ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯು ಕಾಲೇಜು ಈ ಬಾರಿ ಎರಡು ವಾರ ಮೊದಲೇ ಆರಂಭ!

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ರಾಜ್ಯದ ಪದವಿಪೂರ್ವ ಕಾಲೇಜುಗಳು ಈ ವರ್ಷ ಪ್ರತಿವರ್ಷಕ್ಕಿಂತ ಈ ಶೈಕ್ಷಣಿಕ ವರ್ಷದಲ್ಲಿ ಎರಡು ವಾರ ಮೊದಲೇ ಆರಂಭಗೊಳ್ಳಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಪ್ರತಿ ವರ್ಷ ಜೂನ್ 1 ರಿಂದ ಪದವಿಪೂರ್ವ ಕಾಲೇಜುಗಳ ತರಗತಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಎರಡು ವಾರ ಮುಂಚಿತವಾಗಿಯೇ ಅಂದರೆ ಮೇ ಮಧ್ಯದಲ್ಲಿ ತರಗತಿಗಳನ್ನು ಆರಂಭಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ದೇಶದ ಇತರೆ ರಾಜ್ಯಗಳಾದ ತಮಿಳುನಾಡು ಮತ್ತಿತರೆ ರಾಜ್ಯಗಳಿಗಿಂತ ಉನ್ನತ ಶಿಕ್ಷಣಕ್ಕೆ ರಾಜ್ಯದ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಕಡಿಮೆ ಇದ್ದು ರಾಜ್ಯದಲ್ಲಿ ಶೇ.26.5 ರಷ್ಟು ವಿದ್ಯಾರ್ಥಿಗಳು ಮಾತ್ರ ಎಸ್ಸೆಸ್ಸೆಲ್ಸಿ ನಂತರ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈ ಇಳಿಕೆಯಾದ ಉನ್ನತ ಶಿಕ್ಷಣದ ಪ್ರಮಾಣವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

PU academic year may begin by mid-may

ಎಸ್ಸೆಸ್ಸೆಲ್ಸಿ ಪರೀಕ್ಷೆ ನಂತರ ಮೂರು ತಿಂಗಳ ಕಾಲ ಸತತ ರಜಾ ದಿನಗಳು ಬರುವುದರಿಂದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯದೇ ಉದ್ಯೋಗ ಮತ್ತಿತರೆ ಕಾರಣಗಳಿಗಾಗಿ ಕಾಲೇಜಿನಿಂದ ಹೊರಗುಳಿಯುತ್ತಿದ್ದಾರೆ.

ಈ ಮೂರು ತಿಂಗಳು ಅವಧಿಯಲ್ಲಿ ವಿದ್ಯುರ್ಥಿಗಳು ಮನೆಯಲ್ಲಿ ಖಾಲಿ ಇರುವುದರಿಂದ ಹಲವಾರು ಕಾರಣಗಳಿಂದಾಗಿ ಕಾಲೇಜಿನಿಂದ ವಿಮುಖಗೊಳ್ಳುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಎರಡು ವಾರಗಳು ಮುಂಚಿತವಾಗಿಯೇ ಕಾಲೇಜಿನತ್ತ ಸೆಳೆಯಲು ಕಾಲೇಜುಗಳ ಆರಂಭದ ಅವಧಿಯನ್ನೇ ಬದಲಾವಣೆ ಮಾಡಲಾಗಿದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್

ಪದವಿಪೂರ್ವ ಶಿಕ್ಷಣ ಇಲಾಖೆ ಈ ನಿರ್ಧಾಋದಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಲ್ಲಿ ಅಸಮಾಧಾನ ಉಂಟಾಗಿದ್ದು ಎರಡು ವಾರಗಳ ರಜಾಕಾಲಕ್ಕೆ ತತ್ವಾರ ಬರಲಿದೆ ಎನ್ನುವುದು ಉಪನ್ಯಾಸಕರ ಆತಂಕವಾಗಿದೆ.

ಎರಡು ವಾರಗಳ ಮೊದಲೇ ಕಾಲೇಜು ಆರಂಭಗೊಳ್ಳುವುದರಿಂದ ಹಿಂದಿನ ವರ್ಷದ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಮೌಲ್ಯಾಂಕನ ಪ್ರಕ್ರಿಯೆಗೆ ತೊಂದರೆಯಾಗಲಿದೆ ಎಂದು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಆತಂಕವ್ಯಕ್ತಪಡಿಸಿದ್ದಾರೆ.

English summary
Pre-university colleges might begin their academic year nearly two weeks earlier than usual this time, said department. While every year, classes begin on June 1, this time they are likely to commence by mid-may, said officials, adding that move istoenable early preparations for the final exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X