ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಆಸ್ತಿ ಕೊಳ್ಳಬೇಕೆ?; ಬೆಲೆ ಏರಿಕೆ ಬಗ್ಗೆ ತಿಳಿಯಿರಿ

|
Google Oneindia Kannada News

ಬೆಂಗಳೂರು, ನ.16: ಕೊರೊನಾ ಸಾಂಕ್ರಾಮಿಕದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಬೆಲೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ.

ಕೊರೊನಾ ನಂತರ ಆಸ್ತಿ ವ್ಯವಹಾರದಲ್ಲಿ ಹೆಚ್ಚುತ್ತಿರುವ ಬೇಡಿಕೆಯಂತೆಯೇ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಆಸ್ತಿ ಬೆಲೆಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ.

ಸಾಂಕ್ರಾಮಿಕದಲ್ಲಿ ನಷ್ಟ ಕಂಡಿದ್ದ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಈಗ ಚಿಗುರೊಡೆಯುತ್ತಿದೆ. ಕೊರೊನಾ ನಂತರ ಸ್ವಂತ ಮನೆಯನ್ನು ಹೊಂದುವುದಕ್ಕೆ ಭಾರಿ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, ಆಸ್ತಿ ಖರೀದಿಗೆ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನ ಹಲವೆಡೆ ಏಕಾಏಕಿ ಮನೆ ಬಾಡಿಗೆ ಹೆಚ್ಚಿಸಿದ ಮಾಲೀಕರು!ಬೆಂಗಳೂರಿನ ಹಲವೆಡೆ ಏಕಾಏಕಿ ಮನೆ ಬಾಡಿಗೆ ಹೆಚ್ಚಿಸಿದ ಮಾಲೀಕರು!

ಆಸ್ತಿ ಮಾರಾಟ ಮಾಡುವ ರೀಲರ್‌ಗಳು ಹೇಳುವಂತೆ 2018-19 ರಿಂದ ಅಸ್ತಿ ಬೆಲೆಗಳು ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಉದಾಹರಣೆಗೆ ಮಹದೇವಪುರದಲ್ಲಿ 2018-19ರಲ್ಲಿ ಪ್ರತಿ ಚದರ ಅಡಿಗೆ 5,000 ರೂಪಾಯಿಯಿಂದ 6,000 ರೂಪಾಯಿಯಿದ್ದ ಭೂಮಿಯ ಬೆಲೆ ಈಗ 8,000ಕ್ಕೆ ಏರಿಕೆಯಾಗಿದೆ.

ಅದೇ ರೀತಿ ಯಲಹಂಕದಲ್ಲಿ 8 ಸಾವಿರವಿದ್ದ ಆಸ್ತಿ ಬೆಲೆಗಳು 11 ಸಾವಿರಕ್ಕೆ ಏರಿಕೆಯಾಗಿದೆ.

ಉತ್ತಮ ಮನೆ, ಒಳ್ಳೇಯ ಜೀವನಶೈಲಿ ಇಂದಿನ ಪ್ರಾಮುಖ್ಯತೆ

ಉತ್ತಮ ಮನೆ, ಒಳ್ಳೇಯ ಜೀವನಶೈಲಿ ಇಂದಿನ ಪ್ರಾಮುಖ್ಯತೆ

ವಿಶ್ವದಲ್ಲಿ ಅಪ್ಪಳಿಸಿದ ಕೊರೊನಾ ಸಾಂಕ್ರಾಮಿಕ ರೋಗ ಹಲವು ಪಾಠಗಳನ್ನು ಕಲಿಸಿದೆ. ಅದರಲ್ಲಿ ಒಂದು ಮನೆಗಳ ಕುರಿತು ಜನರ ಭಾವನೆಯನ್ನು ಬದಲಾಯಿಸಿದ್ದು. ಲಾಕ್‌ಡೌನ್‌ಗಳು, ವರ್ಕ್ ಫ್ರಂ ಹೋಮ್, ಆನ್‌ಲೈನ್ ತರಗತಿಗಳು ಜನರನ್ನು ಮನೆಯಲ್ಲಿ ಇರುವಂತೆಯೇ ಮಾಡಿತು. ಇಡೀ ದಿನ ಮನೆಗಳಲ್ಲಿಯೇ ಇದ್ದ ಜನರಿಗೆ ಉತ್ತಮ, ವಿಶಾಲ ಮತ್ತು ಸ್ವಂತ ಮನೆಗಳನ್ನು ಹೊಂದುವ ಆಸೆಗೆ ನೂಕಿದೆ. ಜತೆಗೆ ಅದು ಅನಿವಾರ್ಯ ಎಂಬಂತಹ ಪರಿಸ್ಥಿತಿಗೂ ತಳ್ಳಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಆಶಿಶ್ ಶರ್ಮಾ.

ಸ್ವಂತ ಮನೆಯತ್ತ ದೃಷ್ಟಿ ನಿಟ್ಟಿರುವ ಯುವಜನತೆ

ಸ್ವಂತ ಮನೆಯತ್ತ ದೃಷ್ಟಿ ನಿಟ್ಟಿರುವ ಯುವಜನತೆ

ವಿಶಾಲವಾದ ರಸ್ತೆಗಳು, ಉತ್ತಮ ಮೂಲಸೌಕರ್ಯಗಳು, ಕಡಿಮೆ ಟ್ರಾಫಿಕ್ ಜಂಜಾಟವಿರುವ ಹೊಸ ಬಡಾವಣೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಇದು ಕೂಡ ಆಸ್ತಿ ಬೆಲೆ ಏರಿಕೆಗೆ ಕಾರಣವಾಗಿದೆ.

