ವಾಮನ್ ರನ್ನು ಹುದ್ದೆಯಿಂದ ಕಿತ್ತು ಹಾಕಲು ಆಗ್ರಹಿಸಿ ಮೋದಿಗೆ ಪತ್ರ

ಗೋಹತ್ಯೆ, ಗೋಮಾಂಸ ಸೇವನೆ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಮಾಧ್ಯಮ ವಕ್ತಾರ ಡಾ. ವಾಮನ್ ಆಚಾರ್ಯ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತು ಹಾಕುವಂತೆ ಆಗ್ರಹಿಸಲಾಗಿದೆ.

ಬೆಂಗಳೂರು, ಜೂನ್ 05: ಗೋಹತ್ಯೆ, ಗೋಮಾಂಸ ಸೇವನೆ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಮಾಧ್ಯಮ ವಕ್ತಾರ ಡಾ. ವಾಮನ್ ಆಚಾರ್ಯ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತು ಹಾಕುವಂತೆ ಆಗ್ರಹಿಸಲಾಗಿದೆ.

ಪಕ್ಷದ ನಿಲುವು ಮಾತ್ರ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಬೇಕು ಎನ್ನುವುದರ ಪರವಾಗಿಯೇ ಇದೆ. ಒಂದು ವೇಳೆ ಅವರು ಗೋ ಹತ್ಯೆ ನಿಷೇಧ ಕಾನೂನು ಜಾರಿ ವಿರುದ್ಧವಾಗಿ ಹೇಳಿಕೆ ನೀಡಿದ್ದರೆ ಅದನ್ನು ಅವರು ಸರಿಪಡಿಸಿಕೊಳ್ಳಬೇಕು ಎಂದು ಸಿಟಿ ರವಿ ಹೇಳಿದ್ದರು.[ವಾಮನಾಚಾರ್ಯ ಹೇಳಿಕೆಗೂ ನಮಗೂ ಸಂಬಂಧವಿಲ್ಲ: ಬಿಜೆಪಿ]

Public demand to sack Dr Vaman Acharya from BJP media spokesperson post

ಡಾ. ವಾಮನ್ ಆಚಾರ್ಯ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಇನ್ನೊಂದೆಡೆ ಗೋಹತ್ಯೆ ಪರವಾಗಿ ಹೇಳಿಕೆ ನೀಡಿರುವ ವಾಮನಾಚಾರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಬಿ.ಎಸ್. ವೆಂಕಟನಾರಾಯಣ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.[ವಾಮನ್ ಆಚಾರ್ಯ- ಮಂಡಳಿ ಬಿಟ್ಟ ಕಟ್ಟಕಡೆಯ ಬಿಜೆಪಿಯವ]

ನಿಲುಮೆ.ಕಾಂನ ರಾಕೇಶ್ ಶೆಟ್ಟಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ.

* ಬಿಜೆಪಿಯ 'ನಾಯಕ'ರಾದವರೊಬ್ಬರು ಇಂತಹ ಹೇಳಿಕೆ ಕೊಡುವುದಕ್ಕೂ, ಬಿಜೆಪಿಯ "ಮಾಧ್ಯಮ ವಕ್ತಾರ" ರೊಬ್ಬರು ಇಂತಹ ಹೇಳಿಕೆ ಕೊಡುವುದಕ್ಕೂ ವ್ಯತ್ಯಾಸವಿಲ್ಲವೇ?
* ಡಾ.ವಾಮನಾಚಾರ್ಯರು ಸುವರ್ಣ ವಾಹಿನಿಯಲ್ಲಿ ಚರ್ಚೆಗೆ ಹೋಗಿದ್ದು ಬಿಜೆಪಿ ಪಕ್ಷದ ಪ್ರತಿನಿಧಿಯಾಗಿಯೇ ಹೊರತು ವ್ಯಕ್ತಿಯಾಗಿ ಅಲ್ಲ.(ಇದೇ ಮಾತನ್ನು ನಿರೂಪಕರು ಅವರಿಗೆ ಚರ್ಚೆಯಲ್ಲಿ ನೆನಪಿಸುತ್ತಾರೆ). ಹಾಗಿದ್ದಾಗ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲವೆನ್ನುವುದು ನೈತಿಕವಾಗಿ ಸರಿಯೆನಿಸುತ್ತದೆಯೇ?['ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್]

