• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ವಲಯಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ ಪಾಸಿಟಿವಿಟಿ ದರ

|
Google Oneindia Kannada News

ಬೆಂಗಳೂರು, ಜೂನ್ 8: ಕೊರೊನಾವೈರಸ್‌ನ ಎರಡನೇ ಅಲೆಯ ಅಬ್ಬರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದೆ. ಪಾಸಿಟಿವಿಟಿ ದರ ಕೂಡ ಬೆಂಗಳೂರಿನಲ್ಲಿ ಕನಿಷ್ಟ ಮಟ್ಟಕ್ಕೆ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್‌ಲಾಕ್ ಪ್ರಕ್ರಿಯೆ ಆರಂಭಿಸುವ ಸಿದ್ಧತೆಯಲ್ಲಿದೆ. ಆದರೆ ಮೇಲ್ನೋಟಕ್ಕೆ ಕಂಡು ಬರುವ ಅಂಕಿಅಂಶಗಳನ್ನು ನೋಡಿ ಸಾರ್ವಜನಿಕರು ಹಾಗೂ ಸರ್ಕಾರ ಸಂಪೂರ್ಣವಾಗಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆಲ ವಲಯಗಳಲ್ಲಿ ಪಾಸಿಟಿವಿಟಿ ದರ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಅಂಕಿಅಂಶಗಳು ಹೇಳುತ್ತಿವೆ.

ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಂಗಳೂರಿನ ಕೆಲ ವಲಯಗಳು ಇನ್ನೂ ಕೂಡ ಕೊರೊನಾವೈರಸ್‌ನ ಆತಂಕದಿಂದ ದೂರವಾದಂತೆ ಕಾಣಿಸುತ್ತಿಲ್ಲ. ಬೆಂಗಳೂರಿನ ನಾಲ್ಕು ವಲಯಗಳಾದ ಬೊಮ್ಮನಹಳ್ಳಿ, ಮಹಾದೇವಪುರ, ಆರ್‌ಆರ್‌ನಗರ ಹಾಗೂ ಪಶ್ಚಿಮ ವಲಯಗಳಲ್ಲಿ ಪಾಸಿಟಿವಿಟಿ ದರ ಶೇಕಡಾ ಆರು ಅಥವಾ ಅದಕ್ಕಿಂತ ಹೆಚ್ಚಾಗಿಯೇ ಇದೆ. ಬಿಬಿಎಂಪಿ ನೀಡಿದ ಅಧಿಕೃತ ಅಂಕಿಅಂಶಗಳು ಈ ಮಾಹಿತಿಯನ್ನು ನೀಡುತ್ತಿದೆ. ಬಿಬಿಎಂಪಿ ನೀಡಿದ ಅಂಕಿಅಂಶಗಳ ಪ್ರಕಾರ ಮೇ 29 ರಿಂದ ಜೂನ್ 7ರವರೆಗೆ ಈ ವಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದು ತಿಳಿಸುತ್ತಿದೆ.

ಕೊರೊನಾ ನಂತರ ಚರ್ಮದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ...ಕೊರೊನಾ ನಂತರ ಚರ್ಮದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ...

ಪೂರ್ವ ವಲಯವನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಟೆಸ್ಟ್‌ನ ಪ್ರಮಾಣವೂ ಹೆಚ್ಚಾಗಿಯೇ ಇದೆ ಎಂದು ಈ ವರದಿಗಳ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. 44 ವಾರ್ಡ್‌ಗಳನ್ನು ಹೊಂದಿರುವ ಈ ವಲಯದಲ್ಲಿ ದಿನಕ್ಕೆ ಒಂದು ವಾರ್ಡ್‌ನಲ್ಲಿ ಸರಾಸರಿ 173 ಪರೀಕ್ಷೆಗಳು ಮಾತ್ರವೇ ನಡೆಯುತ್ತಿದೆ. ಮತ್ತೊಂದೆಡೆ ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚಿನ ಕೊರೊನಾ ಪರೀಕ್ಷೆಗಳು ನಡೆಯುತ್ತಿವೆ. ಇಲ್ಲಿ ವಾರ್ಡ್‌ ಒಂದರಲ್ಲಿ 747 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ದಾಖಲೆಗಳ ಪ್ರಕಾರ ಬೊಮ್ಮನಹಳ್ಳಿಯಲ್ಲಿ ಪಾಸಿಟಿವಿಟಿ ದರ 6.2 ಶೇಕಡಾ ಇದೆ.

ಇನ್ನು ಅನ್‌ಲಾಕ್ ಪ್ರಕ್ರಿಯೆಗೆ ನಗರದ ಒಟ್ಟು ಪಾಸಿಟಿವಿಟಿ ದರವನ್ನು ಪರಿಗಣನೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ಕೆಲ ವಲಯಗಳು ಇತರ ವಲಯಗಳಿಗಿಂತ ಹೆಚ್ಚಿನ ದರವನ್ನು ಹೊಂದಿರುತ್ತದೆ. ಆದರೆ ಒಟ್ಟಾರೆ ನಗರದ ಪಾಸಿಟಿವಿಟಿ ದರವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

Recommended Video

   WTC ಫೈನಲ್ ಪಂದ್ಯದ ನಿಯಮಗಳೇನು | Oneindia Kannada

   ಇನ್ನು ಅಂಕಿಅಂಶಗಳನ್ನು ಗಮನಿಸಿದರೆ ಪಾಸಿಟಿವಿಟಿ ದರ 4ಕ್ಕಿಂತ ಕಡಿಮೆಯಿರುವ ವಲಯಗಳಲ್ಲಿ ಈ ಕೆಲ ಅಂಶಗಳು ಸಾಮಾನ್ಯವಾಗಿ ಅರಿವಿಗೆ ಬರುತ್ತದೆ. ಇಲ್ಲಿನ ವಾರ್ಡ್‌ಗಳಲ್ಲಿ ಸರಾಸರಿ ಪರೀಕ್ಷೆಗಳು ಕಡಿಮೆ ಪ್ರಮಾಣದಲ್ಲಿ ನಡೆದಿವೆ. ದಕ್ಷಿಣ ವಲಯದ ಪ್ರತಿ ವಾರ್ಡ್‌ನಲ್ಲಿ ಕಳೆದ 10 ದಿನಗಳಲ್ಲಿ ದಿನಕ್ಕೆ ಸರಾಸರಿ 185 ಪರೀಕ್ಷೆಗಳನ್ನು ಮಾತ್ರವೇ ನಡೆಸಲಾಗುತ್ತಿದೆ. ಆದರೆ ಈ ವಲಯದಲ್ಲಿ ನಿತ್ಯವೂ ಸರಾಸರಿ 242 ಪ್ರಕರಣಗಳು ಪತ್ತೆಯಾಗುತ್ತಿವೆ.

   English summary
   Some Bengaluru zones still have a high percentage of Positivity rate. know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X