• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಯನಗರದಲ್ಲಿ ಆಕ್ರಿಲಿಕ್ ಪೈಂಟಿಂಗ್ ಕಾರ್ಯಾಗಾರ

By Mahesh
|

ಬೆಂಗಳೂರು, ಜೂನ್ 27: ಪ್ರೊಜೆಕ್ಟ್ ಈವ್ ಪ್ರಸ್ತುತಪಡಿಸುತ್ತಿದೆ ಎಕ್ಸ್‍ಕ್ಲೂಸಿವ್ ದಿ ಶಿ ಸೆಶನ್ಸ್'' ಆಕ್ರಿಲಿಕ್ ಪೈಂಟಿಂಗ್ ಕಾರ್ಯಾಗಾರ 30ನೇ ಜೂನ್, 2018ರಂದು ತನ್ನ ಜಯನಗರ ಮಳಿಗೆಯಲ್ಲಿ

ಬೆಂಗಳೂರಿನ ಎಲ್ಲಾ ಮಹಿಳಾ ಕಲಾ ಪ್ರೇಮಿಗಳಿಗೊಂದು ಆಹ್ವಾನ! ಒಂದು ಎಕ್ಸ್ ಕ್ಲೂಸಿವ್ ಆದ ಆಕ್ರಿಲಿಕ್ ಪೈಂಟಿಂಗ್ ಕಾರ್ಯಾಗಾರದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಮ್ಮ ಬಣ್ಣಗಳು ಹಾಗೂ ಭಾವನೆಗಳನ್ನು ಸುರಿದುಕೊಂಡು ತಜ್ಞರಿಂದ ಕೌಶಲ್ಯಗಳನ್ನು ಕಲಿತುಕೊಂಡು ಅದ್ಭುತವಾದ ಕ್ಯಾನ್ವಾಸ್ ರಚಿಸಬಹುದಾಗಿದೆ.

ಈ ಕಾರ್ಯಾಗಾರದಲ್ಲಿ, ಅಮೂರ್ತ ಕಲೆಯನ್ನು ರಚಿಸುವುದು ಹೇಗೆಂದು ಆಕ್ರಿಲಿಕ್ ಪೈಂಟ್ ಮೂಲಕ ಪೌರಿಂಗ್ ಮಾಧ್ಯಮದಲ್ಲಿ ಮತ್ತು ಕಪ್ಪು ಕ್ಯಾನ್ವಾಸ್‍ನ ಮೇಲೆ ಕಲಿಯಿರಿ. ಈ ಆಧುನಿಕ ಪೈಂಟಿಂಗ್ ತಂತ್ರವನ್ನು ಪೈಂಟ್ ಬ್ರಷ್ ಇಲ್ಲದೆ ರಚಿಸಬಹುದಾಗಿದೆ.

ನಿಮ್ಮದೇ ಸ್ವಂತ ಕ್ಯಾನ್ವಾಸ್ ರಚಿಸಲು ಉತ್ಸುಕರಾಗಿದ್ದರೆ ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ!

Project Eve Presents An Exclusive “The She Sessions” Acrylic Painting workshop

ದಿನಾಂಕ: ಶನಿವಾರ, 30ನೇ ಜೂನ್, 2018
ಸಮಯ: ಸಂಜೆ 3.
ಸ್ಥಳ: ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

ಪ್ರಾಜೆಕ್ಟ್ ಈವ್ : ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್‍ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ!

ಇವೆಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ, ಮಾನಿನಿಯರ ಕಣ್ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇವುಗಳ ಜೊತೆಗೆ ಲೋಕಾಭಿರಾಮವಾದ ಮಾತುಕತೆಗಳನ್ನು ನಡೆಸಲು ಸೈಡ್ ಟೇಬಲ್‍ಗಳು, ಆರಾಮವಾಗಿ ಕೂರಲು ನೆರವಾಗುವಂಥ ಆಸನಗಳು, ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸರಿಯಾಗಿ ಬೆಳಕು ಸೂಸುವಂಥ ಬಗೆಬಗೆಯ ವಿದ್ಯುದ್ದೀಪಗಳು ಕೂಡ ಇಲ್ಲಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Project Eve Presents An Exclusive “The She Sessions” Acrylic Painting workshop at its Jayanagar outlet on June 30th, 2018. At this workshop, learn how to create abstract art with nothing more than acrylic paint, pouring medium and a blank canvas. This modern technique of painting without a paint brush is incredibly satisfying and engaging.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more