ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು
ಕರ್ನಾಟಕದಲ್ಲಿ ಜೂನ್ 1ರಿಂದ ಶಾಲೆಗಳು ಅಧಿಕೃತವಾಗಿ ಆರಂಭವಾಗಿವೆ. ಆಟದ ಜೊತೆ ಮಕ್ಕಳಿಗೆ ಪಾಠವೂ ಆರಂಭವಾಗಲಿದೆ. ಕನ್ನಡ, ಇಂಗ್ಲೀಷು, ಸಂಸ್ಕೃತ, ಹಿಂದಿಯ ಜೊತೆ ಸಮಾಜಶಾಸ್ತ್ರ, ಗಣಿತ, ವಿಜ್ಞಾನದ ಪಾಠಗಳೂ ಶುರುವಾಗಲಿವೆ.
ಆದರೆ, ವಿಜ್ಞಾನಪಾಠದಲ್ಲಿ ಗೋವಿನ ಬಗ್ಗೆ ವಿಷಯವಿದ್ದರೆ ಏನು ಹೇಳಬೇಕೆಂದು ತಿಳಿಯದೆ ಶಿಕ್ಷಕರೇ ಕಕ್ಕಾಬಿಕ್ಕಿಯಾಗುವಂಥ ಸಂಗತಿಯೊಂದನ್ನು ನ್ಯಾಯಮೂರ್ತಿಗಳೊಬ್ಬರು ಇಡೀ ದೇಶಕ್ಕೆ ಪಾಠ ಮಾಡಿದ್ದಾರೆ. ಗೋಮಾಂಸಕ್ಕಾಗಿ ಹೋರಾಟ ಮಾಡುತ್ತಿರುವವರು ಕೂಡ ಈ ಪಾಠ ಕೇಳಿ ಅಚ್ಚರಿಗೊಂಡಿದ್ದಾರೆ.
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು ಆದೇಶ ಹೊರಡಿಸಿರುವ ರಾಜಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಮಹೇಶ್ ಚಂದ್ರ ಶರ್ಮಾ ಅವರು, ಗೋವಿನ ಬಗ್ಗೆ ಹೇಳಿರುವ ಇನ್ನಷ್ಟು ರೋಚಕ ಸಂಗತಿಗಳು, ಗೋವಿನ ಬಗ್ಗೆ ಅಧ್ಯಯನ ನಡೆಸಿರುವ ಪಂಡಿತರು ಕೂಡ ಕಕ್ಕಾಬಿಕ್ಕಿಯಾಗುವಂತಿವೆ.
ಅದೇನಪ್ಪಾ ಅಂದ್ರೆ, ಅತ್ಯಂತ ಪವಿತ್ರವಾದ ಗೋವು ಆಮ್ಲಜನಕವನ್ನೇ ಉಚ್ವಾಸ ನಿಶ್ವಾಸ ಮಾಡುತ್ತವೆ ಎಂದಿದ್ದಾರೆ. ಎಂದರೆ, ಗೋವು ಕಾರ್ಬನ್ ಡೈಆಕ್ಸೈಡನ್ನು ಹೊರಬಿಡುವುದೇ ಇಲ್ಲ. ವಿಜ್ಞಾನಿಗಳಿಗೂ ತಿಳಿಯದ ಮತ್ತೊಂದು ಸಂಗತಿಯೆಂದರೆ, ಗೋವುಗಳು ತಮ್ಮ ಕೊಂಬಿನಿಂದ ಕಾಸ್ಮಿಕ್ ಕಿರಣಗಳನ್ನು ಹೀರಿಕೊಳ್ಳುತ್ತವೆಯಂತೆ.['ರಾಷ್ಟ್ರೀಯ ಪ್ರಾಣಿ'ಗೆ ಗೋವು ಶಿಫಾರಸ್ಸು ಮಾಡಿದ ರಾಜಸ್ಥಾನ ಹೈಕೋರ್ಟ್]
ನ್ಯಾಯಮೂರ್ತಿಯಾಗಿ ತಮ್ಮ ಕಟ್ಟಕಡೆಯ ದಿನ ಖಾಸಗಿ ಸುದ್ದಿ ವಾಹನಿಗೆ ನೀಡಿರುವ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ, ಹಾಸ್ಯಕ್ಕೆ ಗ್ರಾಸವಾಗಿದೆ. ಅವರು ಹೇಳಿರುವ ಮತ್ತಷ್ಟು ರೋಚಕ ಸಂಗತಿಗಳು ಕೆಳಗಿನಂತಿವೆ.

