ಜಗದೀಶ್ ಹತ್ಯೆ ಆರೋಪಿಗಳು 14 ದಿನಗಳ ಕಾಲ ಪೊಲೀಸ್ ವಶಕ್ಕೆ

ನೆಲಮಂಗಲ, ಅ.22: ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ ಮಧು ಮತ್ತು ಹರೀಶ್ ಬಾಬು ಅವರನ್ನು ನೆಲಮಂಗಲ ಜೆಎಫ್ ಎಂಸಿ ನ್ಯಾಯಾಲಯಕ್ಕೆ ಗುರುವಾರ ಮಧ್ಯಾಹ್ನ ಹಾಜರುಪಡಿಸಲಾಯಿತು. ಇಬ್ಬರು ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಬಂಧನಕ್ಕೆ ನೀಡಿ ಆದೇಶಿಸಲಾಗಿದೆ.

ನೆಲಮಂಗಲದ ಜೆಎಂಎಫ್‌ಸಿ ನ್ಯಾಯಲಯದ ಜಡ್ಜ್ ಪ್ರಕಾಶ್ ಅವರು ಮೇಲ್ಕಂಡ ಆದೇಶ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಲಾಗಿತ್ತು. ಇಬ್ಬರು ಆರೋಪಿಗಳನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದ ವಿಶೇಷ ಸೆಲ್ ನಲ್ಲಿರಿಸಿ ವಿಚಾರಣೆ ನಡೆಸಲಾಗುತ್ತದೆ.[ಮಧು, ಹರೀಶ್ ಬಾಬು ಬೆಂಗಳೂರಿಗೆ]

Doddaballapur PSI Jagadish murder case

ಅಕ್ಟೋಬರ್ 16ರ ಶುಕ್ರವಾರ ಮಧ್ಯಾಹ್ನ ನೆಲಮಂಗಲ ಬಳಿ ತಮ್ಮನ್ನು ಹಿಡಿಯಲು ಬಂದ ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಜಗದೀಶ್ ಅವರನ್ನು ಮಧು ಮತ್ತು ಹರೀಶ್ ಬಾಬು ಅವರು ಹತ್ಯೆ ಮಾಡಿದ್ದರು. ಜಗದೀಶ್ ಅವರ ಪಿಸ್ತೂಲ್ ಮತ್ತು ಪೇದೆ ವೆಂಕಟೇಶಮೂರ್ತಿ ಅವರ ಬೈಕ್ ಕದ್ದು ಪರಾರಿಯಾಗಿದ್ದರು ಜಗದೀಶ್ ಅವರ ಪಿಸ್ತೂಲ್ ಈಗ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಪತ್ತೆಯಾಗಿದೆ.

ಅಕ್ಟೋಬರ್ 19ರ ಸೋಮವಾರ ಸಂಜೆ ಇಬ್ಬರು ಆರೋಪಿಗಳು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ನಾಗ್ಪುರಕ್ಕೆ ತೆರಳಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬಾನೋತ್ ನೇತೃತ್ವದ ಪೊಲೀಸರ ತಂಡ ಬುಧವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿತ್ತು. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+