ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಹಣ ಎಸೆದಿದ್ದ ವ್ಯಕ್ತಿಯ ವಶ
ಬೆಂಗಳೂರು, ಜನವರಿ 24: ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಕೆಆರ್ ಮಾರುಕಟ್ಟೆ ಫ್ಲೈಒವರ್‌ನಿಂದ ಹಣದ ಮಳೆ ಸುರಿದಿದ್ದು. ಅರುಣ್ ಎಂಬ ವ್ಯಕ್ತಿ ಹತ್ತು ರೂಪಾಯಿ ನೋಟುಗಳನ್ನು ಎಸೆದಿದ್ದನು. ಇದರಿಂದ ಜನರು ಆಶ್ಚರ್ಯಚಕಿತರಾದರೆ ಮತ್ತೆ ಕೆಲವರು ಹಣವನ್ನು ಆಯ್ದುಕೊಳ್ಳಲು ಮುಂದಾಗಿದ್ದರು. ಸದ್ಯ ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಹಣವನ್ನು ಸಿಕ್ಕ ಸಿಕ್ಕಲ್ಲಿ ತೂರಿ ಹಣ ಮಳೆಯನ್ನು ಸುರಿಸಿದ್ದಾನೆ. ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಹಣವನ್ನು ಫ್ಲೈಓವರ್ ಮೇಲಿದ್ದ ಎಸೆದಿದ್ದಾನೆ ಎನ್ನಲಾಗಿತ್ತು.
ಕೆಆರ್ ಮಾರುಕಟ್ಟೆ ಬಳಿ ತನ್ನ ಸ್ಕೂಟರ್‌ನಲ್ಲಿ ಫ್ಲೈಓವರ್ ಏರಿದ್ದ ವ್ಯಕ್ತಿಯೊಬ್ಬ 10 ರೂಪಾಯಿ ಮುಖಬೆಲೆಯ ನೂರಾರು ನೋಟುಗಳನ್ನು ಎಸದಿದ್ದು, ಅಲ್ಲಿಂದ ಜನರು ಮೇಲಿಂದ ಹಣ ಬೀಳುತ್ತಿದಂತೆ ಹೌಹಾರಿದ್ದಾರೆ. ಕೆಲವರು ಆಶ್ಚರ್ಯಚಕಿತರಾಗಿ ಆ ಹಣವನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಇನ್ನು ನೋಟು ಎಸೆದ ವ್ಯಕ್ತಿಯ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ, ಫ್ಲೈ ಓವರ್ ಮೇಲಿಂದ ಹಣವನ್ನು ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ.
ಈಗ ಚಳಿಗಾಲ ಎಲ್ಲೆಡೆ ದಟ್ಟ ಮಂಜಿನ ವಾತಾವರಣದಿಂದ ಎಲ್ಲೆಡೆ ಬೆಳಗ್ಗೆ 8ವರೆಗೂ ಮಂಜು ಬೀಳುತ್ತಿರುತ್ತದೆ. ಆದರೆ ಮಂಗಳವಾರ ಇದ್ದಕಿದ್ದಂತೆ ಹಣದ ನೋಟುಗಳು ಮೇಲಿಂದ ಬೀಳುತ್ತಿದ್ದಂತೆ ಜನರು ಒಂದು ಕ್ಷಣ ಖುಷಿಯಿಂದ ಹೌಹಾರಿದರು. ಬ್ಲೇಸರ್ ತೊಟ್ಟಿದ್ದ ವ್ಯಕ್ತಿಯೊಬ್ಬ ಕೆಆರ್ ಮಾರುಕಟ್ಟೆ ಮೇಲಿಂದ 10 ರೂಪಾಯಿ ನೋಟುಗಳನ್ನು ಮೇಲಿಂದ ಎಸೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಆತ ಹಣವನ್ನು ಎಸೆಯುತ್ತಿದ್ದಾಗ ಫ್ಲೈ ಓವರ್ ಮೇಲಿಂದ ಜನರು ಹಣವನ್ನು ಕೇಳಿತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಕತ್ತಿನಲ್ಲಿ ದೊಡ್ಡ ಗಡಿಯಾರ ನೇತಾಕಿಕೊಂಡಿದ್ದ
ಒಂದು ಕಡೆಯಿಂದ ಹಣವನ್ನು ಎಸೆದ ವ್ಯಕ್ತಿ ಬಳಿಕ ಫ್ಲೈಓವರ್‌ನ ಮತ್ತೊಂದು ಕಡೆಗೂ ಹೋಗಿ ಅಲ್ಲಿಂದ ಕೂಡ ಹಣವನ್ನು ಎಸೆದಿದ್ದಾನೆ. ಜನರು ಅಲ್ಲಿಂದಲೂ ಹಣವನ್ನು ಇಲ್ಲೇ ಕೊಡುವಂತೆ ಕೇಳಿತ್ತಿರುವುದು ಕಂಡು ಬಂದಿದೆ. ಹಣವನ್ನು ಎಸೆಯುತ್ತಿದ್ದಾಗ ಆತ ಕತ್ತಿನಲ್ಲಿ ದೊಡ್ಡ ಗಡಿಯಾರವನ್ನು ನೇತಾಕಿಕೊಂಡಿದ್ದನು. ಕೈಯ್ಯಲ್ಲಿ ಸಣ್ಣ ಚೀಲವೊಂದನ್ನು ಹಿಡಿದಿದ್ದ ಆತ ಅಲ್ಲಿಂದ ನೂರಾರು ಹಣದ ನೋಟುಗಳನ್ನು ಮೇಲಿಂದ ಕೆಳಗಿದ್ದ ಜನರತ್ತ ಎಸೆಯುತ್ತಿದ್ದನು. ಇದರಿಂದ ಕೆಆರ್ ಮಾರುಕಟ್ಟೆ ಬಳಿ ಕೆಲವು ಹೊತ್ತು ಟ್ರಾಫಿಕ್ ಜಾಂ ಕೂಡ ಆಗಿತ್ತು. ನೋಟು ಎಸೆದ ವ್ಯಕ್ತಿಯನ್ನು ಅರುಣ್ ಎಂದು ಗುರುತಿಸಲಾಗಿದ್ದು, ಆತ ಇವೆಂಟ್ ಮ್ಯಾನೇಜರ್ ಎಂದು ತಿಳಿದು ಬಂದಿದೆ.

