ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಳೆ: ದಿನಸಿ ಮನೆಗೆ ತಲುಪಿಸುವ ಸೇವೆ ಸ್ಥಗಿತಗೊಳಿಸಿದ ಡಂಜೊ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 09: ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸರಕುಗಳನ್ನು ಸರಬರಾಜು ಮಾಡಲಾಗದೆ ಆಪ್‌ ಆಧಾರಿತ ದಿನಸಿ ವಿತರಣಾ ಇ ಕಾಮರ್ಸ್‌ ಸಂಸ್ಥೆ ಡಂಜೋ ನಗರದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಅದರ ಬಳಕೆದಾರರು ಹೇಳಿದ್ದಾರೆ.

ಬೆಂಗಳೂರಿನ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಕೆಲವು ಭಾಗಗಳು ಜಲಾವೃತವಾಗಿದ್ದು, ನಗರದ ನಿವಾಸಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ಪೋಸ್ಟ್‌ಗಳಲ್ಲಿ ದಿನಸಿ ವಿತರಣಾ ಆಪ್‌ ಡಂಜೋ ತನ್ನ ಸೇವೆ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ. ರಿಲಯನ್ಸ್‌ ಸಂಸ್ಥೆಯ ಪಾಲುದಾರ ಈ ಕಾಮರ್ಸ್‌ ಸಂಸ್ಥೆಯಾಗಿರುವ ಡಂಜೋ 19 ನಿಮಿಷಗಳಲ್ಲಿ ದಿನಬಳಕೆಯ ವಸ್ತುಗಳನ್ನು ತಲುಪಿಸುತ್ತದೆ. ಈ ಸೇವೆಯು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

Breaking; ಬೆಂಗಳೂರಿನ ಆರ್. ಆರ್. ನಗರದಲ್ಲಿ ಗುಡ್ಡ ಕುಸಿತ, ಆತಂಕBreaking; ಬೆಂಗಳೂರಿನ ಆರ್. ಆರ್. ನಗರದಲ್ಲಿ ಗುಡ್ಡ ಕುಸಿತ, ಆತಂಕ

ಬುಧವಾರದಿಂದ ಡಂಜೊ ತನ್ನ ಸೇವೆ ಕಡಿಮೆಗೊಳಿಸಿದೆ. ಅವರು ಆದೇಶಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪ್ರಸಿದ್ಧ ಕಂಪನಿಯ ಉದ್ಯೋಗಿಯೊಬ್ಬರು ಹೇಳಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ. ಬೆಂಗಳೂರಿನ ಬಳಕೆದಾರರ ಕೆಲವರು ಸಾಮಾಜಿಕ ಮಾಧ್ಯಮ ಖಾತೆಗಳು ಡಂಜೋ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಡಂಜೊ ಡೈಲಿ ಸ್ವಲ್ಪ ಸಮಯದ ನಂತರ ಹಿಂತಿರುಗುತ್ತದೆ ಎಂದು ನಮೂದಿಸಲಾಗಿದೆ.

ಮಳೆ ಹಾನಿ: ಮಕ್ಕಳಿಗೆ ಕಲಿಕಾ ಸಾಮಗ್ರಿ ಒದಗಿಸಲು ನಿರಂಜನಾರಾಧ್ಯ ಆಗ್ರಹಮಳೆ ಹಾನಿ: ಮಕ್ಕಳಿಗೆ ಕಲಿಕಾ ಸಾಮಗ್ರಿ ಒದಗಿಸಲು ನಿರಂಜನಾರಾಧ್ಯ ಆಗ್ರಹ

ಆದರೆ ಡಂಜೋ ವಕ್ತಾರರು ಹೇಳಿಕೆ ಪ್ರಕಾರ, "ನಮ್ಮ ವಿತರಣಾ ಪಾಲುದಾರರು ಬೆಂಗಳೂರು ನಗರದಲ್ಲಿ ಭಾರೀ ಮಳೆಯಿಂದ ಉಂಟಾದ ಹಾನಿಯಿಂದಾಗಿ ವಿಳಂಬವಾಗುತ್ತಿದೆ. ಅವರ ಸುರಕ್ಷತೆಯ ಹಿನ್ನೆಲೆಯಲ್ಲಿ ನಾವು ಅತಿಯಾದ ನೀರು ತುಂಬಿರುವ ಪ್ರದೇಶಗಳಲ್ಲಿ ವಿತರಣೆ ಸೇವೆಯನ್ನು ತಕ್ಕಮಟ್ಟಿಗೆ ನಿಲ್ಲಿಸಿದ್ದೇವೆ. ಮಳೆಯಿಂದಾಗಿ ಆರ್ಡರ್‌ಗಳು ವಿಳಂಬವಾಗುತ್ತಿದೆ. ಹೀಗಾಗಿ ಕಂಪನಿಯು ತನ್ನ ಗ್ರಾಹಕರಿಗೆ ಮಾಹಿತಿಯನ್ನು ನೀಡಿದೆ. ನಾವು ನಮ್ಮ ಡೆಲಿವರಿ ಪಾಲುದಾರರ ಸುರಕ್ಷತೆಗೆ ಆದ್ಯತೆ ನೀಡುತ್ತವೆ," ಎಂದು ಹೇಳಿದ್ದಾರೆ.

