BBMP Rain Compliant: ಬೆಂಗಳೂರಿನಲ್ಲಿ ಮಳೆ; ಬಿಬಿಎಂಪಿಗೆ ದೂರು ನೀಡುವುದು ಹೇಗೆ?
ಬೆಂಗಳೂರು, ಏಪ್ರಿಲ್ 15; ಬೆಂಗಳೂರು ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಸಂಜೆ ಸುರಿಯುತ್ತಿರುವ ಮಳೆ ಹಾನಿಯನ್ನು ಉಂಟು ಮಾಡುತ್ತಿದೆ. ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಶುಕ್ರವಾರ ಸಂಜೆಯೂ ನಗರದಲ್ಲಿ ಮಳೆಯಾಗಿದೆ. ವಿಲ್ಸನ್ ಗಾರ್ಡನ್, ಕೆ. ಆರ್. ಮಾರುಕಟ್ಟೆ, ಎಂ. ಜಿ. ರಸ್ತೆ, ಜಯನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.
ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚಾರನಡೆಸಲು ಪರದಾಟ ನಡೆಸಿದರು. ಉತ್ತರಹಳ್ಳಿಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ರಸ್ತೆಗಳು ಜಲಾವೃತವಾದ ಪರಿಣಾಮ ಚಾಲುಕ್ಯ ಸರ್ಕಲ್, ಶಿವಾನಂದ ವೃತ್ತ, ಹಡ್ಸನ್ ಸರ್ಕಲ್, ಬ್ರಿಗೇಡ್ ರೋಡ್, ಆನಂದರಾವ್ ಸರ್ಕಲ್ ಮುಂತಾದ ಕಡೆ ಕೆಲವು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಳೆಯಿಂದಾಗಿ ರಸ್ತೆಗಳ ನೀರು ಬಡಾವಣೆಗಳಿಗೆ ನುಗ್ಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಮಗಾರಿಗಳು, ಚರಂಡಿ ಅವ್ಯವಸ್ಥೆಯ ಕಾರಣ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆ ಬಂದಾಗ ಆದ ಅನಾಹುತಗಳ ಬಗ್ಗೆ ಯಾರಿಗೆ ದೂರು ಕೊಡುವುದು?. ಈಗ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ, ಅಧಿಕಾರಗಳದ್ದೇ ಕಾರುಬಾರು. ಹೀಗಾಗಿ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕಾರ ಮಾಡುವುದಿಲ್ಲ ಎಂಬ ಆರೋಪ ಸಹ ಇದೆ.
ದೂರು ಕೊಡಗು ಸಂಖ್ಯೆಗಳು; ಮಳೆ ಇಂದ ಆದ ಹಾನಿ ಕುರಿತು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಅಥವ ನಿಮ್ಮ ವಾರ್ಡ್ ಕಚೇರಿಗೆ ದೂರು ನೀಡಬಹುದು. ಇ-ಮೇಲ್ ಮೂಲಕವೂ ದೂರು ನೀಡಬಹುದಾಗಿದೆ.
* ಬಿಬಿಎಂಪಿ ಮುಖ್ಯ ಕಚೇರಿ ದೂರವಾಣಿ ಸಂಖ್ಯೆ 808-22660000
* ಬೊಮ್ಮನಹಳ್ಳಿ ವಲಯ 9480683433, 25732628
* ದಾಸರಹಳ್ಳಿ ವಲಯ 9480685855, 22975901
* ಪೂರ್ವ ವಲಯ 9480685619, 22975801
* ಮಹದೇವಪುರ ವಲಯ 9480685464, 28511166
* ಆರ್. ಆರ್. ನಗರ 9480683192, 28605642
* ದಕ್ಷಿಣ ವಲಯ 9901462568, 22975701
* ಪಶ್ಚಿಮ ವಲಯ 9480685411, 22975648
* ಯಲಹಂಕ ವಲಯ 9480685228, 22975942












Click it and Unblock the Notifications