ಪೊಲೀಸರು ಮೊಬೈಲ್ ಕಿತ್ತುಕೊಳ್ಳುವಂತಿಲ್ಲ; ಕಮಲ್ ಪಂಥ್

ಬೆಂಗಳೂರು, ಏಪ್ರಿಲ್ 04; ಯಾವುದೇ ನೆಪದಲ್ಲಿ ಯಾರೊಬ್ಬರ ಮೊಬೈಲ್ ಪೋನ್ ವಶಕ್ಕೆ ಪಡೆದು ಪರಿಶೀಲನೆ ಮಾಡಬಾರದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅನುಮಿತಿ ಇಲ್ಲದೇ ಯಾವ ಪೊಲೀಸ್ ಅಧಿಕಾರಿಯೂ ಮೊಬೈಲ್ ಪರಿಶೀಲನೆ ಮಾಡಬಾರದು. ಇಂತಹ ಘಟನೆ ನಡೆದರೆ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದ್ದಾರೆ.

ಯಾರೊಬ್ಬರ ಮೊಬೈಲ್ ಅನ್ನು ಯಾವುದೇ ನೆಪದಲ್ಲಿ ವಶಕ್ಕೆ ಪಡೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಇಂತಹ ಪ್ರಕರಣಗಳನ್ನು ಖಂಡಿಸುತ್ತೇವೆ. ಇಂತಹ ಘಟನೆ ನಡೆದರೆ ನಮ್ಮ ಗಮನಕ್ಕೆ ತನ್ನಿ, ಅಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಲ್ ಪಂಥ್ ಭರವಸೆ ನೀಡಿದ್ದಾರೆ.

Prohibits Any Policeman From Checking Mobile Phone Tweets Kamal Pant

ಮೊಬೈಲ್ ಫೋನ್ ವಶಕ್ಕೆ ಪಡೆದು ವಿಚಾರಣೆ ನಡೆಸುವ ಪ್ರಕರಣ ಕಂಡು ಬಂದರೆ ಗಸ್ತು ವಾಹನ 112 ಅಥವ ಪೊಲೀಸ್ ಆಯುಕ್ತರಿಗೆ 080-22942215 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಕಮಲ್ ಪಂಥ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಟ್ವೀಟ್‌ನಲ್ಲಿ ದೂರು; ಗಸ್ತಿನಲ್ಲಿರುವ ಪೊಲೀಸರು ಜನರ ಮೊಬೈಲ್ ಪಡೆದು ಪರಿಶೀಲನೆ ನೆಪದಲ್ಲಿ ವೈಯಕ್ತಿಕ ವಿಚಾರ ಕೇಳಿ ತೊಂದರೆ ಮಾಡುತ್ತಿದ್ದಾರೆ. ವಾಟ್ಸಪ್ ಸಂದೇಶ, ಫೋಟೋಗಳನ್ನು ನೋಡುತ್ತಿದ್ದಾರೆ ಎಂಬ ದೂರುಗಳು ಟ್ವೀಟರ್ ಮೂಲಕ ಪೊಲೀಸ್ ಆಯುಕ್ತರನ್ನು ತಲುಪಿದ್ದವು.

ಈ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಇಂತಹ ಘಟನೆಗಳನ್ನು ಖಂಡಿಸುತ್ತೇವೆ. ಇಂತಹ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಟ್ವೀಟ್‌ಗಳಿಗೆ ಜನರು ಸಹ ಪ್ರತಿಕ್ರಿಯೆ ನೀಡಿದ್ದು ಪೊಲೀಸರಿಗೆ ನೀಡಿರುವ ನಿರ್ದೇಶವನ್ನು ಸ್ವಾಗತಿಸಿದ್ದಾರೆ. ಆಯುಕ್ತರ ಸೂಚನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+