ಲೊಟ್ಟೆಗೊಲ್ಲಹಳ್ಳಿಯಲ್ಲಿ ಭೈರತಿ ಸುರೇಶ್‌ ವಿರುದ್ಧ ಬಿಜೆಪಿ-ಜೆಡೆಎಸ್ ಪ್ರತಿಭಟನೆ

ಬೆಂಗಳೂರು, ಮೇ 14: ಮರು ಮತದಾನ ನಡೆಯುತ್ತಿರುವ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್‌ ಅವರು ಅಪಾರ್ಟ್‌ಮೆಂಟ್‌ ಒಂದರಲ್ಲಿ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಲೊಟ್ಟೆಗೊಲ್ಲಹಳ್ಳಿಯ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಆದರೆ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ಅವರು 'ನಾನು ಅನ್ರಿಯಾ ಪಲೇಷಿಯಸ್ ಅಪಾರ್ಟ್‌ಮೆಂಟ್‌ಗೆ ತಿಂಡಿ ತಿನ್ನಲು ಹೋಗಿದ್ದೆ ಅಷ್ಟೆ ಅಲ್ಲಿ ಹಣ ಹಂಚಿಕೆ ಮಾಡಿಲ್ಲ' ಎಂದಿದ್ದಾರೆ.

protest against congress candidate in Lottegollahalli where Re-election in progress

ಪ್ರತಿಭಟನಾಕಾರರನ್ನು ಮತಗಟ್ಟೆಯಿಂದ ದೂರ ಇಡಲು ಯಶಸ್ವಿಯಾಗಿರುವ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರ ಸಾಹಸ ಪಟ್ಟರು. ಪ್ರತಿಭಟನೆ ನಡೆಯುತ್ತಿದ್ದರೂ ಸಹ ಮತದಾನಕ್ಕೆ ಯಾವುದೇ ಅಡೆ-ತಡೆ ಆಗಿಲ್ಲ.

ಮೇ 12ರಂದು ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಬೂತ್‌ ಸಂಖ್ಯೆ 156ರಲ್ಲಿ ಮತಯಂತ್ರ ಸಮಸ್ಯೆ ಆದ ಕಾರಣ ಇಂದು ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+