ಸೆಪ್ಟೆಂಬರ್ ಅಂತ್ಯದೊಳಗೆ ನಗರದ ರಸ್ತೆಗುಂಡಿ ಮುಚ್ಚಲು ಗಡುವು
ಬೆಂಗಳೂರು, ಸೆಪ್ಟೆಂಬರ್ 07: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಗರದಲ್ಲಿ ಸುರಿದ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗಿರುವ ಎಲ್ಲಾ ರಸ್ತೆ ಗುಂಡಿಗಳನ್ನು ಸೆ.30ರೊಳಗೆ ಮುಚ್ಚಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 1,332 ಕಿ.ಮೀ ಉದ್ದದ ಮುಖ್ಯ ರಸ್ತೆಗಳು ಹಾಗೂ ವಾರ್ಡ್ ವ್ಯಾಪ್ತಿಯ 85,791 ಕಿ.ಮೀ ಉದ್ದದ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಹೀಗಾಗಿ ಸೆ.16ರೊಳಗೆ ಮುಖ್ಯರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಹಾಗೂ ಸೆ.30ರೊಳಗೆ ವಾರ್ಡ್ ರಸ್ತೆ ಸೇರಿದಂತೆ ಎಲ್ಲಾ ಮಾದರಿಯ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು.
ನಿಗದಿತ ಅವಧಿಯಲ್ಲಿ ಗುಂಡಿಗಳನ್ನು ಮುಚ್ಚದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇನೆ ಎಂದರು. ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿ ಬೊಮ್ಮನಹಳ್ಳಿಯಲ್ಲಿ 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ನಿಯಮಗಳ ಪಾಲನೆ ಕಡ್ಡಾಯ: ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಮಾನಿಟರಿಂಗ್ ನಡೆಯಲಿದೆ. ಮೆರವಣಿಗೆಗೆ ಯಾವುದೇ ಅವಕಾಶ ಇರುವುದಿಲ್ಲ. 20 ಜನರಿಗೆ ಮಾತ್ರ ನಿಮಜ್ಜನ ಪೂಜೆಗೆ ಅವಕಾಶ ಇರಲಿದೆ. ಸಾರ್ವಜನಿಕರಿಗೆ ಇಡುವ ಗಣಪತಿ ಬಳಿ ಲಸಿಕೆ ಅಭಿಯಾನ ನಡೆಯಲಿದೆ.
ಕೋವಿಡ್ ನಿಯಮ ಪಾಲನೆ ಮಾಡೋದು ಕಡ್ಡಾಯ ಎಂದರು. ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಗೆ ಪ್ರತ್ಯೇಕ ನಿಯಮ ಇದ್ದು, ಬೆಂಗಳೂರಿನಲ್ಲಿ ಕೆರೆಗಳಲ್ಲಿ ಪ್ರತ್ಯೇಕ ಪಾಂಡ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕವಾಗಿ ಇಟ್ಟ ಗಣಪತಿಗೆ ಮಾತ್ರ ನಿಮಜ್ಜನೆಗೆ ಅವಕಾಶ ಇರಲಿದೆ.
ನಾಲ್ಕು ಅಡಿ ಎತ್ತರದ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಇದ್ದು, ರಾತ್ರಿ 9 ರವರೆಗೆ ಮಾತ್ರ ನಿಮಜ್ಜನಕ್ಕೆ ಅವಕಾಶ, ನಂತರ ಎಂದಿನಂತೆ ಕರ್ಫ್ಯೂ ಇರಲಿದೆ. ಈಜುಗಾರರಿಗೆ ಮಾತ್ರ ನಿಮಜ್ಜನಕ್ಕೆ ಅವಕಾಶವಿದೆ.
ಮೊಬೈಲ್ ಟ್ಯಾಂಕ್: ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳ ನಿಮಜ್ಜನೆಗೆ ಮೊಬೈಲ್ ಟ್ಯಾಂಕ್ ನಿಯೋಜಿಸಿದ್ದು, ಮೊಬೈಲ್ ಟ್ಯಾಂಕ್ ಮನೆಗಳ ಬಳಿ ಹೋಗಿ ಮೈಕ್ ಮೂಲಕ ಕರೆ ನೀಡಲಿದ್ದಾರೆ.
ವಾರ್ಡ್ನಲ್ಲಿ ಒಂದೇ ಗಣಪತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ಇದ್ದು, ಒಂದಕ್ಕಿಂತ ಹೆಚ್ಚು ಪ್ರತಿಷ್ಠಾಪನೆಗೆ ಮನವಿ ಬಂದರೆ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ತೀರ್ಮಾನ ಮಾಡ್ತಾರೆ. ಐದು ದಿನಗಳ ಬಳಿಕ ನಗರದಲ್ಲಿ ಗಣಪತಿ ಮೂರ್ತಿ ನಿಮಜ್ಜನಕ್ಕೆ ಅವಕಾಶವಿಲ್ಲ ಎಂದು ಸಚಿವರು ವಿವರಿಸಿದರು.
ಅನಾರೋಗ್ಯದಲ್ಲಿರುವವರ ಮಾಹಿತಿ ಸಂಗ್ರಹ: 57,528 ಮಂದಿಗೆ ಆರೋಗ್ಯ ಸಮಸ್ಯೆ ಇರೋದು ಪತ್ತೆಯಾಗಿದೆ. ಡಯಾಬಿಟಿಸ್ 50.86 % ಹೈಪರ್ ಟೆನ್ಷನ್ 32.82 % ಹೃದಯ ಸಂಬಂಧಿ ಇರುವವರು 2.48 % ಥೈರಾಯ್ಡ್ ಸಮಸ್ಯೆ ಇರುವವರು 2.99 ರಷ್ಟಿದ್ದಾರೆ ಎಂದರು.












Click it and Unblock the Notifications