• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಎ ವಿರುದ್ಧ ಪ್ರತಿಭಟನೆ: ಬೆಂಗಳೂರಲ್ಲಿ 9 ಮಾರುಕಟ್ಟೆಗಳು ಬಂದ್

|

ಬೆಂಗಳೂರು, ಜನವರಿ 21: ನಗರದ 9 ಮಾರುಕಟ್ಟೆಗಳನ್ನು ಬಂದ್ ಮಾಡಿ ಸಿಎಎ, ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಆರಂಭವಾಗಿದೆ.

ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೀತಿ ವಿರುದ್ಧ ಬೆಂಗಳೂರಲ್ಲಿ ಮತ್ತೆ ಧ್ವನಿ ಎದ್ದಿದೆ.

ಬೆಂಗಳೂರಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ಒಂದು ತಿಂಗಳಲ್ಲಿ 82 ಪ್ರತಿಭಟನೆಗಳು ನಡೆದಿದ್ದವು. ದೆಹಲಿಯಲ್ಲೂ ಇಷ್ಟು ಪ್ರತಿಭಟನೆಗಳು ನಡೆದಿರಲಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ.

ಸಿಎಎ ಕುರಿತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದೇನು?

ನಗರದ ಚಾಂದಿನಿ ಚೌಕದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದ್ದು, ಕಂಟೋನ್ಮೆಂಟ್ ಆಸುಪಾಸಿನಲ್ಲಿರುವ 9ಕ್ಕೂ ಅಧಿಕ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ಸಿದ್ಧರಾಗಿದ್ದಾರೆ. 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಬರೋಬ್ಬರಿ 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ಡಿಸೆಂಬರ್ 15ರ ಸಂದರ್ಭದಲ್ಲಿ ಬೆಂಗಳೂರಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ವಾರದಲ್ಲಿ ಕನಿಷ್ಠ 4 ಪ್ರತಿಭಟನೆಗಳು ನಡೆದಿವೆ. ಅದಾದ ಬಳಿಕ ಅದರ ಸಂಖ್ಯೆ ಹೆಚ್ಚಳವಾಗಿತ್ತು. ಡಿಸೆಂಬರ್‌ನಿಂದ 40 ಮನವಿಗಳು ಬಂದಿದ್ದವು ಅದರಲ್ಲಿ 35 ಮನವಿಗಳನ್ನು ಪುರಸ್ಕರಿಸಲಾಗಿತ್ತು. 144 ಸೆಕ್ಷನ್ ಜಾರಿಯಾದ ಸಂದರ್ಭದಲ್ಲಿ ಬಂದ ಮನವಿಗಳನ್ನು ತಿರಸ್ಕರಸಿಲಾಗಿತ್ತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದರು.

ಬಹುತೇಕ ಪ್ರತಿಭಟನೆಗಳು ಟೌನ್‌ಹಾಲ್ ಎದುರು ನಡೆದಿದ್ದವು. ಅದನ್ನು ಹೊರತುಪಡಿಸಿ ಫ್ರೀಡಂಪಾರ್ಕ್ ಎದುರು ಅತಿಹೆಚ್ಚು ಪ್ರತಿಭಟನೆಗಳು ನಡೆದಿವೆ. ಡಿಸೆಂಬರ್ 18ರಿಂದ 21ರ ಮಧ್ಯೆ 144 ಸೆಕ್ಷನ್ ಜಾರಿಯಲ್ಲಿರುವಾಗ ಪ್ರತಿಭಟನೆ ಮಾಡಿದ 120 ಜನರನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಪ್ರತಿಭಟನಾಕಾರರ ಬಂಧನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Protests have begun against the CAA and the NRC, 9 Markets Are Closed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X