ಬೆಂಗಳೂರಿನಲ್ಲೇ ಇದ್ದರೂ ವೀರ ಮರಣ ಹೊಂದಿದ ಕನ್ನಡಿಗ ಯೋಧನಿಗೆ ಗೌರವ ಸಲ್ಲಿಸದ ಪ್ರಧಾನಿ ಮೋದಿ, ಆಕ್ರೋಶ?
ಬೆಂಗಳೂರು, ನವೆಂಬರ್ 25: ಶನಿವಾರ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೇಜಸ್ ಯುದ್ದ ತರಬೇತಿ ವಿಮಾನದಲ್ಲಿ ಹಾರಾಟ ನಡೆಸಿ ಖುಷಿಪಟ್ಟರು. ಆದರೆ ದೇಶಕ್ಕಾಗಿ ಮಡಿದ ಯೋಧನ ಮೃತ ದೇಹ ಬೆಂಗಳೂರಿಗೆ ಬಂದಿದ್ದರೂ ಗೌರವ ಸಲ್ಲಿಸಲು ಬಾರದಕ್ಕೆ ಖಂಡನೆ ವ್ಯಕ್ತವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಸೇನೆ ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ ಎನ್‌ಕೌಂಟರ್‌ನಲ್ಲಿ ಕರ್ನಾಟಕದ ಯೋಧ ಕ್ಯಾಪ್ಟನ್ ಪ್ರಾಂಜಲ್ (28) ಸೇರಿದಂತೆ ನಾಲ್ವರು ಹುತಾತ್ಮರಾಗಿದ್ದರು. ಅವರ ಮೃತ ದೇಹವು ಶನಿವಾರ ಬೆಂಗಳೂರಿಗೆ ಬಂದಿತ್ತು. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಅಂತಿಮ ಗೌರವ ಸಲ್ಲಿಸಿದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯು ನಡೆಯಿತು. ಒಂದೆಡೆ ವೀರ ಮರಣ ಹೊಂದಿದ ಯೋಧನಿಗೆ ಅಂತಿಮ ನಮನಗಳು ಸಲ್ಲಿಸುತ್ತಿದ್ದರೆ ಇದೇ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅವರು ತೇಜಸ್ ಯುದ್ದ ವಿಮಾನದಲ್ಲಿ ಖುಷಿಯಿಂದ ಹೆಲಿಕಾಪ್ಟರ್ ರೈಡಿಂಗ್ ಮಾಡುತ್ತಿರುವುದು ಜನರ ಟೀಕೆಗೆ ಗುರಿಯಾಗಿದೆ.
ಮೋದಿ ಅವರ ನಡೆಯನ್ನು ಹಲವಾರು ಮಂದಿ ಎಕ್ಸ್‌ನಲ್ಲಿ ಖಂಡಿಸಿದ್ದು, ಚೇ ಕೃಷ್ಣಾ ಎಂಬುವವರು ಬೆಂಗಳೂರಿನಲ್ಲಿ ಎರಡು ಘಟನೆಗಳು ನಡೆದಿವೆ. ಒಬ್ಬ ನಾಯಕ ನಮ್ಮ ವೀರ್ ಜವಾನ್‌ಗೆ ಗೌರವ ಸಲ್ಲಿಸಿದರು ಮತ್ತು ಇನ್ನೊಬ್ಬರು ತೇಜಸ್‌ನಲ್ಲಿ ಫೋಟೋ ಆಪ್‌ನಂತಹ ಟಾಮ್ ಕ್ರೂಸ್ ಮಾಡಿದರು ಎಂದು ಟೀಕಿಸಿದ್ದಾರೆ.
Two events happened in Bengaluru.
— 👑Che_ಕೃಷ್ಣ🇮🇳💛❤️ (@ChekrishnaCk) November 25, 2023
One leader paid respect to our Veer Jawan and other did a Tom cruise like Photo Op in Tejas.
