ಬೆಂಗಳೂರಿನ ರಸ್ತೆ ಗುಂಡಿಗೆ ಮಹಿಳೆ ಬಲಿ

ಬೆಂಗಳೂರು, ಅಕ್ಟೋಬರ್ 08: ನಗರದ ಅತ್ಯಂತ ವಾಹನ ದಟ್ಟಣೆ ಹೊಂದಿರುವ ಮೈಸೂರು ರಸ್ತೆಯ ಗುಂಡಿಗೆ ಮಹಿಳೆಯೊಬ್ಬರು ಭಾನುವಾರ ಬಲಿಯಾಗಿದ್ದಾರೆ.

ಕಳೆದ ವಾರವಷ್ಟೇ ಮೈಸೂರು ಫ್ಲೈಓವರ್‌ ಮೇಲಿನ ರಸ್ತೆ ಗುಂಡಿಗೆ ದಂಪತಿ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Potholes claims life of scooter borne woman at Nayandahalli Junction

ರಸ್ತೆಗುಂಡಿ ತಪ್ಪಿಸಲು ಹೋದಾಗ ಹೋಂಡಾ ಆಕ್ಟಿವಾದ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ, ಹಿಂಬದಿಯಿಂದ ಬರುತ್ತಿದ್ದ ಲಾರಿ ಹರಿದು ಮಹಿಳೆ ಸಾವನಪ್ಪಿದ್ದಾರೆ. ವಾಹನ ಚಲಾಯಿಸುತ್ತಿದ್ದ ಯುವಕ ರವಿಕುಮಾರ್ ಎಂಬಾತ ಬಚಾವಾಗಿದ್ದಾನೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿರುವ ಬಿಬಿಎಂಪಿ ಪ್ರತಿ ವಾರದಲ್ಲಿ ಇಂತಿಷ್ಟು ಮುಂಚುವ ಯೋಜನೆ ಹಾಕಿಕೊಂಡಿದ್ದಾರೆ. ವಾರದೊಳಗೆ ಎಲ್ಲಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನೂತನ ಮೇಯರ್ ಸಂಪತ್ ರಾಜ್ ಘೋಷಿಸಿದ್ದಾರೆ.

Potholes claims life of scooter borne woman at Nayandahalli Junction

ಈ ನಡುವೆ ರಸ್ತೆ ಗುಂಡಿ ಮುಚ್ಚುವುದರ ಹಿಂದೆ, ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಿದರೆ ಕೋಟ್ಯಂತರ ರೂಪಾಯಿ ಅವ್ಯವಹಾರ ಬಯಲಿಗೆ ಬರಲಿದೆ ಎಂದು ಬಿಜೆಪಿ ನಾಯಕ ಎನ್. ಆರ್ ರಮೇಶ್ ಆರೋಪಿಸಿದ್ದಾರೆ. ರಸ್ತೆ ಗುಂಡಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+