Bengaluru Power cut: ಈ ವಾರಾಂತ್ಯಕ್ಕೆ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ- ಎಲ್ಲಿ? ಯಾವಾಗ?
ರಾಜ್ಯದಲ್ಲಿ ತೀರ್ವ ಬರಗಾಲದಿಂದಾಗಿ ವಿದ್ಯುತ್ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವಾರಾಂತ್ಯ ಮತ್ತು ತಿಂಗಳಾಂತ್ಯದವರೆಗೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ.
ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕದ ನಿರ್ವಹಣೆ, ಮರದ ಟ್ರಿಮ್ಮಿಂಗ್, ಹದಗೆಟ್ಟ ಕಂಬಗಳ ಬದಲಾವಣೆ, ಭೂಗತ ಕೇಬಲ್ ಹಾನಿ ಸರಿಪಡಿಸುವಿಕೆ ಇತ್ಯಾದಿ ಕಾರಣಗಳಿಗಾಗಿ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಘೋಷಣೆ ಮಾಡಿದೆ.

ನಗರದ ಕೆಲ ಪ್ರದೇಶಗಳಲ್ಲಿ ಇಂದಿನಿಂದ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್ ವ್ಯತ್ಯಯವಾಗಲಿದೆ. ಅದಕ್ಕಾಗಿ ಸಾರ್ವಜನಿಕರು ಸಹಕರಿಸುವಂತೆ ಹಾಗೂ ಮುಖ್ಯ ಕೆಲಸಗಳನ್ನು ಮೊದಲೇ ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ವಿದ್ಯುತ್ ಕಡಿತವನ್ನು ನೋಡುವ ಸಾಧ್ಯತೆಯಿರುವ ಪ್ರದೇಶಗಳು ಮತ್ತು ದಿನದ ಪಟ್ಟಿ ಇಲ್ಲಿದೆ:
ಅಕ್ಟೋಬರ್ 27, ಶುಕ್ರವಾರ:
ಚಂದ್ರಾ ಲೇಔಟ್ 80 ಅಡಿ ರಸ್ತೆ, ಪಾಲಿಕೆ ಸೌಧ, ಜ್ಯೋತಿ ನಗರ, ಆದಾಯ ತೆರಿಗೆ ಲೇಔಟ್, ಚಂದ್ರಾ ಲೇಔಟ್ 1 ಮತ್ತು 2ನೇ ಹಂತ, ಬಸವೇಶ್ವರ ಲೇಔಟ್ ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಕ್ಟೋಬರ್ 29, ಭಾನುವಾರ:
ಗುಬ್ಬಣ್ಣ ಎಸ್ಟೇಟ್, 6ನೇ ಬ್ಲಾಕ್, ರಾಜಾಜಿನಗರ, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಕೈಗಾರಿಕಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್ ವ್ಯತ್ಯಯವಾಗಲಿದೆ.
ಅ.30-31ರವರೆಗೆ:
Bcc ಲೇಔಟ್, Bcc ಲೇಔಟ್ ಬಸ್ ಸ್ಟಾಪ್ ಬ್ಯಾಕ್ ಸೈಡ್, ಮೈಕೋ ಲೇಔಟ್, ವಿನಾಯಕ ಆಸ್ಪತ್ರೆ ಹಿಂಭಾಗದ ಚಂದ್ರಾ ಲೇಔಟ್, ಗುಡ್ ವಿಲ್ ಅಪಾರ್ಟ್ಮೆಂಟ್, ಬಿನ್ನಿ ಲೇಔಟ್, ಅತ್ತಿಗುಪ್ಪೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್ ಇರುವುದಿಲ್ಲ.
ಒಟ್ಟು ಅ.27-30ವರೆಗೆ:
ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ದೊಡ್ದಅಗ್ರಹಳ್ಳಿ, ಸೀಬಿದಅಗ್ರಹಳ್ಳಿ, ಡಿ. ರಾ, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸಿಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು
ಹಲವಾರು ಜಿಲ್ಲೆಗಳಲ್ಲಿ ತೀವ್ರ ಬರಗಾಲದ ಛಾಯೆ ಆವರಿಸಿದ್ದು ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಈ ಬಾರಿ ಬೇಸಿಗೆಯಲ್ಲಿ ಪರಿಸ್ಥಿತಿ ಹೆಚ್ಚು ಹದಗೆಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಪ್ರಸ್ತುತ ಸುಮಾರು 1.7-2 ಲಕ್ಷ ಟನ್ ಕಲ್ಲಿದ್ದಲು ಇದೆ. ಇದನ್ನು ಪ್ರತಿದಿನ ಮೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ. ಕರ್ನಾಟಕವು ಒಡಿಶಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದ ದಿನಕ್ಕೆ 13-14 ರೇಕ್‌ಗಳಷ್ಟು ಕಲ್ಲಿದ್ದಲನ್ನು ಪಡೆಯುತ್ತಿದೆ (ಪ್ರತಿ ರೇಕ್‌ಗೆ ಸುಮಾರು 4,000 ಟನ್). ರಾಜ್ಯವು ಪ್ರತಿದಿನ 2,118MW ಉಷ್ಣ ವಿದ್ಯುತ್ ಉತ್ಪಾದಿಸುತ್ತಿದೆ. ಅಲ್ಲದೆ, ಜಲ ವಿದ್ಯುತ್ ಸೇರಿದಂತೆ 5,919MW ವಿದ್ಯುತ್ ಉತ್ಪಾದಿಸುತ್ತಿದೆ.
ಈ ವರ್ಷ ಯಾವುದೇ ಥರ್ಮಲ್ ಸ್ಟೇಷನ್‌ಗಳನ್ನು ಮುಚ್ಚಿಲ್ಲ. ಈಗ, ಮಾನ್ಸೂನ್ ಮಳೆ ಸರಿಯಾಗಿ ಆಗದ ಕಾರಣ ಉಷ್ಣ ಶಕ್ತಿಯ ಬೇಡಿಕೆ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಸ್ಥಾಪಿತ ಸಾಮರ್ಥ್ಯದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಕೋವಿಡ್ ಬಳಿಕ ಆರ್ಥಿಕ ಬೆಳವಣಿಗೆಗಳು ಹೆಚ್ಚಾಗಿದ್ದು, ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ. ಆದರೆ, ಸೂಕ್ತ ಮಳೆಯಾಗದ ಕಾರಣ ನವೀಕರಿಸಬಹುದಾದ ಇಂಧನದ ಉತ್ಪಾದನೆಯಲ್ಲಿ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications