Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಸಂಜೆ 5 ಗಂಟೆಯವರೆಗೂ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಇಂದು (ಅಕ್ಟೋಬರ್ 25) ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ಉಪಕೇಂದ್ರ ವ್ಯಾಪ್ತಿಯಲ್ಲಿ ಅಕ್ಟೋಬರ್ 25ರ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಮಲ್ಲೇಶ್ವರ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದಾರಪಾಳ್ಯ, ದಿವಾನರ, ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್‌ಎಂಟಿ ಮುಖ್ಯ ರಸ್ತೆ, ಶರೀಫ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಇನ್ನು ಕಬ್ಬನ್ ಪೇಟೆ 5ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಚೌಳಗಳ್ಳಿ ಎ, ಬಿ, ಸಿ, ಡಿ ಗಲ್ಲಿ, ಆರ್‌ಬಿಐ, ನೃಪತುಂಗ ರಸ್ತೆ, ಯುವಿಸಿಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಮಾರ್ಥಾಸ್ ಆಸ್ಪತ್ರೆ, ಸುಂಕಲ್‌ಪೇಟೆ, ನಗತ್‌ಪೇಟೆ, ಕೆಎಎಸ್ ಲೇನ್ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಇದೇ ವೇಳೆ 'ಸಿ' ಲೇನ್ 'ಎ' ಲೇನ್ 'ಡಿ' ಲೇನ್, 13ನೇ ಅಡ್ಡರಸ್ತ, 14ನೇ ಅಡ್ಡರಸ್ತೆ, ಕಬ್ಬನ್ ಪೇಟೆ 15ನೇ ಅಡ್ಡರಸ್ತೆ, ಕೆಜಿ ರಸ್ತೆಯ ಒಂದು ಭಾಗ, ಒಟಿಸಿ ರಸ್ತೆ, ಶಾರದಾ ರಂಗಮಂದಿರದ ಹಿಂಭಾಗ, ಎಸ್ಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ, ಆದರ್ಶ ಶಂಗ್ರಿಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಸೂಚನೆ ನೀಡಿದೆ.
ಜೋಗುಪಾಳ್ಯ, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ಗೌತಂಪುರ, ಕೇಂಬ್ರಿಜ್ ರಸ್ತೆ, ಹಲಸೂರು ರಸ್ತೆ, ಕೆನರಾ ಬ್ಯಾಂಕ್, ಟ್ರಿನಿಟಿ ಸರ್ಕಲ್, ಎಚ್ಎಎಲ್ 2ನೇ ಹಂತ, ಮದ್ರಾಸ್ 1ನೇ ಹಂತ ಬೆನ್ನಿಗನ ಹಳ್ಳಿ, ಎ ನಾರಾಯಣಪುರ, ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶ್ ನಗರ, ಉದಯನಗರ, ಬೈರಸಂದ್ರ, ಸಿವಿ ರಾಮನಗರ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ವರ್ತೂರು ರಸ್ತೆ, ನಾಗವಾರಪಾಳ್ಯ ನಾಗಪ್ಪ ರೆಡ್ಡಿ ಲೇಔಟ್, ಅಬ್ಬಯ್ಯ ಲಾಔಟ್.
ಧರ್ಮೋಹಲ್ಲಾ, ಉದಯನಗರ ನಗರ, ಗಂಗಪ್ಪ ಲೇಔಟ್, ನಾಗವರಪಾಳ್ಯ ಕುವೆಂಪು ಬೀದಿ, ವಿವೇಕಾನಂದ ಬೀದಿ, ಕೊಂಡಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ, ಅಯ್ಯಪ್ಪ ದೇವಸ್ಥಾನ ರಸ್ತೆ ಏರ್ ಫೋರ್ಸ್ ಕ್ವಾರ್ಟರ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ. ಇನ್ನೂ ಯಾವ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆಯೋ ಅಲ್ಲಿನ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮೊಬೈಲ್, ಬ್ಯಾಟರಿ, ಲ್ಯಾಪ್‌ಟ್ಯಾಪ್ ಸೇರಿದಂತೆ ಇನ್ನಿತರೆ ವಿದ್ಯುತ್ ಸಾಧನಗಳನ್ನು ಮುಂಜಾಗ್ರತಾ ಕ್ರಮವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವಂತೆ ಸೂಚನೆ ನೀಡಿದೆ.












Click it and Unblock the Notifications