ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಮತ್ತೆ ಮರಳಿದ ಮಳೆರಾಯ, ಮೂರು ದಿನ ಮಳೆಯೋ ಮಳೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಮುಂಗಾರು ಪೂರ್ವ ಮಳೆ ಹೊಯ್ದು ಮರೆಯಾಗಿದ್ದ ಮಳೆರಾಯ ಮತ್ತೆ ಬೆಂಗಳೂರಿಗೆ ಬಂದು ತಂಪೆರೆದಿದ್ದಾನೆ. ಕಳೆದ ಒಂದು ವಾರದಿಂದ ನಗರದ ಉಷ್ಣಾಂಶ 31ಡಿಗ್ರಿಗೆ ಬಂದು ತಲುಪಿತ್ತು.

ಕೊಡಗಿನ ಕಾಫಿಗೆ ನಷ್ಟ ಉಂಟಾಗಿದ್ದು ಬರೋಬ್ಬರಿ 386 ಕೋಟಿ ಕೊಡಗಿನ ಕಾಫಿಗೆ ನಷ್ಟ ಉಂಟಾಗಿದ್ದು ಬರೋಬ್ಬರಿ 386 ಕೋಟಿ

ಬೇಸಿಗೆ ಬಿಸಿಲಿಗಿಂತ ಹೆಚ್ಚು ತೀಕ್ಷ್ಣವಾಗಿತ್ತು, ಇದೇ ರೀತಿ ಮಳೆ ಮುಂದುವರೆದರೆ ಹೇಗಪ್ಪಾ ಎನ್ನುವಷ್ಟರಲ್ಲಿ ಮಳೆ ಬಂದು ತಂಪು ತಂದಿದೆ. ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬತ್ತುತ್ತಿವೆ ನದಿಗಳು, ಪ್ರವಾಹದ ಹೊಸ ಸಂಕಷ್ಟದಲ್ಲಿ ಕೇರಳ ಬತ್ತುತ್ತಿವೆ ನದಿಗಳು, ಪ್ರವಾಹದ ಹೊಸ ಸಂಕಷ್ಟದಲ್ಲಿ ಕೇರಳ

ಶುಕ್ರವಾರ ಜೆಪಿನಗರ, ಶಿವಾಜಿನಗರ, ರಾಜರಾಜೇಶ್ವರಿನಗರ, ಹೆಬ್ಬಾಳ, ವಿದ್ಯಾರಣ್ಯಪುರ ಸುತ್ತಮುತ್ತಲ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 34 ಮಿ.ಮೀನಷ್ಟು ಮಳೆಯಾಗಿದೆ.

Rain in Bengaluru for three more days

ಕೆಂಪೇಗೌಡ ಏರ್ ಪೋರ್ಟ್ ಗೆ ತೆರಳುವವರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸಬೇಕಾಯಿತು. ಇದೀಗ ಶನಿವಾರವೂ ಕೂಡ ಮಳೆ ಮುಂದುವರೆದಿದ್ದು ಮಧ್ಯಾಹ್ನ 3 ಗಂಟೆಯಿಂದಲೇ ಅಲ್ಲಲ್ಲಿ ಮಳೆಯಾಗುತ್ತಿದೆ, ಇದೀಗ ಕೆಂಗೇರಿ, ಮೈಸೂರು ರಸ್ತೆ, ವಿಧಾನಸೌಧ, ಮಲ್ಲೇಶ್ವರ, ರಾಜಾಜಿನಗರ, ಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾಗುತ್ತಿದೆ.

ಬೆಂಗಳೂರಲ್ಲಿ 31 ಡಿಗ್ರಿ ತಲುಪಿದ ಉಷ್ಣಾಂಶ: ಬಸವಳಿದ ಜನರು ಬೆಂಗಳೂರಲ್ಲಿ 31 ಡಿಗ್ರಿ ತಲುಪಿದ ಉಷ್ಣಾಂಶ: ಬಸವಳಿದ ಜನರು

ಶುಕ್ರವಾರ ಸುರಿದ ಮಳೆಗೆ ಬಾಣಸವಾಡಿ ಅಯ್ಯಪ್ಪಸ್ವಾಮಿ ದೇವಸ್ಥಾನ ಗೋಡೆ ಕುಸಿದುಬಿದ್ದಿದೆ, ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದ್ದು ಇನ್ನು ಏನೇನು ಅನಾಹುತಗಳನ್ನು ಸೃಷ್ಟಿಸುತ್ತದೆಯೋ ಎಂಬ ಆತಂಕ ಮೂಡಿದೆ. ಬೆಂಗಳೂರು, ನಗರ, ಎಚ್‌ಎಲ್‌ ಹಾಗೂ ಕೆಐಎಲ್ ಭಾಗದಲ್ಲಿ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಮುಂದುವರೆದಿದೆ. ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

English summary
After gap of two weeks, rain is back in Bengaluru and forecasted for three more days will be remained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X