ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರತ್ ಬಚ್ಚೇಗೌಡಗೆ ಆರ್.ಅಶೋಕ್ ಎಚ್ಚರಿಕೆ

|
Google Oneindia Kannada News

ಬೆಂಗಳೂರು,ನವೆಂಬರ್ 13: ಶರತ್ ಬಚ್ಚೇಗೌಡ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಬೇಕು. ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ. ಅನರ್ಹರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮೆಲ್ಲರ ಜವಾಬ್ದಾರಿ, ಪಕ್ಷದ ವಿರುದ್ಧ ನಡೆದುಕೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಆರ್. ಅಶೋಕ್ ರವರು ಶರತ್ ಬಚ್ಚೇಗೌಡ ವಿರುದ್ಧ ಗರಂ ಆಗಿದ್ದಾರೆ. ಯಾವುದೇ ಆತುರದ ತೀರ್ಮಾನ ಕೈಗೊಳ್ಳದೇ, ಪಕ್ಷ ಸಂಘಟನೆಗೆ ತೊಡಗಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಶರತ್ ಇನ್ನು ಯುವಕರು ಮುಂದೆ ಅವಕಾಶ ಸಿಗುತ್ತದೆ. ಆದರೆ ಈಗ ಅನರ್ಹ ಶಾಸಕರ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದ್ದಾರೆ.

ಪದೇ ಪದೇ ಬಿಜೆಪಿ ಪಕ್ಷಕ್ಕೆ ಹೊಸಕೋಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶರತ್ ಬಚ್ಚೇಗೌಡ, ಕಾಗವಾಡ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಾಜು ಕಾಗೆ ಇಕ್ಕಟ್ಟು ಸೃಷ್ಠಿಸುತ್ತಿದ್ದಾರೆ. ಈಗಾಗಲೇ ರಾಜು ಕಾಗೆ ಕಾಂಗ್ರೆಸ್ ಸೇರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇವರಬ್ಬರನ್ನು ಮನವೊಲಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ಆದರೆ ಇಬ್ಬರೂ ಅದನ್ನು ತಿರಸ್ಕರಿಸಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಹಠ ತೊಟ್ಟಂತಿದೆ.

ಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕ

ಎಲ್ಲ ಅನರ್ಹ ಶಾಸಕರಿಗೆ ಟಿಕೆಟ್ ನೀಡಲೇಬೇಕಿರುವುದರಿಂದ, ಬಂಡಾಯ ಏಳುವ ಅಭ್ಯರ್ಥಿಗಳಿಗೆ ಶಿಸ್ತು ಕ್ರಮದ ಖಡಕ್ ಸಂದೇಶ ರವಾನಿಸಿದಂತಿದೆ. ಆರ್. ಅಶೋಕ್ ಎಚ್ಚರಿಕೆ ನಡುವೆಯೇ ಶರತ್ ಬಚ್ಚೇಗೌಡ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆದು ಮುಜುಗರ ಉಂಟು ಮಾಡಿದ್ದಾರೆ.

R. Ashok Warns to Sharath Bachhegouda

ಪಕ್ಷಕ್ಕೆ ದ್ರೋಹ ಬಗೆದರೆ ಶಿಸ್ತು ಕ್ರಮ ಅಗತ್ಯ: ಆರ್.ಅಶೋಕ್
ಪದೇ ಪದೇ ಬಿಜೆಪಿ ಪಕ್ಷಕ್ಕೆ ಹೊಸಕೋಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶರತ್ ಬಚ್ಚೇಗೌಡ, ಕಾಗವಾಡ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಾಜು ಕಾಗೆ ಇಕ್ಕಟ್ಟು ಸೃಷ್ಠಿಸುತ್ತಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ, ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ, ಅನರ್ಹರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯ ಎಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

English summary
Sharath Bachegouda must be commited to the party's decision. It is the Responsibility of all of us to win the Disqualified MLA's
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X