राजा बाबू
Reel vs Realpic.twitter.com/epp4DxvCx6pic.twitter.com/CRbU7H4Ie9
ಇದಲ್ಲದೆ ಸಮರ್ಥ್ ಕೆರೂರು ಎಂಬ ಎಕ್ಸ್ ಬಳಕೆದಾರರು ಇದೇ ನಮ್ಮ್ ದೌರ್ಭಾಗ್ಯ! ಒಂದ್ ಕಡೆ ನಮ್ಮ ಯೋಧರು ಪ್ರಾಣಾರ್ಪಣೆಗೈದ ದುಃಖ ನೋಡ್ಬೇಕೋ ಇಲ್ಲಾ ಈ ಪನೌತಿ ಪೀಎಂ ಶೋಕಿ ನೋಡ್ಬೇಕೋ ನೀವೇ ಹೇಳಿ. ಎಲ್‌ಸಿಎ ತೇಜಸ್ ನಲ್ಲಿ ಇವತ್ತೇ ರೌಂಡ್ ಹಾಕಿ ಏನ್ ತಾನೇ ಸಾಧಿಸಿಯಾನು ಈ ಪ್ರಧಾನಿ? ಎಂದು ಖಂಡಿಸಿದ್ದಾರೆ. ಲಕ್ಷಣ್ ಕಾರ್ಕಳ್ ಎಂಬುವವರು ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದಿದ್ದ ನಂತೆ. ಹಂಗೆ ಪನೌತಿ ದು ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರು ಹಿಂದೆ ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ದಾಳಿಯಿಂದ ಬಹಳಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಯೋಧರಿಗಾಗಿ ನಮ್ಮ ಸರ್ಕಾರ ಸಾಕಷ್ಟು ಕಾರ್ಯಕ್ರಮ ಕೈಗೊಂಡಿದೆ. ಈ ಸಾವಿಗೆ ಪ್ರತಿಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ಹೇಳಿದ್ದರು. ಪುಲ್ವಾಮಾ ದಾಳಿ ಕೂಡ ಒಂದು ರೀತಿಯಲ್ಲಿ ಅವರ ಚುನಾವಣಾ ಪ್ರಚಾರದ ಭಾಗವೇ ಆಗಿತ್ತು. ಪ್ರಧಾನಿ ಹೋದಲೆಲ್ಲಾ ಈ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ್ದರು.

ಆದರೆ ಈಗ ಕನ್ನಡಿಗ ವೀರ ಯೋಧ ಹೋರಾಡಿ ಮೃತರಾದರೂ ಪಕ್ಕದಲ್ಲಿದ್ದರೂ ಬಾರದ ಅವರ ನಡೆಯನ್ನು ಖಂಡಿಸಲಾಗಿದೆ. ಇನ್ನು ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಮಾರಾಟಗಾರ ಪ್ರಧಾನಿ ಮೋದಿಯವರೇ, ನಮ್ಮ ಹೆಮ್ಮೆಯ ಹೆಚ್ಎಎಲ್‍ನ್ನು ಮಾರಬೇಡಿ! ಕೇವಲ ಫೋಟೋಶೂಟ್ ಮಾಡಿಸಿಕೊಳ್ಳಲು ಎಚ್‌ಎಎಲ್‌ಗೆ ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ. ಆದರೆ ನಮ್ಮ ಎಚ್‌ಎಎಲ್ ಅನ್ನು ನಮಗೆ ಬಿಡಿ!' ಎಂದು ಟೀಕಿಸಿದೆ.
ಎಚ್‌ಎಎಲ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಪ್ರಧಾನಿ ಮೋದಿಯವರೇ, ಇದೇ HALನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ? HALಗೆ ದ್ರೋಹವೆಸಗಿ ಈಗ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮಧ್ಯಪ್ರದೇಶ, ರಾಜಸ್ಥಾನಗಳ ಚುನಾವಣೆ ಪ್ರಚಾರ ಮುಗಿಸಿ ಸದ್ದಿಲ್ಲದೆ ಬೆಂಗಳೂರಿಗೆ ಬಂದಿರುವ ಪ್ರಧಾನಿ ಮೋದಿಯವರೇ, ಕರ್ನಾಟಕಕ್ಕೆ ಕೊಡಬೇಕಾದ ಬರ ಪರಿಹಾರವನ್ನು ತಂದಿದ್ದೀರಾ? ನರೇಗಾ ಬಾಕಿ ಹಣ ತಂದಿದ್ದೀರಾ? ಕೇಂದ್ರ ಯೋಜನೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ, ಆ ಹಣ ತಂದಿದ್ದೀರಾ? ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋಗುವ ಆತುರದಲ್ಲಿ ನಿಮ್ಮ ಜವಾಬ್ದಾರಿಯನ್ನು ಮರೆತು ಬಂದಿರಾ?! ಚುನಾವಣೆ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಉಕ್ಕಿ ಹರಿಯುವ ನಿಮ್ಮ ಪ್ರೀತಿ ಚುನಾವಣೆಯ ನಂತರ ಮಾಯವಾಗಿರುವುದೇಕೆ?' ಎಂದು ಕಾಂಗ್ರೆಸ್ ಕಿಡಿಕಾರಿದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ











Click it and Unblock the Notifications