರಾಜೇಶ್ವರಿನಗರ, ಕುಮಾರಸ್ವಾಮಿ ಲೇಔಟ್, ಮತ್ತಿಕೆರೆ, ವಿಜಯನಗರ, ಮೂಡಲಪಾಳ್ಯ, ಜ್ಞಾನಭಾರತಿ, ಹೆಬ್ಬಾಳ, ಜೆಪಿನಗರ, ಕೋಣನಕುಟಂಟೆ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ.

ಗಾಳಿಯ ಸ್ಥಾನಪಲ್ಲಟ ಕೇಳಿ ಬಂದಿರುವ ಶಬ್ದ, ಭೂಗರ್ಭದ ಒಳಗೆ ಆಗಿರುವ ಕಂಪನ ಇದಲ್ಲ. ಇದು ಉಷ್ಣ ಮತ್ತು ಶೀತ ಮಾರುತಗಳ ಘರ್ಷಣೆಯಿಂದ ಉಂಟಾಗಿರುವ ಸದ್ದಾಗಿದೆ, ಮನೆಗಳು ಅಲುಗಾಡಿಲ್ಲ, ಯಾವುದೇ ವಸ್ತುಗಳು ಬಿದ್ದಿಲ್ಲ, ಯಾರೂ ಆತಂಕಪಡುವ ಅಟಗತ್ಯವಿಲ್ಲ ಎಂದು ಭೂಗರ್ಭ ವಿಜ್ಞಾನಿ ಎಚ್‌ಎಸ್‌ಎನ್ ಪ್ರಕಾಶ್ ತಿಳಿಸಿದ್ದಾರೆ.












Click it and Unblock the Notifications