ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾತುರ್ಮಾಸ್ಯ: ಭಕ್ತರ ಸೇವೆ ಶ್ಲಾಘಿಸಿದ ರಾಘವೇಶ್ವರ ಶ್ರೀಗಳು

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 20 : ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ, ಒಬ್ಬ ಯಶಸ್ವಿ ನಾಯಕನ ಹಿಂದೆ ಹಲವಾರು ಮಂದಿ ಸೇವಕರ ಶ್ರಮವಿರುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿ ಹೇಳಿದರು.

ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಜುಲೈ 31ರಿಂದ ನಡೆಯುತ್ತಿರುವ ಛಾತ್ರ ಚಾತುರ್ಮಾಸ್ಯ ಸೆಪ್ಟೆಂಬರ್ 29ರಂದು ಕೊನೆಗೊಳ್ಳಲಿದ್ದು, ದಿನಕ್ಕೆ ಒಬ್ಬರಂತೆ ಸರ್ವಸೇವೆ ಕೈಗೊಳ್ಳಲಿದ್ದಾರೆ.[ಸಿಐಡಿ ಮನವಿ ವಜಾ : ರಾಘವೇಶ್ವರ ಶ್ರೀ ಸದ್ಯಕ್ಕೆ ನಿರಾಳ]

Raghaweshwara swamiji appreciated devotees in Chatra Chaaturmaasya programme, bengaluru

ಚಾತುರ್ಮಾಸ್ಯದ ಇಪ್ಪತ್ತನೇ ದಿನ ಬುಧವಾರದಂದು ಸರ್ವಸೇವೆ ಸಲ್ಲಿಸಿದ ಖ್ಯಾತ ಉದ್ಯಮಿ ಮಹಾಬಲೇಶ್ವರ ಚಿಂಚನೂರು ಅವರನ್ನು ರಾಘವೇಶ್ವರ ಶ್ರೀಗಳು ಅಭಿನಂದಿಸಿದರು.

ಶ್ರೀ ಭಾರತಿ ಪ್ರಕಾಶನದಿಂದ ಪ್ರಕಟವಾದ ಡಾ. ಗಜಾನನ ಶರ್ಮಾ ಬರೆದಿರುವ 'ಪುಸ್ತಕ ಪಾಂಡಿತ್ಯ' ಎಂಬ ನಾಟಕ ಕೃತಿಯನ್ನು ರಾಘವೇಶ್ವರ ಶ್ರೀಗಳು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಂಗೀತದಲ್ಲಿ ಅಮೋಘ ಸಾಧನೆ ಮಾಡಿದ ಕಾರ್ಕಳದ ಆತ್ರೇಯೀ ಕೃಷ್ಣಾ ಇವರಿಗೆ ಛಾತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ಧರ್ಮ ಸಭಾ ಕಾರ್ಯಕ್ರಮದಲ್ಲಿ ಆಯುರ್ವೇದ ತಜ್ಞ ಡಾ. ಗಿರಿಧರ ಖಜೆ, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.

English summary
Raghaweshwara Bharathi swamiji have organized Chatra Chaturmaasya progrmme from July 31 to September 29.Swamiji appreciated devotees in Chatra Chaaturmaasya programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X