ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ

ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರು ನಗರದ ಮೂರು ರೈಲು ನಿಲ್ದಾಣಗಳಲ್ಲಿನ ಫ್ಲಾಟ್‌ ಫಾರಂ ಟಿಕೆಟ್ ದರವನ್ನು 10 ರಿಂದ 50 ರೂ.ಗೆ ಏರಿಕೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನರ ಸಂಚಾರ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಕೆಎಸ್ಆರ್‌ ಬೆಂಗಳೂರು, ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಫ್ಲಾಟ್ ಫಾರಂ ಟಿಕೆಟ್ ಬೆಲೆ ಏರಿಕೆ ಮಾಡಲಾಗಿದೆ. ಈ ಹೆಚ್ಚಳ ತಾತ್ಕಾಲಿಕವಾಗಿದ್ದು, ಮುಂದಿನ ಆದೇಶದ ತನಕ ಜಾರಿಯಲ್ಲಿರಲಿದೆ.

ಭಾರತೀಯ ರೈಲ್ವೆಯ ಬೆಂಗಳೂರು ವಿಭಾಗ 7 ರೈಲುಗಳ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಲಿದೆ. ಈಗಾಗಲೇ ಸಂಚಾರ ನಡೆಸುತ್ತಿರುವ ರೈಲುಗಳ ಜೊತೆ ಹೆಚ್ಚುವರಿಯಾಗಿ 7 ರೈಲು ಸಂಚಾರ ನಡೆಸಲಿದೆ. ಈ ಸಂದರ್ಭದಲ್ಲಿ ನಿಲ್ದಾಣದಲ್ಲಿ ಜನರ ದಟ್ಟಣೆ ಉಂಟಾಗುವ ನಿರೀಕ್ಷೆ ಇದೆ.

Railway Platform Tickets Fare Hiked In Bengaluru

ಕೋವಿಡ್ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ಫ್ಲಾಟ್‌ ಫಾರಂ ದರವನ್ನು ಏರಿಕೆ ಮಾಡಲಾಗಿದೆ. ಇದು ತಾತ್ಕಾಲಿವಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಹಲವು ರಾಜ್ಯಗಳಲ್ಲಿ ರೈಲ್ವೆ ಈ ಹಿಂದೆ ಫ್ಲಾಟ್‌ ಫಾರಂ ದರವನ್ನು ಏರಿಕೆ ಮಾಡಿತ್ತು.

ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಜೊತೆ ಹಲವಾರು ಜನರು ಆಗಮಿಸುತ್ತಾರೆ. ಇದರಿಂದಾಗಿ ಫ್ಲಾಟ್ ಫಾರಂನಲ್ಲಿ ಜನರ ದಟ್ಟಣೆ ಉಂಟಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಜನರು ನಿಲ್ದಾಣಕ್ಕೆ ಆಗಮಿಸದಂತೆ ತಡೆಯಲು ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+