ಮಾನವೀಯತೆ ಮರೆತ ಶೇಷಾದ್ರಿಪುರಂ ಪೊಲೀಸರು: ರಾತ್ರಿಯಿಡೀ ಪರದಾಡಿದ ಗರ್ಭಿಣಿ ಮಹಿಳೆ
ಬೆಂಗಳೂರು ಫೆಬ್ರವರಿ 21: ಸಿಲಿಕಾನ್ ಸಿಟಿ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಗರ್ಭಿಯೊಬ್ಬರು ಪರದಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆಯನ್ನೇ ಮರೆತ್ರಾ ಶೇಷಾದ್ರಿಪುರಂ ಪೊಲೀಸರು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಹೌದು.. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಳೆದ ದಿನ ರಾತ್ರಿ ತಡರಾತ್ರಿಯವರೆಗೂ ಗರ್ಭಿಣಿ ಮಹಿಳೆ ಪರದಾಡಿದ್ದಾಳೆ. ರಾತ್ರಿ 10 ಗಂಟೆವರೆಗೂ ಠಾಣೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯನ್ನು ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ನಿಯಮದ ಪ್ರಕಾರ ಗರ್ಭಿಣಿ ಮಹಿಳೆಯನ್ನು ಸಂಜೆ ಆರು ಗಂಟೆ ಒಳಗೆ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಬೇಕು.

ಆದರೆ ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿಯೇ ಪೊಲೀಸರು ಗರ್ಭಿಣಿಯನ್ನು ಇರಿಸಿಕೊಂಡಿದ್ದಾರೆ. ರಾತ್ರಿ 10 ಗಂಟೆ ಬಳಿಕ ಪೊಲೀಸರಿಂದ ಸಖಿ ಕೇಂದ್ರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಲಾಗಿದೆ. ಹೀಗಾಗಿ ಪೊಲೀಸರ ಮೇಲೆ ಕರ್ತವ್ಯ ಲೋಪದ ಆರೋಪ ಹೋರಿಸಿದ ಕುಟುಬದಸ್ಥರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ನಡೆಯನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಸಂಜೆ ಆರು ಗಂಟೆ ಆದ ನಂತರ ಯಾವುದೇ ಮಹಿಳೆಯನ್ನು ಠಾಣೆಗೆ ಕರೆತರುವಂತಿಲ್ಲ. ಜೊತೆಗೆ ಠಾಣೆಯಲ್ಲಿ ಇಟ್ಟುಕೊಳ್ಳುವಂತಿಲ್ಲ ಎನ್ನುವ ನಿಯಮ ಇದೆ. ಆದರೆ ಇಲ್ಲಿ ಪೊಲೀಸರು ಆ ನಿಯಮವನ್ನು ಉಲ್ಲಂಘಿಸಿದ್ದಾರೆ. ಒಬ್ಬ ಗರ್ಭಿಣಿ ಅನ್ನೋದನ್ನು ನೋಡದೆ ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ ಅನ್ನೋದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆ ಗರ್ಭಿಣಿ ಯಾರು? ಯಾಕಾಗಿ ಪೊಲೀಸ್ ಠಾಣೆಗೆ ಬಂದಿದ್ದರು ಅನ್ನೋದನ್ನು ನೋಡುವುದಾದರೆ..
ಕೆಸಿ ಜನರಲ್ ಆಸ್ಪತ್ರೆಗೆ ಇಂಜೆಕ್ಷನ್ ಮಾಡಿಸಿಕೊಳ್ಳಲು ನಾಲ್ಕು ತಿಂಗಳ ಗರ್ಭಿಣಿ ತೆರಳಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಗರ್ಭಿಣಿಯ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದ್ದಾರೆ. ಆಗ ಈಕೆಗೆ ಇನ್ನೂ ಕೂಡ ವಯಸ್ಸು 18 ಎಂಬುದು ಗೊತ್ತಾಗಿದೆ. 18 ವರ್ಷಕ್ಕೂ ಮೊದಲೇ ಮದುವೆಯಾಗಿರುವುದು ಗೊತ್ತಾಗಿದೆ. ಅಂದರೆ ಈಕೆಗೆ ಬಾಲ್ಯವಿವಾಹವಾಗಿತ್ತು. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇದಾದ ಬಳಿಕ ಪೊಲೀಸರು ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿಯನ್ನು ಪೊಲೀಸ್ ಠಾಣೆಗೆ ಬರ ಹೇಳಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಪತಿ ಹಾಗೂ ಪತ್ನಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಮಧ್ಯಾಹ್ನ ಎರಡು ಗಂಟೆಗೆ ಕರೆದ ಪೊಲೀಸರು ರಾತ್ರಿ ಹತ್ತು ಗಂಟೆವರೆಗೂ ಅವರನ್ನು ಕೂರಿಸಿ ಕಾಲಹರಣ ಮಾಡಿದ್ದಾರೆ.
ಬೇಗ ವಿಚಾರಿಸದೇ ಮುಂದಿನ ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಿದ್ದಾರೆ. ಇದರಿಂದಾಗಿ ಗರ್ಣಭಿಣಿ ಕುಟುಂಬಸ್ಥರು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಪೊಲೀಸರು ಮಾನವೀಯತೆಯನ್ನು ಮರೆತುಬಿಟ್ರಾ ಎಂದು ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಕುಟುಂಬಸ್ಥರು ಆಕ್ರೋಶಗೊಂಡ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ಕೆಲಸವನ್ನು ಚುರುಕುಗೊಳಿಸಿದ್ದಾರೆ.












Click it and Unblock the Notifications