Power cut: ಬೆಂಗಳೂರಿನ ಇಂತೆಲ್ಲಾ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಕರೆಂಟ್ ಇರಲ್ಲ
ಬೆಂಗಳೂರು ಆಗಸ್ಟ್ 30: ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಆಗಸ್ಟ್ 31ರಂದು ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ಬೆಸ್ಕಾಂ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆಗಸ್ಟ್ 30- 31ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳೀಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾ.ಪಂ, ಹರೇಬೊಮನಹಳ್ಳಿ,ಲಕ್ಕೇನಹಳ್ಳಿ, ದೊಡ್ಡೇರಿ, ಕರದಳ್ಳು, ಕೋಡಿಹಳ್ಳಿ, ಬಿಲಂಕೋಟೆ ಏರಿಯಾ, ನಾನ್ವಿಕೆರೆ, ಕಲ್ಲಹಳ್ಳಿ, ಗುಂಗುರಮಲೆ, ಅಂಚೆಕೊಪ್ಪಲು, ಜಿ.ಪಂ.ಮಿತ್ರ, ಕಂದಿಕೆರೆ, ಅಜ್ಜಿಗೆಡ್ಡೆ, ಸದರಹಳ್ಳಿ, ಉಪ್ಪಿಕಟ್ಟೆ, ಮತ್ತಿಟ್ಟ, ಹಂದನಕೆರೆ, ಕೊರ್ಗೆರೆ, ನೂಂಕೆರೆ, ಟಿ.ನೂಂಕೆರೆ, ಟಿ. ಎಲ್ಲಾ 11 ಕೆವಿ ಚೇಳೂರು, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ ಉಪಕೇಂದ್ರಗಳ ಫೀಡರ್ಗಳು ಹಾಗೂ ಹರೇನಹಳ್ಳಿ, ಸಿಂಗದಹಳ್ಳಿ, ಬಾರ್ಸಿಡ್ಲಹಳ್ಳಿ, ಕತ್ರಿಕೆಹಾಳ್, ಗೈರೆಹಳ್ಳಿ, ಸಿದ್ದರಾಮನಗರ, ಹೆಸರಳ್ಳಿ, ಶೆಟ್ಟಿಕೆರೆ, ಕುಪ್ಪೂರು, ತಮಡಿಹಳ್ಳಿ, ಹುಳಿಯಾರ್, ಯೆಳ್ನಾಡು ಕಡೆ ಇಂದು (ಆಗಸ್ಟ್ 30) ಬುಧವಾರ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.
ನಾಳೆ (ಆಗಸ್ಟ್ 31) ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಇನ್ನೂ ನಾಳೆ ಅಂದರೆ ಆಗಸ್ಟ್ 31ರಂದು ಬೆಂಗಳೂರಿನ ಆನಂದ ನಗರ, ತಿರುಮಲಾಪುರ, ಟಿ ಬೇಗೂರು, ಹುಚ್ಚೇಗೌಡನಪಾಳ್ಯ, ವೀರನಂಜಿಪುರ, ಬೂದಿಹಾಳ್ ಗ್ರಾಮ ಪಂಚಾಯಿತಿ, ಕಾಚನಹಳ್ಳಿ, ಯರಮಂಚನಹಳ್ಳಿ, ಮಂಡಿಗೆರೆ ಮತ್ತು ಬಸವೇಶ್ವರ ನಗರ, ಬೊಮ್ಮನಹಳ್ಳಿ, ಬಾರಾಡಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.












Click it and Unblock the Notifications