 ದಿನಸಿ ವಸ್ತುಗಳ ವಿತರಣೆಗೆ ನಿರಂತರ ಪ್ರಯತ್ನ

ದಿನಸಿ ವಸ್ತುಗಳ ವಿತರಣೆಗೆ ನಿರಂತರ ಪ್ರಯತ್ನ

ನಮ್ಮ ಗ್ರಾಹಕರಿಗೆ ಅವರು ತಮ್ಮ ಮನೆಗಳಿಂದ ಹೊರಬರಲು ಸಾಧ್ಯವಾಗದಿದ್ದಾಗ ದಿನನಿತ್ಯದ ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ನಮ್ಮ ತಂಡವು ಟ್ರಕ್‌ಗಳನ್ನು ಬಳಸುವುದು ಸೇರಿದಂತೆ ಜಲಾವೃತ ಪ್ರದೇಶಗಳಲ್ಲಿ ದಿನಸಿ ವಸ್ತುಗಳ ವಿತರಣೆಗೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಮ್ಮ ಗ್ರಾಹಕರಿಗೆ ಅವರ ಸರಿಯಾದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವುದನ್ನು ನಾವು ಮಾಡುತ್ತಿದ್ದೇವೆ. ಭಾರಿ ಮಳೆಯಿಂದ ನಮ್ಮ ಕಾರ್ಯಾಚರಣೆಗಳು ಶೀಘ್ರದಲ್ಲೇ ಪುನರಾರಂಭಗೊಳ್ಳುತ್ತವೆ ಎಂದು ವಕ್ತಾರರು ಹೇಳಿದರು.

 ಡಂಜೊದಲ್ಲಿ ಶೇ. 25 ಪಾಲು ಸ್ವಾಧೀನ

ಡಂಜೊದಲ್ಲಿ ಶೇ. 25 ಪಾಲು ಸ್ವಾಧೀನ

ರಿಲಯನ್ಸ್ ರಿಟೇಲ್ ಮೇಲೆ ಜನವರಿಯಲ್ಲಿ 240 ಮಿಲಿಯನ್ ಡಾಲರ್‌ ಹೂಡಿಕೆ ಮಾಡಿದೆ. ಇದು ಡಂಜೊದಲ್ಲಿ 25 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಧಾರಾಕಾರ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ಜಲಾವೃತವಾಗಿವೆ. ದೇಶದ ಟೆಕ್‌ ಹಬ್‌ನಲ್ಲಿ ಪ್ರವಾಹ ಉಂಟಾಗಲು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆರೆಗಳ ಒತ್ತುವರಿಯೇ ಪ್ರಮುಖ ಕಾರಣ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

 ಸಚಿವರ ಮುಂದೆ ಅಳಲು ತೋಡಿಕೊಂಡ ಕಂಪೆನಿಗಳು

ಸಚಿವರ ಮುಂದೆ ಅಳಲು ತೋಡಿಕೊಂಡ ಕಂಪೆನಿಗಳು

ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ತಂತ್ರಜ್ಞಾನ ಕಂಪನಿಗಳು, ಕರ್ನಾಟಕ ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥ್‌ ನಾರಾಯಣ್ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ಮಳೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 ಐಟಿ ಕಂಪನಿಗಳ ಪ್ರತಿನಿಧಿಗಳ ಜೊತೆ ಸಚಿವ ಸಭೆ

ಐಟಿ ಕಂಪನಿಗಳ ಪ್ರತಿನಿಧಿಗಳ ಜೊತೆ ಸಚಿವ ಸಭೆ

ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಟೆಕ್ ಕಾರಿಡಾರ್ ಮೇಲೆ ಅಪಾರ ಪರಿಣಾಮ ಬೀರಿತು. ಭಾರಿ ಮಳೆಯಿಂದ ಉಂಟಾದ ಸಮಸ್ಯೆಗಳ ಕುರಿತು ಚರ್ಚಿಸಲು ಅಶ್ವತ್ಥ್‌ ನಾರಾಯಣ್ ಅವರು ಕರೆದ ಸಭೆಯಲ್ಲಿ ಹಲವಾರು ಐಟಿ ಕಂಪನಿಗಳ ಪ್ರತಿನಿಧಿಗಳು ತಾವು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಆಗಿರುವ ನಷ್ಟವನ್ನು ಸರ್ಕಾರದ ಗಮನಕ್ಕೆ ತಂದರು. ಸಭೆಯಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್, ಇನ್ಫೋಸಿಸ್, ವೆಲ್ಸ್ ಫಾರ್ಗೋ, ವಿಪ್ರೋ, ಎಂಫಾಸಿಸ್, ಇಂಟೆಲ್, ಟಿಸಿಎಸ್, ಅಕ್ಸೆಂಚರ್, ಸೊನಾಟಾ ಸಾಫ್ಟ್‌ವೇರ್, ಫಿಲಿಪ್ಸ್, ಸೊಲೇಸ್ ಪ್ರತಿನಿಧಿಗಳು ಭಾಗವಹಿಸಿದ್ದರು.

English summary
App-based grocery delivery e-commerce firm Dunzo has suspended its services in the city due to rains in Bengaluru, its users said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X