ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜ್ಞಾನಿಗಳನ್ನುದ್ದೇಶಿಸಿ ಬೆಂಗಳೂರಲ್ಲಿ ರಾಷ್ಟ್ರಪತಿ ಉಪನ್ಯಾಸ

By Kiran B Hegde
|
Google Oneindia Kannada News

ಬೆಂಗಳೂರು, ನ. 25: ನ್ಯಾನೋ ವಿಜ್ಞಾನ, ತಂತ್ರಜ್ಞಾನ, ಮಂಗಳ ಯಾನ, ಕಡಿಮೆ ಬೆಲೆಯ ಲಸಿಕೆ ಉತ್ಪಾದನೆ, ಸೌರಶಕ್ತಿ ಬಳಕೆಯಲ್ಲಿ ನಮ್ಮ ದೇಶ ಯಶಸ್ಸಿನತ್ತ ಮುನ್ನಡೆದಿದೆ. ದೇಶದ ಭವಿಷ್ಯ ವಿಜ್ಞಾನಕ್ಕೆ ಮೀಸಲಾಗಿರುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟರು.

ರಾಯಲ್ ಸೊಸೈಟಿ ಲಂಡನ್ ಹಾಗೂ ಭಾರತ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಮನ್‌ವೆಲ್ತ್ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನದಿಂದ ಮನುಕುಲಕ್ಕೆ ಉಪಯೋಗವಾಗುವಂತಹ ಸಂಶೋಧನೆಗಳು ನಡೆಯಬೇಕೆಂದು ಅಭಿಪ್ರಾಯಪಟ್ಟರು. [ರೈಲಿನ ಮೇಲೆ ಸೋಲಾರ್ ಫಲಕ]

ಇಂದು ಗುಣಮಟ್ಟದ ಶಿಕ್ಷಣ ಮಹತ್ವದ ಪಾತ್ರ ವಹಿಸಿದೆ. ನಮ್ಮ ಭವಿಷ್ಯ ವಿಜ್ಞಾನದ ಮೇಲೆ ಅವಲಂಬಿಸಿದೆ. ಬೆಂಗಳೂರು ಐಟಿ ಹಬ್ ಎಂದು ಗುರುತಿಸಿಕೊಂಡಿದೆ. ಭಾರತವು ಅಂತರ್ಜಾಲ ಬಳಕೆಯಲ್ಲಿ ಮೂರನೇ ಹಾಗೂ ಮೊಬೈಲ್ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು. [ರಾಷ್ಟ್ರಪತಿ ಬರುವ ದಾರಿ ಸುಗಮವಾಗಿರಲಿ]

pranab2

ಸಮಸ್ಯೆ ಕುರಿತು ಚರ್ಚೆ, ಪರಿಹಾರಕ್ಕಿದು ಸೂಕ್ತ ವೇದಿಕೆ
ರಾಯಲ್ ಸೊಸೈಟಿ ಆಫ್ ಲಂಡನ್ ಅಧ್ಯಕ್ಷ ಪಾಲ್ ನರ್ಸ್ ಮಾತನಾಡಿ, ಈಚೆಗೆ ನಾವು ಹವಾಮಾನ ವೈಪರೀತ್ಯ, ರೋಗ, ಜನಸಂಖ್ಯಾ ಸ್ಫೋಟ, ಮಾಲಿನ್ಯ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂತಹ ಗಂಭೀರ ವಿಚಾರಗಳ ಚರ್ಚೆ ಹಾಗೂ ಪರಿಹಾರೋಪಾಯ ರೂಪಿಸಲು ಈ ರೀತಿಯ ಸಮಾವೇಶಗಳು ಸೂಕ್ತ ವೇದಿಕೆ ಎಂದು ಅಭಿಪ್ರಾಯಪಟ್ಟರು. [ಗಗನಕ್ಕೆ ಹಾರುತ್ತಾನೆ ಭಾರತದ ಮಾನವ]

ಇದು ಕಾಮಲ್‌ವೆಲ್ತ್‌ನ ಮೊದಲ ಸಮಾವೇಶ. ಇದು ೩೦ ದೇಶಗಳಿಂದ ಸುಮಾರು ೩೦೦ ವಿಜ್ಞಾನಿಗಳು ಹಾಗೂ ೭೦ ಪಿಎಚ್‌ಡಿ ಸಂಶೋಧಕರು ಭಾಗವಹಿಸಿದ್ದಾರೆ ಎಂದರು.

pranab1

ವಿಜ್ಞಾನ ಶಾಂತಿಗೆ ಪೂರಕವಾಗಿರಲಿ
ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ ಮಾತನಾಡಿ, ವಿಜ್ಞಾನದ ಬಳಕೆ ಶಾಂತಿ ಹಾಗೂ ಸೌಹಾರ್ದತೆಗೆ ಪೂರಕವಾಗಿರಬೇಕು. ಅದೇ ವಿಜ್ಞಾನದ ಧ್ಯೇಯ. ವಿಜ್ಞಾನವು ಇಂದು ಪ್ರತಿದಿನ ಹೊಸ ರೂಪ ತಾಳುತ್ತಿದೆ ಎಂದು ಅಭಿಪ್ರಾಯಪಟ್ಟರು. [ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ]

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಮಾತನಾಡಿ, ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ನಾವು ವೈಜ್ಞಾನಿಕ ಸಂಶೋಧನೆಗಳತ್ತ ಗಮನ ಹರಿಸಬೇಕು ಎಂದರು.

ಕರ್ನಾಟಕ ರಾಜ್ಯಪಾಲ ವಾಜುಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಮಲ್‌ವೆಲ್ತ್‌ ಕಾರ್ಯದರ್ಶಿ ಕಮಲೇಶ್ ಶರ್ಮಾ, ರಾಯಲ್ ಸೊಸೈಟಿ ಉಪಾಧ್ಯಕ್ಷ ಪ್ರೊ. ಆಂಟನಿ ಚೇತನ್, ಡ್ಯೂಕ್ ಆಫ್ ಆರ್ಕ್ ಭಾಗವಹಿಸಿದ್ದರು.

English summary
Future of India is dependent on success of Science, Education, said President of India Sri Pranab Mukherjee. He was addressing the congress of scientists at JN Tata auditorium at a function organized by Indian Institute of Science in Bengaluru in association with Royal Society of London, Information and Technology dept of India on 25th November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X