ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರು ಮಳೆ, ORR ವಾಹನ ಸವಾರರಿಗೆ ಸೂಚನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ಭಾನುವಾರ ತಡರಾತ್ರಿಯ ಮಳೆ ಬಳಿಕ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈಗ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

ಹೆಚ್‌ಎಎಲ್ ಸಂಚಾರಿ ಠಾಣೆ ಪೊಲೀಸರು ಬುಧವಾರ ಬೆಳಗ್ಗೆ ಈ ಕುರಿತು ಟ್ವೀಟ್ ಮಾಡಿದ್ದಾರೆ. ಇಕೋ ಸ್ಪೆಸ್ ಬಳಿಯ ಸದ್ಯದ ಪರಿಸ್ಥಿತಿ ವಿಡಿಯೋವನ್ನು ಟ್ವೀಟ್ ಮಾಡಿದ್ದು, ವಾಹನ ಸವಾರರಿಗೆ ಮಾಹಿತಿ ನೀಡಿದ್ದಾರೆ.

Breaking; ಬೆಂಗಳೂರು ಮಳೆ, 62 ಜನರನ್ನು ರಕ್ಷಿಸಿದ ಎನ್‌ಡಿಆರ್‌ಎಫ್ Breaking; ಬೆಂಗಳೂರು ಮಳೆ, 62 ಜನರನ್ನು ರಕ್ಷಿಸಿದ ಎನ್‌ಡಿಆರ್‌ಎಫ್

Rain In Bengaluru Vehicles Can Move From Silk Board Towards Marathalli

ಎಲ್ಲಾ ವಾಹನಗಳು ಸಿಲ್ಕ್ ಬೋರ್ಡ್‌ನಿಂದ ಮಾರತ್‌ಹಳ್ಳಿ ತನಕ ಸಂಚಾರ ನಡೆಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಸ್ತೆಯ ಮೇಲೆ ಇದ್ದ ನೀರು ಇಳಿಕೆಯಾಗಿದ್ದು, ವಾಹನಗಳು ಸಂಚಾರ ನಡೆಸುತ್ತಿವೆ.

ಹೆಚ್‌ಎಎಲ್ ಸಂಚಾರಿ ಠಾಣೆ ಪೊಲೀಸರು ಮತ್ತೊಂದು ಟ್ವೀಟ್‌ನಲ್ಲಿ ಪಣತೂರು ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ ಇನ್ನೂ ನೀರು ನಿಂತಿದೆ. ಪಣತೂರು ವೈಟ್‌ಫೀಲ್ಡ್‌ ಮಾರ್ಗದಲ್ಲಿ ಸಂಚಾರ ನಡೆಸುವವರು ಈ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿದ್ದಾರೆ.

ಮಳೆ, ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಸಿಎಂ ಮಳೆ, ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಸಿಎಂ

ಬೆಂಗಳೂರು ನಗರದಲ್ಲಿ ಮಂಗಳವಾರ ರಾತ್ರಿಯೂ ಮಳೆಯಾಗಿದೆ. ಇದರಿಂದಾಗಿ ಕೆರೆಗಳಿಗೆ ನೀರಿನ ಹರಿವು ಜಾಸ್ತಿಯಾಗಿದೆ. ಇದರಿಂದಾಗಿ ಕೋಡಿಯ ಹೊರ ಹರಿವು ಸಹ ಏರಿಕೆ ಕಂಡಿದೆ. ಆದ್ದರಿಂದ ಕೆಲವು ಪ್ರದೇಶಗಳಲ್ಲಿ ನೀರು ಇಳಿಕೆಯಾಗಿಲ್ಲ.

Breaking; ಬೆಂಗಳೂರು ನಗರದಲ್ಲಿ ಮತ್ತೆ ಮಳೆ, ಜನರ ಪರದಾಟBreaking; ಬೆಂಗಳೂರು ನಗರದಲ್ಲಿ ಮತ್ತೆ ಮಳೆ, ಜನರ ಪರದಾಟ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ಮತ್ತು ಮಹದೇವಪುರ ವಲಯ ವ್ಯಾಪ್ತಿಯ ದೊಡ್ಡನೆಕ್ಕುಂದಿ, ಶೀಲವಂತನಕೆರೆ, ಮುನ್ನೇಕೊಳಲು, ಕುಂದಲಹಳ್ಳಿ, ನೆಲ್ಲೂರಹಳ್ಳಿ, ಯಮಲೂರು, ಬೆಳ್ಳಂದೂರು, ಮಹದೇವಪುರ, ಹೂಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ.

ಸರ್ಜಾಪುರ ರಸ್ತೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ವಾಹನಗಳ ಸಂಚಾರ ಸಾಮಾನ್ಯವಾಗಿದೆ ಎಂದು ಪೂರ್ವ ವಿಭಾಗದ ಸಂಚಾರಿ ಡಿಸಿಪಿ ಕಾಲ ಕೃಷ್ಣಸ್ವಾಮಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

English summary
Bengaluru rain; In a tweet HAL traffic police said that all vehicles can move from Silk Board towards Marathalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X