• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಾಜೆಕ್ಟ್ ಈವ್ : ಜಯನಗರದಲ್ಲಿ 'ವೈರ್ ಶಿಲ್ಪ; ಕಾರ್ಯಾಗಾರ

|

ಬೆಂಗಳೂರು, ನವೆಂಬರ್ 09: ಪ್ರಾಜೆಕ್ಟ್ ಈವ್ ಪ್ರಸ್ತುತಪಡಿಸುತ್ತಿದೆ ಒಂದು ಎಕ್ಸ್ ಕ್ಲೂಸಿವ್ ದಿ ಶಿ ಸೆಶನ್ಸ್: ವೈರ್ ಶಿಲ್ಪ ಕಾರ್ಯಾಗಾರ. ಜಯನಗರ ಮಳಿಗೆಯಲ್ಲಿ ಶನಿವಾರ, 10ನೇ ನವೆಂಬರ್ 2018ರಂದು ಈ ಕಾರ್ಯಾಗಾರ ನಡೆಯಲಿದೆ.

ಬೆಂಗಳೂರಿನ ಎಲ್ಲಾ ಕಲಾಪ್ರೇಮಿ ಮಹಿಳೆಯರಿಗೊಂದು ಮುಕ್ತ ಆಹ್ವಾನ! ತಜ್ಞರು ನಡೆಸಿಕೊಡುವ ಎಕ್ಸ್ ಕ್ಲೂಸಿವ್ ಆದ ವೈರ್ ಶಿಲ್ಪ ಕಾರ್ಯಾಗಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಬನ್ನಿ.

ಮಹಿಳೆಯರೇ! ಜ್ಯುವೆಲ್ಲರಿ ತಯಾರಿಸುವ ಕಲೆ ಉಚಿತವಾಗಿ ಕಲಿಯಿರಿ

ಈ ಕಾರ್ಯಾಗಾರದಲ್ಲಿ, ನಿಮ್ಮ ಮನೆಯಲ್ಲಿ ನೇತು ಹಾಕುವಂತಹ ಆಕರ್ಷಕ ಶಿಲ್ಪದ ಕಲೆಯನ್ನು ಕಲಿಯಬಹುದು. ತ್ಯಾಜ್ಯ ತಾಮ್ರದ ವೈರ್ ಹಾಗೂ ದಾರಗಳನ್ನು ಉಪಯೋಗಿಸಿಕೊಡು ಶಿಲ್ಪ ತಯಾರಿಸಿ, ವೈರ್ ಸುತ್ತುವ ಪ್ರಾಥಮಿಕ ಸಂಗತಿಯನ್ನು ಕಲಿಯಿರಿ. ಆ ಮೂಲಕ ಅದ್ಭುತವಾದ ಶಿಲ್ಪಗಳನ್ನು ಸೃಷ್ಟಿಸಬಹುದಾಗಿದೆ.

ವೈರ್ ಶಿಲ್ಪದ ಕೌಶಲ್ಯವನ್ನು ಕಲಿಯಲು ಆಸಕ್ತಿಯುಳ್ಳವರು ಬನ್ನಿ, ಮನೆಗೆ ಮರಳುವಾಗ ಆತ್ಯಾಕರ್ಷಕ ಶಿಲ್ಪವನ್ನು ಕೊಂಡೊಯ್ಯಿರಿ!!! ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ. ಸೀಮಿತ ಸಾಮಥ್ರ್ಯದ ಕಾರ್ಯಕ್ರಮ. ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಯಾವುದೇ ಶುಲ್ಕವಿರುವುದಿಲ್ಲ.

ದಿನಾಂಕ: ಶನಿವಾರ, 10ನೇ ನವೆಂಬರ್, 2018

ಸಮಯ: ಸಂಜೆ 3

ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

''ಪ್ರಾಜೆಕ್ಟ್ ಈವ್ ಬಗ್ಗೆ": ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಜಯನಗರದಲ್ಲಿ ಆಕ್ರಿಲಿಕ್ ಕೋನ್ ಪೈಂಟಿಂಗ್ ಕಾರ್ಯಾಗಾರ

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಮಹಿಳೆಯರು ತಮ್ಮನ್ನು ತಾವು ಸಂಭ್ರಮಿಸಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಈ ಇಡೀ ಮಳಿಗೆಯಲ್ಲಿ ಅದಕ್ಕೆ ತಕ್ಕ ಗಮನ ಕೊಡಲಾಗಿದೆ. ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್‍ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ!

ಇವೆಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ, ಮಾನಿನಿಯರ ಕಣ್ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಇವುಗಳ ಜೊತೆಗೆ ಲೋಕಾಭಿರಾಮವಾದ ಮಾತುಕತೆಗಳನ್ನು ನಡೆಸಲು ಸೈಡ್ ಟೇಬಲ್‍ಗಳು, ಆರಾಮವಾಗಿ ಕೂರಲು ನೆರವಾಗುವಂಥ ಆಸನಗಳು, ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸರಿಯಾಗಿ ಬೆಳಕು ಸೂಸುವಂಥ ಬಗೆಬಗೆಯ ವಿದ್ಯುದ್ದೀಪಗಳು ಕೂಡ ಇಲ್ಲಿವೆ.

ಪ್ರಾಜೆಕ್ಟ್ ಈವ್‍ನ ಸ್ವಂತ ಬ್ರ್ಯಾಂಡ್‍ಗಳ ಜೊತೆಗೆ ಈ ಮಳಿಗೆಯಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಜಗತ್ತಿನ ಕಣ್ಣು ಕೋರೈಸುವ ಉಡುಪುಗಳು ಇಲ್ಲಿ ಸದಾ ಸಿಗುತ್ತವೆ.

English summary
Project Eve presents an exclusive The She Sessions: Wire Sculpture Workshop at its Jayanagar outlet on Saturday, November 10th, 2018. At this workshop, learn the art of sculpting beautiful suncatcher to hang in your home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X