ಎಲಿವೇಟೆಡ್ ಕಾರಿಡಾರ್ ಬೇಡ, ಮೌರ್ಯವೃತ್ತದಲ್ಲಿ ನಾಳೆ ಪ್ರತಿಭಟನೆ
ಬೆಂಗಳೂರು, ಮಾರ್ಚ್ 15: ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ವಿರೋಧಿಸಿ ಸಿಟಿಜನ್ ಫಾರ್ ಬೆಂಗಳೂರು ಫೋರಂ ಮಾರ್ಚ್ 16ರಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದಲ್ಲಿ ಸರ್ಕಾರದ ಎಲಿವೇಟೆಡ್ ಕಾರಿಡಾರ್ ಯೋಜನೆ ಪೂರ್ಣಗೊಳ್ಳಲು ಮೂರು ಸಾವಿರಕ್ಕೂ ಅಧಿಕರ ಮರಗಳು ಧರೆಗೆ ಉರುಳುತ್ತಿವೆ. ಜೊತೆಗೆ ಪ್ರಮುಖ ಕೆರೆಗಳ ಒತ್ತುವರಿಯಾಗುತ್ತಿದೆ. ಈ ಯೋಜನೆ ನಗರದ ವಾತಾವರಣದ ಮೇಲೆ ದುಷ್ಪರಿಣಾಮ ಬೀರಲಿದ್ದು, ಸರ್ಕಾರ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ಮರಗಳ ಮಾರಣಹೋಮ ಮಾಡುವ ಬದಲು ಉಪನಗರ ರೈಲು, ಬಸ್ ಸಂಪರ್ಕ ವ್ಯವಸ್ಥೆ, ಮೆಟ್ರೋ ರೈಲನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಯೋಜನೆಯನ್ನು ಕೈಬಿಟ್ಟು ಸಮೂಹ ಸಾರಿಗೆಯತ್ತ ಹೆಚ್ಚು ಗಮನವಹಿಸಬೇಕು. ನಮಗೆ ಕಾಂಕ್ರೀಟ್ ಸಾಕು, ಸಮೂಹ ಸಾರಿಗೆ ಬೇಕು ಎಂದು ಆಗ್ರಹಿಸಿದ್ದಾರೆ. ಬೃಂದಾ ಶ್ರೀಧರ್ ಎನ್ನುವವರು ಎಲಿವೇಟೆಡ್ ಕಾರಿಡಾರ್ ಬೇಡ ಎಂದು ಸಹಿ ಅಭಿಯಾನವನ್ನೂ ಕೂಡ ಆರಂಭಿಸಿದ್ದಾರೆ.












Click it and Unblock the Notifications