ಇನ್ನೂ, ಇಷ್ಟು ದಿನ ಮನೆಯಿಂದ ಕೆಲಸ ಮಾಡುತ್ತಿದ್ದ ಐಟಿ ಕಂಪನಿಗಳ ಯುವಜನತೆ ಈಗ ಕಚೇರಿಗೆ ಹೋಗುತ್ತಿದ್ದು, ಹೊಸ ಮನೆಗಳ ಹುಡುಕಾಟದಲ್ಲಿದ್ದಾರೆ.

ಸ್ವಂತ ಮನೆಗಳನ್ನು ಮಾಡಿಕೊಳ್ಳುವುದು, ಅದು ಕೂಡ ತಮ್ಮ ಆಫಿಸ್‌ಗಳಿಗೆ ಹತ್ತಿರವಿರುವ ಜಾಗಗಳಲ್ಲಿಯೇ ಮನೆ ಹುಡುಕುವುದರಿಂದ ಮಹದೇವಪುರ ವ್ಯಾಪ್ತಿಯಲ್ಲಿ ಆಸ್ತಿ ಬೆಲೆ ಜಾಸ್ತಿಯಾಗಿದೆ.

ಬಾಡಿಗೆ ಕಟ್ಟುವ ಬದಲು, ಸ್ವಂತ ಮನೆ ಹೊಂದುವ ಯೋಚನೆ

ಬಾಡಿಗೆ ಕಟ್ಟುವ ಬದಲು, ಸ್ವಂತ ಮನೆ ಹೊಂದುವ ಯೋಚನೆ

ಬೆಂಗಳೂರಿನಲ್ಲಿ ಬಾಡಿಗೆ ಬೆಲೆ ದುಬಾರಿಯಾಗುತ್ತಿದೆ. ತಿಂಗಳಿಗೆ ಸಾವಿರಾರು ರೂಪಾಯಿ ಕಟ್ಟಿ ಬಾಡಿಗೆ ಮನೆಯಲ್ಲಿರುವವರು ಸ್ವಂತ ಮನೆಯ ಬಗ್ಗೆ ಯೋಚಿಸುತ್ತಿದ್ದಾರೆ.

ಇಷ್ಟು ದಿನ ಶೇಕಡಾ ಐದರಷ್ಟು ಏರುತ್ತಿದ್ದ ಬಾಡಿಗೆ ದರ. ಈ ಬಾರಿಯಿಂದ ಹಲವು ಭಾಗಗಳಲ್ಲಿ ಶೇಕಡಾ ಮೂವತೈದರಷ್ಟು ಏರಿಕೆಯಾಗಿದೆ. ಇದು ಬಾಡಿಗೆ ದಾರರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಆಸ್ತಿ ಖರೀದಿಯಲ್ಲಿ ಹಣ ತೊಡಗಿಸಲು ಜನ ಉತ್ಸುಕರಾಗಿದ್ದಾರೆ.

ಕಟ್ಟಡ ಸಾಮಾಗ್ರಿಗಳ ದರ ಏರಿಕೆಯಿಂದ ಆಸ್ತಿ ಬೆಲೆ ಗಗನಕ್ಕೆ

ಕಟ್ಟಡ ಸಾಮಾಗ್ರಿಗಳ ದರ ಏರಿಕೆಯಿಂದ ಆಸ್ತಿ ಬೆಲೆ ಗಗನಕ್ಕೆ

ಆರ್ ಆರ್ ನಗರ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳ ಹೆಚ್ಚುವಿಕೆ, ಬೆಂಗಳೂರು - ಮೈಸೂರು ಹೆದ್ದಾರಿ ಅಭಿವೃದ್ಧಿ ಕಾರ್ಯಗಳು ಕೂಡ ಬೆಲೆ ಏರಿಕೆಗೆ ಪರೋಕ್ಷ ಕಾರಣಗಳಾಗಿವೆ. ಮಹಾದೇವಪುರ ವ್ಯಾಪ್ತಿಯಲ್ಲಿಯೂ ಮೆಟ್ರೋ ಸಂಪರ್ಕ ಹೆಚ್ಚಳವಾಗಿರುವುದು ಆಸ್ತಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಇನ್ನು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳು ಗಗನಕ್ಕೆ ಏರಿವೆ. ಸಿಮೆಂಟ್, ಸ್ಟೀಲ್, ಇಟ್ಟಿಗೆ, ಸಾರಿಗೆ, ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲದರಲ್ಲೂ ಬೆಲೆ ಏರಿಕೆಯಾಗಿದೆ ಹೀಗಾಗಿ ಆಸ್ತಿ ಬೆಲೆಗಳು ಹೆಚ್ಚಾಗಿವೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.

ಇನ್ನು ಬೇಡಿಕೆ ಹೆಚ್ಚಾದಂತೆ ಪೂರೈಕೆಯಲ್ಲಿ ವಿಳಂಬವಾಗಬಹುದು ಎಂದು ಹಲವು ತಜ್ಞರು ಹೇಳುತ್ತಾರೆ.

(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್‌)

English summary
After post-pandemic property prices in some areas of Bengaluru increase significantly. know more about latest property rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X