• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರ್ ನಲ್ಲಿ ಮೇಕ್ ಇನ್ ಇಂಡಿಯಾ, ಶೇಕ್ ಇನ್ ಇಂಡಿಯಾ

By Mahesh
|

ಬೆಂಗಳೂರು, ಆಗಸ್ಟ್ 04: ಸರಿ ಸುಮಾರು 857 ಅಶ್ಲೀಲ ಜಾಲತಾಣಗಳನ್ನು ಸ್ಥಗಿತಗೊಳಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್, ಮೀಮ್ಸ್, ಜೋಕ್ಸ್ ಹರಿದಾಡುತ್ತಿವೆ. ಅತಿ ಹೆಚ್ಚು ಬಳಕೆಯಾದ ವಾಕ್ಯ : Forget about make in India, Now we can't even SHAKE in India!!

ಮಾಹಿತಿ ತಂತ್ರಜ್ಞಾನ ಇಲಾಖೆ 857 ಅಶ್ಲೀಲ ಜಾಲತಾಣಗಳ ಐಪಿ ಅಡ್ರೆಸ್ ಗೆ ಕತ್ತರಿ ಹಾಕುವಂತೆ ಅಂತರ್ಜಾಲ ಸೇವೆ ಒದಗಿಸುವ ಕಂಪೆನಿಗಳಿಗೆ ಸೂಚಿಸಿದ್ದಲ್ಲದೆ ಅಂತರ್ಜಾಲದಲ್ಲಿನ ಸರಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಓಂಬುಡ್ಸ್‌ಮನ್ ನೇಮಕಕ್ಕೆ ಚಿಂತನೆ ನಡೆಸಿದೆ. [ಪೋರ್ನ್ ಬ್ಯಾನ್ ಸರ್ಕಾರಕ್ಕೆ ಆಗಲಿದೆ ಬೇನೆ: ಆರ್ ಜಿವಿ]

ತಾತ್ಕಾಲಿಕ ಕ್ರಮ: ಅದರೆ, ಈ ಪ್ರಕರಣ ಇನ್ನೂ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಕೋರ್ಟ್ ಆದೇಶ ಹೊರಬೀಳುವ ತನಕಇದೊಂಡು ತಾತ್ಕಾಲಿಕ ಕ್ರಮವಾಗಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. [ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್]

ಸರ್ಕಾರದ ಮುಖ್ಯ ಉದ್ದೇಶ ರಿವೇಂಜ್ ಪೋರ್ನ್ ಹಾಗೂ ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ಜಾಲತಾಣ ಬೆಳೆಯುವುದನ್ನು ತಡೆಗಟ್ಟುವುದಾಗಿದೆ ಎಂದಿದೆ. ಇವೆಲ್ಲ ಹಾಗಿರಲಿ, ಸದ್ಯಕ್ಕೆ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಕೆಲ ಟ್ವೀಟ್ಸ್ ನೋಡಿ ಓದಿ ಆನಂದಿಸಿ...

ಸರ್ಕಾರದ ಆತುರದ ನಿರ್ಧಾರವೇ?

ಸರ್ಕಾರದ ಆತುರದ ನಿರ್ಧಾರವೇ?

ಸರ್ಕಾರದ ಆತುರದ ನಿರ್ಧಾರವೇ? ಅಥವಾ ಬರೀ ಎಚ್ಚರಿಕೆ ಗಂಟೆಯೇ? ಕ್ರೈಂ ತಡೆಗಟ್ಟಲು ಪೋರ್ನ್ ಬ್ಯಾನ್ ಮಾಡಿರುವ ಸರ್ಕಾರ ಈ ಬಗ್ಗೆ ಚರ್ಚೆ, ಚಿಂತನೆ ಆರಂಭಿಸಿದೆ. ಎನ್‌ಜಿಒಗಳು, ನಾಗರಿಕ ಸಮಾಜ,ಹೆತ್ತವರ ಗುಂಪುಗಳು,ಮಕ್ಕಳ ಸಲಹೆಗಾರರು, ಅಂತರ್ಜಾಲ ಸೇವಾ ಸಂಸ್ಥೆಗಳ ಸಲಹೆ ಕೇಳುತ್ತಿದೆ.

