ಕಸದ ಸಮಸ್ಯೆ ನಿವಾರಣೆಗೆ 3 ತಿಂಗಳ ಗಡುವು

ಬೆಂಗಳೂರು, ಜೂ.28: ಕಸದ ಸಮಸ್ಯೆ ನಿವಾರಿಸಲು ಮತ್ತು ತೆರಿಗೆ ಸಂಗ್ರಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಮೂರು ತಿಂಗಳ ಕಾಲಾವಾಕಾಶ ನೀಡಿದ್ದಾರೆ.

ಕೆಂಪೇಗೌಡರ 502ನೇ ಜನ್ಮದಿನಾಚರಣೆ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ತಿಂಗಳ ಒಳಗಡೆ ಕಸದ ಸಮಸ್ಯೆ ನಿವಾರಣೆ ಮತ್ತು ತೆರಿಗೆ ಸಂಗ್ರಹ ಹೆಚ್ಚಿಸದಿದ್ದರೆ ಬಿಬಿಎಂಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.[ಬಿಬಿಎಂಪಿ: ಘನತ್ಯಾಜ್ಯ ನಿರ್ವಹಣೆಗೆ ವಿಶೇಷ ಆಯುಕ್ತರು]

ನಗರ ಅಭಿವೃದ್ಧಿ ಮತ್ತು ನಿರ್ವ‌ಹಣೆ ವಿಚಾರದಲ್ಲಿ ಎಲ್ಲಾ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹಾಕದೇ ಆದಾಯ ವೃದ್ಧಿಸಿ ಅಭಿವೃದ್ಧಿಯತ್ತ ಬಿಬಿಎಂಪಿ ಗಮನ ಹರಿಸಬೇಕೆಂದು ಅವರು ಸೂಚಿಸಿದರು. [ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಬೆಳಗಿದ ಹಸಿ ತ್ಯಾಜ್ಯ]

4000 ಕೋಟಿ ತೆರಿಗೆ ಸಂಗ್ರಹಿಸುವ ಸಾಮರ್ಥ್ಯವಿದ್ದರೂ ಬಿಬಿಎಂಪಿ 2,500 ಕೋಟಿ ಗುರಿಯನ್ನು ಹಾಕಿಕೊಂಡಿದೆ. ಅದರಲ್ಲೂ ಸಂಗ್ರಹಿಸಿದ್ದು 1,200 ಕೋಟಿ. ಹೀಗಾದರೆ ಅಭಿವೃದ್ಧಿ ಕಾರ್ಯ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

cm siddaramaiah

ರಾಜ್ಯ ಸರ್ಕಾರ ಶೇ.98, ಶೇ.100 ರಷ್ಟು ಆದಾಯ ಸಂಗ್ರಹಣೆ ಗುರಿಯನ್ನು ತಲುಪುತ್ತಿದ್ದರೂ ಬಿಬಿಎಂಪಿಯಿಂದ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ವಾರ್ಡ್‌‌ಗಳ ಅಭಿವೃದ್ಧಿ ಮುಂದಿಟ್ಟುಕೊಂಡು ಬಜೆಟ್‌ ತಯಾರಿಸುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.

ಆದಾಯಕ್ಕೆ ತಕ್ಕಂತೆ ಬಜೆಟ್‌‌ ಮಂಡಿಸಿ. ಆದಾಯ ಹೆಚ್ಚು ಮಾಡದೇ ಖರ್ಚು‌ ಹೆಚ್ಚು ಮಾಡಿದರೆ ಅಭಿವೃದ್ಧಿ ಕಷ್ಟ. ಮೊದಲು ತೆರಿಗೆ ಸೋರಿಕೆಯನ್ನು ತಡೆಗಟ್ಟಿ ಅದಾಯವನ್ನು ಹೆಚ್ಚಿಸಲು ಮುಂದಾಗಿ ಎಂದು ಕಿವಿಮಾತು ಹೇಳಿದರು.[ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಆಂದೋಲನ]

187 ಸಾಧಕರಿಗೆ ಪ್ರಶಸ್ತಿ: ಮೇಯರ್‌ ಗುರುವಾರ ಪ್ರಕಟಿಸಿದ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 136 ಜನರ ಹೆಸರಿತ್ತು. ಶುಕ್ರವಾರ ಬೆಳಿಗ್ಗೆ ಅದಕ್ಕೆ ಮತ್ತೆ 51 ಜನರ ಹೆಸರು ಸೇರ್ಪಡೆಯಾಗಿ 187 ಸಾಧಕರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+