Suresh Kumar

* ನಿಮ್ಮ ಪಕ್ಷದ ಮಾಧ್ಯಮ ವಕ್ತಾರರ ಹೇಳಿಕೆಯೇ ನಿಮ್ಮ ಪಕ್ಷಕ್ಕೆ ಸಂಬಧಿಸಿದ್ದಲ್ಲ ಎನ್ನುವುದಾದರೆ, ಬಿಜೆಪಿ ಪಕ್ಷದ ನಿಲುವುಗಳನ್ನು ಮಂಡಿಸಲು 'ವಕ್ತಾರ'ರನ್ನು ಬಿಟ್ಟು ಬೇರೆ ಅಧಿಕೃತ ವ್ಯವಸ್ಥೆ, ವ್ಯಕ್ತಿಗಳಿದ್ದಾರೆಯೇ? ತಿಳಿಸಿ.[ಗೋ ಹತ್ಯೆ ನಿಷೇಧ: ಕೇರಳ ಸರ್ಕಾರದ ನಿಲುವು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ]
* ಒಂದು ವೇಳೆ ಚರ್ಚೆಯಲ್ಲಿ ವಾಮನಾಚಾರ್ಯರು ಹೇಳಿದ್ದೆಲ್ಲವೂ Logical, Practical ವಿಚಾರಗಳೆನ್ನುವುದು ಬಿಜೆಪಿಯ ನಾಯಕರ ವಾದವಾಗುವುದಾದರೇ,ಇದುವರೆಗೂ ಪಕ್ಷ ಈ ವಿಷಯದಲ್ಲಿ Illogical, Impractical ಆಗಿ ನಡೆದುಕೊಂಡಿದೆಯೇ? ಲಾಜಿಕಲ್ ವಾದವೇ ಸರಿಯೆನ್ನುವುದಾದರೇ, ಇದೇ ವಿಷಯವಾಗಿ ಭಾವನಾತ್ಮಕ ಭಾಷಣಗಳನ್ನು ನಂಬಿಕೊಂಡು ಗೋ ರಕ್ಷಣೆಗಾಗಿ ತಲೆಕೊಟ್ಟ ಕಾರ್ಯಕರ್ತರ ಪ್ರಾಣಕ್ಕೆ ಬೆಲೆ ಇಲ್ಲವೇ? [ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]
* ಹೇಳಿಕೆಯನ್ನು ಸಂಪೂರ್ಣವಾಗಿ ಎಲ್ಲಿ ಹಿಂಪಡೆದರು? ಎಲ್ಲಿ ಯಾರಲ್ಲಿ ಕ್ಷಮೆ ಕೇಳಿದ್ದಾರೆ? ತಿಳಿಸಿ.
* ವೈಯುಕ್ತಿಕವಾಗಿ ವಾಮನಾಚಾರ್ಯರು ಇಂತಹ ಹೇಳಿಕೆಯನ್ನು ನೀಡಿದ್ದರೂ, ಪಕ್ಷದ ಪ್ರಮುಖ ನಾಯಕರಾಗಿ ಇಂತಹ ವಿಷಯಗಳನ್ನು ಅವರೇಕೆ ಕಾರ್ಯಕರ್ತರಿಗೇಕೆ ಮನದಟ್ಟು ಮಾಡಿಕೊಡಲಿಲ್ಲ. ನಿಮ್ಮ ಪಕ್ಷದಲ್ಲಿ ನಾಯಕರಿಗೂ, ಕಾರ್ಯಕರ್ತರಿಗೂ ನಿಲುವು ಬದಲಿಸಿಕೊಳ್ಳಲು ಸೂಕ್ತ ವೇದಿಕೆ ಇಲ್ಲವೇ?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+