• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೋಸ್ಟ್ ಕಾರ್ಡ್ ಕನ್ನಡ ವೆಬ್ ಸೈಟ್ ವಿರುದ್ಧ ಪ್ರಕಾಶ್ ರೈ ದೂರು

|

ಬೆಂಗಳೂರು, ಏಪ್ರಿಲ್ 4: ಪೋಸ್ಟ್ ಕಾರ್ಡ್ ಕನ್ನಡ ವೆಬ್ ಸೈಟ್ ವಿರುದ್ಧ ನಟ ಪ್ರಕಾಶ್ ರೈ ಬುಧವಾರ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 66, ಸೆಕ್ಷನ್ 43(i), ಸೆಕ್ಷನ್ 2(1)(k) ಮತ್ತು ಸೆಕ್ಷನ್ 2(1)(o) ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

"ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ಪ್ರಕಾಶ್ ರೈಯಂಥವನು ಮೋದಿ-ಯೋಗಿಗೆ ಹೇಳುವಷ್ಟು ಯೋಗ್ಯತೆ ಇರುವವನೆ?" ಹಾಗೂ "ಮಾನ ಇಲ್ಲದವನಿಂದ ಮಾನನಷ್ಟ ಮೊಕದ್ದಮೆ ದಾಖಲು" ಎಂಬ ಅವಹೇಳನಕಾರಿ ಲೇಖನವನ್ನು ಪೋಸ್ಟ್ ಕಾರ್ಡ್ ವೆಬ್ ಸೈಟ್ ನಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಬರೆಯಲಾಗಿತ್ತು ಎಂದು ಆರೋಪಿಸಲಾಗಿದೆ.

ಸುಳ್ಳು ಸುದ್ದಿ ಆರೋಪ: 'ಪೋಸ್ಟ್ ಕಾರ್ಡ್' ಮಹೇಶ್ ವಿಕ್ರಂ ಹೆಗ್ಡೆ ಬಂಧನ

ಆ ಲೇಖನಗಳನ್ನು ತಪಸ್ವಿ ಹಾಗೂ ಚೇಕಿತಾನ್ ಎಂಬ ಹೆಸರುಗಳಲ್ಲಿ ಬರೆಯಲಾಗಿತ್ತು. ಆ ವೆಬ್ ಸೈಟ್ ನ ವಿಳಾಸವಾಗಲೀ, ಲೇಖನ ಬರೆದವರ ಮಾಹಿತಿಯಾಗಲೀ ಈ ವರೆಗೆ ಲಭ್ಯವಾಗಿರಲಿಲ್ಲ. ಎಲ್ಲ ಪ್ರಯತ್ನದ ನಂತರವೂ ವೆಬ್ ಸೈಟ್ ನ ಮಾಲೀಕರು ಹಾಗೂ ಲೇಖಕರ ವಿಳಾಸ ಪತ್ತೆ ಮಾಡಲು ಆಗಿರಲಿಲ್ಲ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.

ನನ್ನ ವಿರುದ್ಧವಾದ ಆಧಾರರಹಿತ ಹಾಗೂ ಅವಹೇಳನಕಾರಿ ಮತ್ತು ವಿಶ್ವಾಸಾರ್ಹವಲ್ಲದ ಲೇಖನಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗಿದೆ. ಇದು ಸುಳ್ಳು ಸುದ್ದಿ ಹರಡುವುದಾಗಿದೆ. ಎಫ್ ಐಆರ್ ದಾಖಲಿಸಿ, ಇಂಟರ್ ನೆಟ್ ನಿಂದ ಈ ಲೇಖನಗಳನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ ಪ್ರಕಾಶ್ ರೈ.

ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕ ವಿಕ್ರಂ ಹೆಗ್ಡೆಯವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ವೆಬ್ ಸೈಟ್ ನಲ್ಲಿ ಜೈನ ಮುನಿ ಮೇಲೆ ಹಲ್ಲೆ ಎಂಬ ಸುದ್ದಿ ಪ್ರಕಟಿಸಿದ್ದರು.

ಆದರೆ ಜೈನ ಮುನಿ, ನಂಜನಗೂಡಿನಲ್ಲಿ ಅಪಘಾತದಿಂದ ಗಾಯಗೊಂಡಿದ್ದು, ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿರಲಿಲ್ಲ ಎಂದು ಗಫಾರ್ ಬೇಗ್ ಎಂಬುವವರು ಕ್ರೈಂ ಸೆಲ್ ಗೆ ನೀಡಿದ್ದ ದೂರಿನ ಮೇಲೆ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor Prakash Rai registered FIR against Postcard Kannada website for publishing derogatory and baseless news about him. Complaint registered under various section of IT act 2000 in Cubbon park police station, Bengaluru on April 4th, Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more