ಜಯನಗರಕ್ಕೆ ವಿಜಯಕುಮಾರ್ ಸಹೋದರ ಪ್ರಹ್ಲಾದ್ ಬಾಬು ಬಿಜೆಪಿ ಅಭ್ಯರ್ಥಿ
Recommended Video

ಬೆಂಗಳೂರು, ಮೇ 22: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಬಿ.ಎನ್. ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು (ಬಿ.ಎನ್. ಪ್ರಹ್ಲಾದ್) ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಅನುಕಂಪದ ಅಲೆಯಲ್ಲಿ ಕ್ಷೇತ್ರ ಉಳಿಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ.
ಪ್ರಹ್ಲಾದ್ ಬಾಬು ಆಯ್ಕೆಗೆ ಜಯನಗರ ಕ್ಷೇತ್ರದ ಬಿಜೆಪಿಯ ಹಾಲಿ ಮತ್ತು ಮಾಜಿ ಕಾರ್ಪೊರೇಟರ್‌ಗಳು ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ರಹಸ್ಯ ಸಭೆ ನಡೆಸಿದ್ದ ಸಿ.ಕೆ.ರಾಮಮೂರ್ತಿ, ಎನ್.ನಾಗರಾಜ್, ಎಸ್.ಕೆ.ನಟರಾಜ್, ಸೋಮಶೇಖರ್, ಗೋವಿಂದನಾಯ್ಡು ಅವರು ಬಹುರಂಗವಾಗಿಯೇ ತಮ್ಮಲ್ಲೇ ಯಾರಿಗಾದರೂ ಜಯನಗರದ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು.
ಇದೀಗ ಬಿಜೆಪಿ ಕಾರ್ಪೊರೇಟರ್ ಗಳ ಬೇಡಿಕೆಗೆ ಮನ್ನಣೆ ನೀಡದ ಬಿಜೆಪಿ ಪ್ರಹ್ಲಾದ್ ಬಾಬು ಅವರಿಗೇ ಟಿಕೆಟ್ ನೀಡಿದೆ.

ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಪರವಾಗಿ ರಾಮಲಿಂಗಾ ರೆಡ್ಡಿ ಪುತ್ರ ಸೌಮ್ಯ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿಯೂ ಇಲ್ಲಿ ಸ್ಪರ್ಧೆಯಲ್ಲಿದ್ದಾರೆ
ಮೇ 12ರಂದು ನಡೆಯಬೇಕಿದ್ದ ಜಯನಗರ ಚುನಾವಣೆ ಬಿ.ಎನ್. ವಿಜಯಕುಮಾರ್ ನಿಧನದಿಂದ ಮುಂದಕ್ಕೆ ಹೋಗಿತ್ತು. ಜೂನ್ 11ರಂದು ಜಯನಗರ ಚುನಾವಣೆ ನಡೆಯಲಿದ್ದು ಜೂನ್ 16 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications