"ಕಾನೂನು ಎಲ್ಲರಿಗೂ ಒಂದೇ, ನಮಗೂ ಕಾರಿಗೂ ಸಂಬಂಧವಿಲ್ಲ" ಆರ್ ಅಶೋಕ್ ಸ್ಪಷ್ಟನೆ
Recommended Video
ಬೆಂಗಳೂರು, ಫೆಬ್ರವರಿ 13: ಬಳ್ಳಾರಿಯಲ್ಲಿ ಸೋಮವಾರದಂದು ನಡೆದ ಅಪಘಾತವೊಂದರಲ್ಲಿ ಪಾದಚಾರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್ ಅಶೋಕ ಪ್ರತಿಕ್ರಿಯಿಸಿದ್ದಾರೆ. ಅಪಘಾತ ನಡೆದ ಕಾರಿನಲ್ಲಿ ಅಶೋಕ ಅವರ ಪುತ್ರ ಶರತ್ ಕೂಡ ಇದ್ದರು ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.
ಆರ್ ಅಶೋಕ್ ಮಗ ಎಂಬ ಕಾರಣಕ್ಕೆ ಅಪಘಾತ ಸ್ಥಳದಿಂದ ಅವರನ್ನು ಎಸ್ಕೇಪ್ ಮಾಡಲಾಗಿದೆ, ಪೊಲೀಸರು ಎಂಬ ಅನುಮಾನ, ಆರೋಪಗಳೂ ಕೇಳಿಬಂದಿದ್ದವು. ಈ ಕುರಿತು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ. 'ಕಾರಿಗೂ ನಮಗೂ ಸಂಬಂಧ ಇಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಒಂದೇ" ಎಂದು ಹೇಳಿದ್ದಾರೆ.

"ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಸಚಿನ್ ಎಂಬಾತ ಮೃತಪಟ್ಟಿದ್ದಾನೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಈ ಬಗ್ಗೆ ಪರ ಅಥವಾ ವಿರೋಧದ ಹೇಳಿಕೆ ನೀಡುವುದಿಲ್ಲ. ನನ್ನ ಮಗನಿಗೆ ಏಟು ಬಿದ್ದಿದ್ದರೆ, ಗಾಯಗಳಾಗಿದ್ದರೆ ತನಿಖೆ ವೇಳೆ ಖಂಡಿತ ಹೊರಬರುತ್ತದೆ" ಎಂದಿದ್ದಾರೆ.
"ನನ್ನ ಹೆಸರು ಕೆಲವು ಮಾಧ್ಯಮಗಳಲ್ಲಿ ಪ್ರಸ್ತಾಪ ಆಗಿದೆ. ಅದಕ್ಕಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಯಾರು ತಪ್ಪಿತಸ್ಥರೋ ಅವರ ಮೇಲೆ ಕ್ರಮ ಆಗುತ್ತದೆ. ತನಿಖೆಯಿಂದ ಸತ್ಯ ಹೊರಬರಲಿದೆ" ಎಂದು ತಿಳಿಸಿದ್ದಾರೆ.
ಸೋಮವಾರ ಫೆ.10 ರಂದು ಹಂಪಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಕಾರಿನಲ್ಲಿ ಐವರು ಇದ್ದರು. ಈ ಸಮಯ ಕಾರು ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿಯಾಗಿ ಪಾದಚಾರಿ ರವಿ ನಾಯ್ಕ್ ಸೇರಿದಂತೆ ಕಾರಿನಲ್ಲಿದ್ದ ಸಚಿನ್ ಮೃತಪಟ್ಟಿದ್ದರು.












Click it and Unblock the Notifications