ಕಾಂಗ್ರೆಸ್ ಕಂಡರೆ ಏಕಿಷ್ಟು ಕೋಪ?

ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಕಂಡರೆ ಏಕಿಷ್ಟು ಕೋಪ? ಕೈ ಜೊತೆ ಸಂಬಂಧವಿರುವುದೆಲ್ಲವನ್ನು ಬ್ಯಾನ್ ಮಾಡಿದರೆ ಕೆಲಸ ಮಾಡುವುದು ಹೇಗೆ?

ಸವಿತಾ ಬಾಬಿ ಕೂಡಾ ಪೋರ್ನ್ ಬೇಡ ಅಂದ್ಳತೆ

ಸವಿತಾ ಬಾಬಿ ಕೂಡಾ ಪೋರ್ನ್ ಬೇಡ ಅಂದ್ಳತೆ ನಿಮಗಿದು ಗೊತ್ತಿತ್ತಾ?

ಇವತ್ತು ನಿಜವಾಗಿಯೂ ಪ್ರಜಾಪ್ರಭುತ್ವ ಸತ್ತು ಹೋಗಿದೆ

ಇವತ್ತು ನಿಜವಾಗಿಯೂ ಪ್ರಜಾಪ್ರಭುತ್ವ ಸತ್ತು ಹೋಗಿದೆ. ರಾಹುಲ್ ಗೆ ಈಗ ಫುಲ್ ಖುಷಿ ಛೋಟಾ ಭೀಮ್ ನೋಡಬಹುದು.

ಪೋರ್ನ್ ಬಗ್ಗೆ ಅಂಥಾ ಆಸಕ್ತಿ ಇಲ್ಲ ಆದರೆ,

ಪೋರ್ನ್ ಬಗ್ಗೆ ಅಂಥಾ ಆಸಕ್ತಿ ಇಲ್ಲ ಆದರೆ, ಈ ರೀತಿ ನೈತಿಕ ಪೊಲೀಸ್ ಗಿರಿ ದುರದುಷ್ಟಕರ.

ಜನ ಸಾಮಾನ್ಯರ ಬದುಕಿನೊಳಗೆ ಇಣುಕಿದ ಸರ್ಕಾರ

ಜನ ಸಾಮಾನ್ಯರ ಬದುಕಿನೊಳಗೆ ಇಣುಕಿದ ಸರ್ಕಾರ, ಯಾವ ಆಧಾರದ ಮೇಲೆ ನಿರ್ಧಾರ ಕೈಗೊಂಡಿದೆಯೋ.

ಆರ್ ಜಿವಿ ಮತ್ತೆ ಟ್ವೀಟ್ ಮಾಡಿದ್ದು ಹೀಗೆ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಪೋರ್ನ್ ಬ್ಯಾನ್ ಬಗ್ಗೆ ಟ್ವೀಟ್ ಮಾಡಿ, ಹುಷಾರು ನಿಮ್ಮ ಬೆಡ್ ರೂಮಿಗೆ ಸರ್ಕಾರ ಬರಬಹುದು.

ಪುಣೆಯ ಫಿಲಂ ಸಂಸ್ಥೆ ಮುಖ್ಯಸ್ಥನನ್ನು ಕರೆ ತಂದರು

ಪುಣೆಯ ಫಿಲಂ ಸಂಸ್ಥೆ ಮುಖ್ಯಸ್ಥ ಗಜೇಂದ್ರ ಚೌಹಾಣ್ ರನ್ನು ಟ್ವಿಟ್ಟ್ಟರ್ ಗೆ ಕರೆ ತಂದು ಗೇಲಿ ಮಾಡಿದ್ದು ಹೀಗೆ..

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government's decision to clamp down on porn sites across the country has not gone down well with Twitterati, with the ban becoming a top trending.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more