ಗೋವುಗಳೇ ಒಂದು ಆಸ್ಪತ್ರೆಯಿದ್ದಂತೆ

ಹಿಂದಿನ ಜನುಮದ ಪಾಪ ನಾಶಿನಿ ಗೋಮೂತ್ರ

ಗೋಡೆಗೆ ಗೋವಿನ ಸೆಗಣಿಯನ್ನು ಮೆತ್ತಿದರೆ
ರಷ್ಯಾದ ವಿಜ್ಞಾನಿಗಳ ಪ್ರಕಾರ, ಮನೆಯ ಗೋಡೆಗೆ ಗೋವಿನ ಸೆಗಣಿಯನ್ನು ಮೆತ್ತಿದರೆ ಮನೆಯೊಳಗಿನವರನ್ನು ಆಘಾತಕಾರಿ ಕಿರಣಗಳಿಂದ ರಕ್ಷಣೆ ಸಿಗುತ್ತದೆ. ಬೆರಣಿಯಿಂದ ಪ್ರತಿವರ್ಷ 4,500 ಲೀಟರ್ ನಷ್ಟು ಬಯೋಗ್ಯಾಸನ್ನು ಉತ್ಪಾದಿಸಬಹುದು. ಇದರಿಂದ 6.8 ಲಕ್ಷ ಟನ್ ನಷ್ಟು ಕಟ್ಟಿಗೆಯನ್ನು ಉಳಿಸಬಹುದು ಮತ್ತು 14 ಕೋಟಿ ಮರಗಳನ್ನು ಸಂರಕ್ಷಿಸಬಹುದು.

ಗೋವಿನ ಹಾಲಿನಿಂದ ಕ್ಯಾನ್ಸರ್ ನಿರ್ನಾಮ
ಗೋವಿನ ಹಾಲು ಕುಡಿದರೆ ಕ್ಯಾನ್ಸರ್ ಕಣಗಳು ನೇರವಾಗಿ ರಕ್ತ ಸೇರುವುದನ್ನು ತಡೆದಂತಾಗುತ್ತದೆ. ಗೋವಿನ ದೊಡ್ಡಕರಳು 180 ಅಡಿಯಷ್ಟಿದ್ದು, ಅದು ಉತ್ಪಾದಿಸುವ ಹಾಲಿನಲ್ಲಿ ಕೆರೊಟಿನ್ ಇರುವುದರಿಂದ, ಅದನ್ನು ಸೇವಿಸುವ ಮಾನವನ ದೇಹದಲ್ಲಿ ವಿಟಮಿನ್ ಎ ಉತ್ಪತ್ತಿಯಾಗುತ್ತದೆ.

ಗಂಡು ನವಿಲು ಅಪ್ಪಟ ಬ್ರಹ್ಮಚಾರಿಯಂತೆ
ಗೋವಿನ ಸಂಗತಿಯಲ್ಲದೆ, ನವಿಲಿನ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅದೇನೆಂದರೆ, ಬಣ್ಣದ ಗೆರೆಬಿಚ್ಚಿ ಎಲ್ಲರನ್ನು ನಲಿಸುವ ನವಿಲು ಅಲಿಯಾಸ್ ಮಯೂರ ಅಪ್ಪಟ 'ಬ್ರಹ್ಮಚಾರಿ'. ಅದು ಹೆಣ್ಣು ನವಿಲೊಂದಿಗೆ ಮಿಲನ ಮಹೋತ್ಸವವನ್ನು ಎಂದೂ ಆಚರಿಸಿಕೊಳ್ಳುವುದಿಲ್ಲ. ಗಂಡು ನವಿಲು ಸುರಿಸುವ ಕಣ್ಣೀರನ್ನು ಕುಡಿದೇ ಹೆಣ್ಣು ನವಿಲು ಸಂತಾನೋತ್ಪತ್ತಿ ಮಾಡುತ್ತದಂತೆ.

ಗಂಡು ಹೆಣ್ಣು ನವಿಲುಗಳ ರತಿಕ್ರೀಡೆ
ಈ ವಾದಗಳನ್ನು ಕೇಳಿ ಟ್ವಿಟ್ಟರ್ ಹಾಸ್ಯ ಸಾಹಿತಿಗಳು ಎದ್ದುಬಿದ್ದು ನಗುತ್ತಿದ್ದಾರೆ. ಹೆಣ್ಣು ನವಿಲಿನ ಮೇಲೆರಗಿ ಗಂಡು ರತಿಕ್ರೀಡೆಯಾಡುತ್ತಿರುವ ಚಿತ್ರ, ವಿಡಿಯೋಗಳನ್ನು ಹಾಕಿ, ನೋಡಿ ನಿವೃತ್ತ ನ್ಯಾಯಮೂರ್ತಿಗಳೇ ಏನಂತೀರಿ ಎಂದು ಪ್ರಶ್ನಿಸುತ್ತಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications