ಖಾಸಗಿ ಸಾರಿಗೆ ಒಕ್ಕೂಟದ ಬಂದ್‌ಗೆ ಟಕ್ಕರ್‌ ಕೊಡಲು ಸರ್ಕಾರದ ಪ್ಲಾನ್

ಬೆಂಗಳೂರು, ಸೆಪ್ಟೆಂಬರ್‌ 10: ರಾಜ್ಯ ಸರ್ಕಾರದ ವಿರುದ್ಧ ಸಿಡಿದು ಖಾಸಗಿ ಸಾರಿಗೆ ಒಕ್ಕೂಟ ಕರೆ ಕೊಟ್ಟಿರುವ ಬಂದ್‌ಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಸದ್ಯ ಸಾರಿಗೆ ಇಲಾಖೆ ಕೂಡ ಪ್ಲಾನ್ ಮಾಡಿದ್ದು ಬಂದ್ ದಿನ ಪ್ರಯಾಣಿಕರಿಗೆ ಬಂದ್ ಎಫೆಕ್ಟ್ ತಾಗದಂತೆ ಕ್ರಮವಹಿಸಲು ಮುಂದಾಗಿದೆ.

ಖಾಸಗಿ ಒಕ್ಕೂಟ ಕರೆಕೊಟ್ಟಿರುವ ಬಂದ್‌ನಿಂದ ಇಂದು(ಸೆಪ್ಟೆಂಬರ್‌ 10) ಮಧ್ಯರಾತ್ರಿಯಿಂದಲೇ ಖಾಸಗಿ ಸಾರಿಗೆ ಸ್ತಬ್ಧವಾಗುವ ಸಾಧ್ಯತೆ ಇದೆ.‌ ಜೊತೆಗೆ ನಾಳೆ ವಾರದ ಮೊದಲನೇ ದಿನ ಸೋಮವಾರ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಂದ್ ಬಿಸಿ ತಟ್ಟುವ ಆತಂಕ ಎದುರಾಗಿದ್ದು, ಇದನ್ನ ಸಮರ್ಥವಾಗಿ ಎದುರಿಸುವುದರ ಜೊತೆಗೆ ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟದಂತೆ ಕ್ರಮವಹಿಸಲು ಸಾರಿಗೆ ಇಲಾಖೆ ಪ್ಲ್ಯಾನ್ ಮಾಡಿದ್ದು, ಈ ಮೂಲಕ ಖಾಸಗಿ ಒಕ್ಕೂಟದ ಬಂದ್‌ಗೆ ಟಕ್ಕರ್ ನೀಡಲು ತಯಾರಿ ನಡೆಸಿದೆ.

private-transporters-strike-in-bengaluru

ನಾಳಿನ ಬಂದ್‌ನ ಸದ್ಯ ಕಾರ್ಪೋರೆಟ್ ಕಂಪನಿಗಳ ಉದ್ಯೋಗಿಗಳು, ಶಾಲಾ ಕಾಲೇಜು ಮಕ್ಕಳು,‌ ಜೊತೆಗೆ ಖಾಸಗಿ ಸಾರಿಗೆಯನ್ನೇ ಹೆಚ್ಚು ನಂಬಿರುವ ವರ್ಗ ಚಿಂತೇಗೀಡಾಗಿದೆ. ನಾಳಿನ ಬಂದ್‌ನಿಂದ ಈ ಎಲ್ಲಾರಿಗೂ ಒಂದಷ್ಟು ಅನಾನುಕೂಲ ಆಗುವ ಸಾಧ್ಯತೆಗಳಿದ್ದು, ಎಂದಿನಂತೆ ನಿತ್ಯದ ತಮ್ಮ‌ಕೆಲಸ ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಈ ಕಾರಣಕ್ಕೆ ಸದ್ಯ ಈ ಸಮಸ್ಯೆ ತಪ್ಪಿಸಲು ನಾಳಿನ ಬಂದ್ ವೇಳೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನೂಕೂಲಕ್ಕೆ ಸರ್ಕಾರ ಕೂಡ ಕೆಲ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದ ಸಿದ್ಧತೆ ಏನು ಎಂದು ನೋಡುವುದಾದರೆ, ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸುವುದು. ಹೆಚ್ಚುವರಿ ಬಸ್ ಕಾರ್ಯಚರಣೆಗಾಗಿ ಸಿಬ್ಬಂದಿ ಕೆಲಸಕ್ಕೆ ಗೈರಾಗದಂತೆ ಸೂಚನೆ ನೀಡಲಾಗಿದೆ.

private-transporters-strike-in-bengaluru

ಅನಗತ್ಯ ಗೈರಾಗುವ ಬಿಎಂಟಿಸಿ‌ ಸಿಬ್ಬಂದಿಗೆ ಕ್ರಮದ ಎಚ್ಚರಿಕೆ. ಬೆಂಗಳೂರಿಗೆ ಮಾತ್ರ ಬಂದ್ ಇರುವ ಕಾರಣ ಬಿಬಿಎಂಟಿಸಿ ಬಸ್ ವ್ಯತ್ಯಯ ಆದರೆ ಕೆಎಸ್ಆರ್‌ಟಿಸಿ ಬಸ್‌ಗಳ ಬಳಕೆ ಮಾಡುವ ಪ್ಲಾನ್ ಮಾಡಲಾಗಿದೆ.

ಜನರಿಗೆ ಯಾವ ಭಾಗಕ್ಕೆ ಹೆಚ್ಚುವರಿ ಬಸ್ ಅಗತ್ಯ ಇದೆ ಆ ಮಾರ್ಗಗಳಿಗೆ ರೂಟ್ ಮಾನಿಟರಿಂಗ್ ಮಾಡುವುದು. ಹೆಚ್ಚು ಶಾಲಾ ಕಾಲೇಜು ಇರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚಾರ. ಆಸ್ಪತ್ರೆ,‌ ಗಾರ್ಮೆಂಟ್ಸ್‌ಗಳ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡುವುದು. ಬಂದ್‌ನಲ್ಲಿ ಭಾಗಿಯಾಗದ ಸಂಘಟನೆಗಳ ಚಾಲಕರು ಸೇವೆಗಾಗಿ ರಸ್ತೆಗಿಳಿದರೆ ಪ್ರತಿಭಟನಾಕಾರರಿಂದ ತೊಂದರೆಯಾಗದಂತೆ ಭದ್ರತೆ ನೀಡುವುದು.

ಲಾ ಅಂಡ್ ಆರ್ಡರ್ ಪೊಲೀಸರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ. ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಿಸಲು ಖಾಸಗಿ ಸಾರಿಗೆ ಒಕ್ಕೂಟ ಮುಂದಾದ,ರೆ ಇತ್ತ ಬಂದ್‌ಗೆ ಮಣೆ ಹಾಕದ ಸಾರಿಗೆ ಸಚಿವರು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+