ಬೆಂಗಳೂರಲ್ಲಿ ಜೋರು ಮಳೆ, ಇನ್ನೂ ನಾಲ್ಕು ದಿನ ಛತ್ರಿ ಮರೆಯುವಂತಿಲ್ಲ
ಬೆಂಗಳೂರು, ಮೇ 23: ರಾಜಕೀಯ ಕಾವಿನಿಂದ ಕುದಿಯುತ್ತಿರುವ ರಾಜ್ಯ ರಾಜಧಾನಿಗೆ ಬುಧವಾರ ಮಧ್ಯಾಹ್ನ ಬಂದ ಮಳೆ ತಂಪೆರಿದಿದೆ.
ಮಧ್ಯಾಹ್ನ ಬಂದ ಜೋರು ಮಳೆ ವಾತಾವರಣಕ್ಕೆ ತಂಪು ಪೂಸಿದರೆ, ರಸ್ತೆಗಳಿಗೆ ಟ್ರಾಫಿಕ್ ಕಿರಿ-ಕಿರಿ ಹೆಚ್ಚಿಸಿದೆ. ಹಠಾತ್‌ನೆ ಬಂದ ಮಳೆಗೆ ರಸ್ತೆಗಳು ತುಂಬಿ ಹರಿಯುತ್ತಿವೆ.
ಜಯನಗರ, ವಿಧಾನಸೌಧ, ಮಲ್ಲೇಶ್ವರ, ಇನ್ನೂ ಹಲವು ಕಡೆ ಜೋರು ಮಳೆಯಾಗಿದೆ. ಕುಮಾರಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ಅಣಿಯಾಗಿದ್ದ ವಿಧಾನಸೌಧದ ಬಳಿಯೂ ಜೋರು ಮಳೆ ಆಗಿದೆ. ಮಳೆ ಮೊರೆತಕ್ಕೆ ಜನ ಚದುರಿ ಹೋಗಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಗರದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ. ಮೋಡ ಮುಚ್ಚಿದ ವಾತಾವರಣ ಇರಲಿದೆ. ಇನ್ನೂ ನಾಲ್ಕು ದಿನ ಛತ್ರಿ ಮರೆಯುವಂತಿಲ್ಲ.












Click it and Unblock the Notifications