ನಾಗರಬಾವಿಯ ಯೂಟೂಬ್ ಚಾನಲ್
ಮಂಗಳವಾರ ಬೆಳಗ್ಗೆ ಕೆಆರ್ ಮಾರುಕಟ್ಟೆ ಫ್ಲೈಓವರ್‌ನಿಂದ ಹತ್ತು ರೂಪಾಯಿ ಮುಖಬೆಲೆಯ ನೋಟುಗಳನ್ನು ಎಸೆದಿದ್ದ ಸಂಜೆ 5ರ ಸುಮಾರಿಗೆ ಅರುಣ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ನಾಗರಬಾವಿಯ ಯೂಟೂಬ್ ಚಾನಲ್ ಕಚೇರಿಯಲ್ಲಿ ಆತ ಇರುವುದನ್ನು ಖಚಿತಪಡಿಸಿಕೊಂಡು ಆತನನ್ನಯ ವಶಕ್ಕೆ ಪಡೆದಿದ್ದಾರೆ.

ಕಾರಣ ನೀಡುವಂತೆ ನೋಟಿಸ್
ಹಣ ಎಸೆದ ವ್ಯಕ್ತಿಯನ್ನು ಅರುಣ್ ಎಂದು ಮೊದಲೇ ಗುರುತಿಸಲಾಗಿತ್ತು. ಆತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 92 ಡಿ, ಐಪಿಸಿ 283ರ ಅಡಿಯಲ್ಲಿ ಎನ್‌ಸಿಆರ್ ಪ್ರಕರಣ ದಾಖಲಿಸಿದ್ದ ಕೆಆರ್ ಮಾರುಕಟ್ಟೆ ಪೊಲೀಸರು ಕಾರಣ ನೀಡುವಂತೆ ನಾಗರಭಾವಿಯಲ್ಲಿರುವ ಅರುಣ್ ಮನೆಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್‌ಗೆ ಆತ ಉತ್ತರಿಸದಿದ್ದಾಗ ಕೊನೆಗೆ ಸಂಜೆ ವೇಳೆ ಆತ ಯುಟೂಬ್ ಕಚೇರಿಯಲ್ಲಿ ಇರುವುದು ಮಾಹಿತಿ ಗೊತ್ತಾಗಿ ಅದರಂತೆ ಕಚೇರಿಗೆ ಹೋಗಿದ್ದ ಪೊಲೀಸರು ಅರುಣ್ ಜೊತೆ ಮಾತುಕತೆ ಆಡಿ ಠಾಣೆಗೆ ಕರೆದೊಯ್ಯಿದರು.

ಐಪಿಸಿ ಸೆಕ್ಷನ್ 283, 290ರ ಅಡಿ ಪ್ರಕರಣ
ಪೊಲೀಸರ ಬಳಿ ತಾನು ಕೆಟ್ಟ ಉದ್ದೇಶದಿಂದ ಹಣ ಎಸೆಯಲಿಲ್ಲ. ನನಗೆ ಜ್ಞಾನ, ಬುದ್ಧಿಶಕ್ತಿ ಚೆನ್ನಾಗಿದೆ. ನಾನೂ ಕೂಡ ವಿದ್ಯಾವಂತ, ಸಾರ್ವಜನಿಕವಾಗಿ ಹಣ ಎಸೆಯುವುದು ತಪ್ಪು ಎಂದು ನನಗೆ ಗೊತ್ತಿರಲಿಲ್ಲ. ನನಗೆ ರೀಲ್ಸ್ ಮಾಡುವ ಉದ್ದೇಶವು ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ಟಿವಿ9 ವರದಿ ಮಾಡಿದೆ. ಆದ್ಯಾಗೂ ಆತನ ವಿರುದ್ಧ ಸಂಚಾರಕ್ಕೆ ಅಡಚಣೆ ಹಾಗೂ ಸಾರ್ವಜನಿಕರ ಅಪಾಯಕಾರಿ ಓಡಾಡುವಂತೆ ಮಾಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 283, 290, ಕರ್ನಾಟಕ ಪೊಲೀಸ್ ಕಾಯ್ದೆ 92(ಡಿ) ಅಡಿ ಪ್ರಕರಣ ದಾಖಲಾಗಿದೆ.